ಜಿಲ್ಲೆಗಳು

ವನ್ಯಜೀವಿಗಳಿಗೆ ಮಗ್ಗಲು ಮುಳ್ಳಾದ ‘ಉರುಳು’

ನಿಲ್ಲದ ಬೇಟೆಗಾರರ ದುಷ್ಕೃತ್ಯ: ಅರಣ್ಯ ಇಲಾಖೆ ಬಿಗಿ ಪಹರೆಗೆ ಒತ್ತಡ್ಙ

 ವರದಿ : ಅನಿಲ್ ಅಂತರಸಂತೆ

ಅಂತರಸಂತೆ: ಆಹಾರ ಅರಸಿ ನಾಡಿಗೆ ಬರುವ ಸಾಕಷ್ಟು ಕಾಡುಪ್ರಾಣಿಗಳು ಕಳ್ಳಬೇಟೆಗಾರರ ಉರುಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಹುಟ್ಟಿಸಿದೆ.

ಅರಣ್ಯ ಇಲಾಖೆ ಕಾಡಂಚಿನ ಸುವಾರು ೩-೪ ಕಿಮೀ ವ್ಯಾಪ್ತಿಯಲ್ಲಿ ನೀರು ಹರಿಯುವ ಸ್ಥಳಗಳು, ಕಾಡುಪ್ರಾಣಿಗಳು ಓಡಾಡುವ ಸ್ಥಳಗಳು, ನಿರ್ಜನ ಪ್ರದೇಶಗಳಲ್ಲಿ ನಿರಂತರವಾಗಿ ಉರುಳು ಪತ್ತೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ತನ್ನ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದೆ. ಆದರೂ ಜಿಂಕೆ, ಕಾಡುಹಂದಿ, ಮೊಲದ ಮಾಂಸಕ್ಕಾಗಿ ಕಳ್ಳಬೇಟೆಗಾರರು ಹಾಕುವ ಉರುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಚಿರತೆಗಳು, ಹುಲಿಗಳು ಸಿಲುಕಿ ಸಾವನ್ನಪ್ಪುತ್ತಿದ್ದು, ಉರುಳು ಹಾಕುವವರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಪ್ರಯತ್ನ ಮುಂದುವರೆಸಿದ್ದರೂ ಪ್ರವಾಣ ಏರಿಕೆಯಾಗುತ್ತಲೆ ಇದೆ. ಇದಕ್ಕೆ ಇತ್ತೀಚೆಗೆ ನಾಗರಹೊಳೆಯ ಅಂತರಸಂತೆ ವನ್ಯಜೀವಿ ವಲಯದ ತಾಯಿ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದ ಪ್ರಕರಣ ಸಾಕ್ಷಿಯಾಗಿದೆ.

ಕಳ್ಳಬೇಟೆಗಾರರು ಸಾಮಾನ್ಯವಾಗಿ ಬೈಕ್‌ನ ಬ್ರೇಕ್ ಕೇಬಲ್ ತಂತಿ, ಬೈಂಡಿಂಗ್ ವೈಯರ್, ಸೋಲಾರ್ ಬೇಲಿಗೆ ಅಳವಡಿಸುವ ತಂತಿಯನ್ನು ಬಳಸಿ ಹತ್ಯೆಗೆ ಜಾಲ ರೂಪಿಸುತ್ತಿದ್ದಾರೆ.

ಎಲ್ಲೆಲ್ಲಿ ಬಲಿ: ಮಾಂಸ ಹಾಗೂ ಚರ್ಮಕ್ಕಾಗಿ ಕಾಡು ಪ್ರಾಣಿಗಳ ಬೇಟೆಯಾಡಲು ಹಾಕುವ ಉರುಳಿಗೆ ೨೦೧೭ರ ಜನವರಿಯಲ್ಲಿ ನಾಗರಹೊಳೆಯ ಶ್ರೀಮಂಗಲ ಬಳಿ ೬ ವರ್ಷದ ಹೆಣ್ಣುಹುಲಿಯೊಂದು ಸಿಲುಕಿತ್ತು. ತಕ್ಷಣ ಗುರುತಿಸಿದ ಅರಣ್ಯಇಲಾಖೆ ರಕ್ಷಣಾ ಕಾರ್ಯ ನಡೆಸಿದರೂ ಪುನರ್ವಸತಿ ಕೇಂದ್ರದಲ್ಲಿ ಹುಲಿ ಸಾವನ್ನಪ್ಪಿತು.

