ಚಾಮರಾಜನಗರ: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಟ್ಟು ೧೮ ಅಧ್ಯಯನ ಪೀಠಗಳಿದ್ದು, ಅವುಗಳÀಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠವು ತುಂಬಾ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ.ಹೇಮಂತಕುಮಾರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಬಿನಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಾರಂಭ, ಮಂಟೇಸ್ವಾಮಿ ಮಹಾಕಾವ್ಯದ ೨೦ ಗಂಟೆಗಳ ಶ್ರವ್ಯ ಮತ್ತು ದೃಶ್ಯ ಸರಣಿ ಬಿಡುಗಡೆ, ಧರಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಪುಸ್ತಕ ಬಿಡುಗಡೆ ಹಾಗೂ ಕುಲಪತಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾಸಂಸ್ಥೆಗಳು ಯಾವಾಗಲೂ ಬೆಳಯುವಂತಹ ಸಂಸ್ಥೆಗಳು. ಆದ್ದರಿಂದಲೇ ಈ ಸ್ನಾತಕೋತ್ತರ ಕೇಂದ್ರಕ್ಕೆ ಇನ್ನೂ ಕೆಲವೇ ದಿನಗಳಲ್ಲಿ ವಿಜ್ಞಾನ ವಿಭಾಗ ಬರಲಿದೆ. ಈ ಭಾಗಕ್ಕೆ ಸರಿಹೊಂದುವAತಹ ಕೋರ್ಸ್ಗಳನ್ನು ತೆರೆದರೆ ಸೂಕ್ತ. ಈಗಿರುವ ಎಲ್ಲ ಕೋರ್ಸ್ಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಉದ್ಘಾಟನೆ ನೆರವೇರಿಸಿದ ಮಳವಳ್ಳಿಯ ಕಪ್ಪಡಿ ಕ್ಷೇತ್ರದ ಎಂ.ಎಲ್. ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಮಾತನಾಡಿ, ಈ ಮಂಟೇಸ್ವಾಮಿ ಅಧ್ಯಯನ ಪೀಠವು ಮಂಟೇಸ್ವಾಮಿ ಕಾವ್ಯಗಳನ್ನು ಡಿಜಿಟಲೀಕರಣ ಮಾಡಿ ಎಲ್ಲೆಡೆ ಹರಡುವಂತೆ ಮಾಡಬೇಕು. ಇದಕ್ಕೆ ನಮ್ಮ ಮಠದ ಸಹಕಾರವನ್ನು ಸಹ ನೀಡುತ್ತೇವೆ ಎಂದು ತಿಳಿಸಿದರು. ಮಾನಸ ಗಂಗೋತ್ರಿಯ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನAಜಯ್ಯ ಹೊಂಗನೂರು ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅನೇಕ ಪೀಠಗಳಿದ್ದರೂ ಸಹ ಮಂಟೇಸ್ವಾಮಿ ಪೀಠವು ಮಾತ್ರ ಸ್ಥಾಪನೆಗೊಂಡ ಒಂದೇ ವರ್ಷಕ್ಕೆ ಅತಿ ಹೆಚ್ಚು ಸಾಧನೆ ಮಾಡಿದೆ. ಅನೇಕ ಪುಸ್ತಕಗಳನ್ನು ಬಿಡುಗಡೆ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಕಬಿನಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಲಾಯಿತು. ಮಂಟೇಸ್ವಾಮಿ ಮಹಾಕಾವ್ಯದ ೨೦ ಗಂಟೆಗಳ ಶ್ರವ್ಯ ಮತ್ತು ದೃಶ್ಯ ಸರಣಿಯನ್ನು ಬಿಡುಗಡೆ ಮಾಡಲಾಯಿತು.
ದೆಹಲಿ ಕಣ್ಣೋಟ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಳೆದ ಒಂದೂವರೆ ತಿಂಗಳಿಂದ ನಡೆಸುತ್ತಿರುವ ಯುದ್ಧದಿಂದ ಉಂಟಾಗಿರುವ ಇಂಧನ ಮತ್ತು ಅನಿಲ…
ಕನ್ನಡದ ನಾಲ್ವರು ಖ್ಯಾತ ಕವಿಗಳು ತಮ್ಮ ಮೊದಲ ಕವಿತೆಯ ನೆನಪಲ್ಲಿ ಹೇಗೆ ಕಳೆದು ಹೋಗಿದ್ದಾರೆ ನೋಡಿ. ಬಹುಶಃ, ಮೊದಲ ಕವಿತೆ…
ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್…
ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ 21…
ಮಂಡ್ಯ : ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಹೊಳಲು ಗ್ರಾಮದ ವೃತ್ತದಲ್ಲಿ…
ಕೊಡಗಿನಲ್ಲಿ ಕಾಡುಪಾಲಾಗಿದ್ದ ಕೇರಳದ ಶರಣ್ಯ ಅನುಭವ ಕಥನ ನಾನು ಶರಣ್ಯ. ಕೇರಳದ ಕೋಝಿಕೋಡ್ ಜಿಲ್ಲೆಯ ನಾದಾಪುರಂನ ಯುವತಿ. ಕೊಚ್ಚಿಯಲ್ಲಿ ಐಟಿ…