೨೦೧೯ರ ಮಾರ್ಚ್‌ನಲ್ಲಿ ಗೋಣಿಕುಪ್ಪದ ಹರಿಹರ ಸಮೀಪ ಒಂದು ವರ್ಷದ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಅದೇ ವರ್ಷ ಶ್ರೀಮಂಗಲ ಸಮೀಪ ೨ ವರ್ಷದ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು.

೨೦೧೭ರಲ್ಲಿ ಪೊನ್ನಂಪೇಟೆ ಸಮೀಪ ಒಂದುವರೆ ವರ್ಷದ ಹುಲಿ ಉರುಳಿಗೆ ಸಿಲುಕಿ ರಕ್ಷಣಾ ಕಾರ್ಯದ ವೇಳೆ ಪುನರರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿತ್ತು. ೨೦೨೦ರಲ್ಲಿ ನಾಗರಹೊಳೆಯಲ್ಲಿ ಹೆಣ್ಣು ಹುಲಿಯೊಂದು ಉರುಳಿಗೆ ಸಿಲುಕಿತ್ತು. ಅರಣ್ಯ ಇಲಾಖೆ ಕೂಡಲೇ ರಕ್ಷಿಸಿದ್ದರಿಂದ ಬದುಕುಳಿಯಿತು. ೨೦೧೭ರಲ್ಲಿ ಬಂಡೀಪುರ ಸಫಾರಿ ವಲಯದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಿನ್ಸ್ ಹೆಸರಿನ ಪ್ರವಾಸಿಗರ ನೆಚ್ಚಿನ ಹುಲಿ ಕಳ್ಳಬೇಟೆಗಾರರು ಹಂದಿಗೆ ಹಾಕಿದ್ದ ಸಿಡಿಮದ್ದು ಸೇವಿಸಿ ಸಾವನ್ನಪ್ಪಿದ್ದನ್ನು ಮರೆಯುವಂತಿಲ್ಲ.

ನೂರಾರು ಚಿರತೆಗಳು ಉರುಳಿಗೆ ಸಿಲುಕಿ ಸಾವನ್ನಪ್ಪಿದ ಉದಾಹರಣೆಗಳಿವೆ. ೨೦೨೧ರಲ್ಲಿ ಮೈಸೂರಿನ ಹೊರವಲಯದ ಬೆಳವಾಡಿ ಸಮೀಪ ೪ ವರ್ಷದ ತಾಯಿ ಚಿರತೆ ಮತ್ತು ಒಂದು ವರ್ಷದ ಎರಡು ಮರಿಗಳು ವಿಷಕ್ಕೆ ಬಲಿಯಾಗಿದ್ದವು. ೨೦೨೧ರಲ್ಲಿ ಬಂಡೀಪುರ ಅರಣ್ಯದ ಮೊಳೆಯೊಂರು ವ್ಯಾಪ್ತಿಯಲ್ಲಿ ಹಾಗೂ ಕಳೆದ ವರ್ಷ ಕೆ.ಆರ್.ಪೇಟೆ ಸಮೀಪ ಚಿರತೆಯೊಂದು ಉರುಳಿಗೆ ಬಲಿಯಾಗಿತ್ತು. ೨೦೧೬ರಲ್ಲಿ ಸರಗೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಉರುಳಿಗೆ ಕರಡಿಯೊಂದು ಬಲಿಯಾಗಿತ್ತು. ಬಫರ್ ಜೋನ್‌ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಉರುಳಿನ ಪ್ರಕರಣಗಳು ದಾಖಲಾಗುತ್ತಲೆ ಇದ್ದು ಹುಲಿಗಳೇ ಸಿಲುಕಿರುವ ಪ್ರಕರಣಗಳು ಹೆಚ್ಚು.

ಉರುಳು ಪತ್ತೆ ಕಾರ್ಯಾಚರಣೆ ಹೆಚ್ಚಲಿ; ಉರುಳಿನ ಜಾಲದಿಂದ ಕಾಡುಪ್ರಾಣಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಮತ್ತಷ್ಟು ಕಾರ್ಯ ಪ್ರವೃತ್ತವಾಗಬೇಕಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನಕ್ಕೊಮ್ಮೆ ತಮ್ಮ ಬೀಟ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಮತ್ತಷ್ಟು ಚುರುಕುಗೊಳ್ಳಬೇಕು.ಉರುಳು ಪತ್ತೆಯಾದಲ್ಲಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸುವುದು, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಯಿಂದ ನಿರಂತರವಾಗಿ ಕಾಡಂಚಿನ ಭಾಗಗಳಲ್ಲಿ ಉರುಳು ಪತ್ತೆ ಹಚ್ಚಿ ತೆರವುಗೊಳಿಸಬೇಕು ಎಂಬುದು ತಜ್ಞರ ಸಲಹೆ.

ಈ ಹಿಂದೆ ನಾವು ಅರಣ್ಯದ ಗಡಿಭಾಗದ ಟ್ರಂಚ್‌ಗಳಲ್ಲಿ ಪ್ರತಿ ೨ ದಿನಕ್ಕೊಮ್ಮೆ ಉರುಳು ಪತ್ತೆ ಕಾರ್ಯಾಚರಣೆ ಮಾಡುತ್ತಿದ್ದೆವು. ಆದರೆ ತಾಯಿಹುಲಿ ಬಲಿಯಾದ ಬಳಿಕ ಕಾಡಂಚಿನ ಸುಮಾರು ೩-೪ ಕಿಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. -ಎಸ್.ಎಸ್.ಸಿದ್ಧರಾಜು, ವಲಯ ಅರಣ್ಯಾಧಿಕಾರಿ, ಅಂತರಸಂತೆ.

 

andolana

Recent Posts

ಮೈಸೂರು ಮುಡಾ ಕಚೇರಿಗೆ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಭೇಟಿ

ಮೈಸೂರು: ರಾಜ್ಯದಲ್ಲಿ ಮೈಸೂರು ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇಂದು ತನಿಖೆಯ ಭಾಗವಾಗಿ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು…

9 hours ago

ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನೇ ಓದಿಲ್ಲ ಎಂದ ರಾಹುಲ್‌ ಗಾಂಧಿ

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನೇ ಓದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿಯಿದೆ ಎಂದು ಲೋಕಸಭೆ ವಿರೋಧ ಪಕ್ಷದ…

9 hours ago

ಆದಿವಾಸಿಗಳ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಉದ್ಬೂರು ಹಾಡಿ ಹಾಗೂ ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಅವರಿಂದು ಭೇಟಿ ನೀಡಿ, ಆದಿವಾಸಿಗಳ…

9 hours ago

ರಾಜ್ಯದಲ್ಲಿ ನವೆಂಬರ್.‌14ರಿಂದ ಮತ್ತೆ ಮಳೆಯ ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ…

9 hours ago

ಶಬರಿಮಲೆಗೆ ತೆರಳುವವರಿಗೆ ಸಿಹಿಸುದ್ದಿ ನೀಡಿದ ಕೆಎಸ್‌ಆರ್‌ಟಿಸಿ

ಬೆಂಗಳೂರು: ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ವೋಲ್ವೋ ಬಸ್…

10 hours ago

ಕಾಂಗ್ರೆಸ್‌ ವಿರುದ್ಧ ಮತ್ತೆ ಗುಡುಗಿದ ಪ್ರಧಾನಿ ನರೇಂದ್ರ ಮೋದಿ

ಮುಂಬೈ: ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವಲ್ಲಿ ಕಾಂಗ್ರೆಸ್‌ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ…

10 hours ago