ಜಿಲ್ಲೆಗಳು

‘ಭಾರತೀಯತೆ’ ಶೀರ್ಷಿಕೆಯಡಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

ಮೈಸೂರು : ‘ಭಾರತೀಯತೆ’ ಶೀರ್ಷಿಕೆಯಡಿಯಲ್ಲಿ ಡಿ.೮ ರಿಂದ ೧೫ರವೆಗೆ ರಂಗಾಯಣದ ವತಿಯಿಂದ ಹಮ್ಮಿಕೊಂಡಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನು ಡಿ.೧೦ರಂದು ಸಂಜೆ ೫.೩೦ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದು, ಡಿ.೮ರಂದು ಜಾನಪದೋತ್ಸವಕ್ಕೆ ಚಾಲನೆ ನೀಡಲಾಗುವುದು.

ಇನ್ನು ಬಾರಿಯ ರಂಗೋತ್ಸವದಲ್ಲಿ ಒಟ್ಟು ೨೦ ನಾಟಕಗಳು ಪ್ರದರ್ಶನವಾಗಲಿದ್ದು, ೧೨ ಕನ್ನಡ, ೧ ತುಳು, ಸಂಸ್ಕೃತ, ಮಲೆಯಾಳಂ, ತೆಲುಗು, ಹಿಂದಿ ಸೇರಿದಂತೆ ೭ನಾಟಕಗಳಲ್ಲಿ ವಿವಿಧ ರಾಜ್ಯ ಕಲಾವಿದರು ಅಭಿನಯಿಸುವರು.

ಬಜೆಟ್ ಕೊರತೆಯಿಂದಾಗಿ ಈ ಬಾರಿ ೭ ದಿನ ಮಾತ್ರ ರಂಗೋತ್ಸವವನ್ನು ಆಯೋಜಿಸಿದ್ದರೂ, ಡಿ.೩ರಂದೇ ಬಹುರೂಪಿ ರಾಷ್ಟ್ರೀಯ ರಂಗೋತ್ಸದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರದಂದು (ಡಿ.೩)ಬಿ.ವಿ.ಕಾರಂತರ ರಂಗ ಚಾವಡಿಯಲ್ಲಿ ಚಿತ್ರಕಲಾ ಶಿಬಿರವನ್ನು ಆರಂಭಿಸುತ್ತಿದ್ದು, ಬೆ.೧೦.೩೦ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಚಾಲನೆ ನೀಡುವರು. ಹಿರಿಯ ಶಿಲ್ಪಿ ಎಲ್.ಶಿವಲಿಂಗಪ್ಪ, ಕಾವಾ ಡೀನ್ ದೇವರಾಜ್ ಇರಲಿದ್ದಾರೆ. ಈ ಶಿಬಿರದಲ್ಲಿ ವಿವಿಧ ಭಾಗಗಳಿಂದ ಸುಮಾರು ೨೦ ಕಲಾವಿದರು ಭಾಗವಹಿಸುವರು.

ಡಿ.೫ರಿಂದ ಪ್ರಚಾರಾಂದೋಲನ : ಇನ್ನು ರಂಗೋತ್ಸವದತ್ತ ಜನರನ್ನು ಸೆಳೆಯು ಉದ್ದೇಶದಿಂದ ಡಿ.೫ರಿಂದ ಗಾರುಡಿ ಗೊಂಬೆಗಳೊಂದಿಗೆ ‘ಮನೆ-ಮನೆಗೆ ರಂಗಾಯಣ- ಮನ ಮನಕೆ ಬಹುರೂಪಿ’ ಪರಿಕಲ್ಪನೆಯಲ್ಲಿ ಪ್ರಚಾರಾಂದೋಲನವನ್ನು ಮೈಸೂರು ನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್ ಅವರ ಮನೆಯಿಂದ ಆರಂಭಿಸಲಾಗುತ್ತದೆ.

ಚಲನಚಿತ್ರೋತ್ಸವ: ರಂಗಾಯಣದ ಆವರಣದಲ್ಲಿರುವ ಡಾ.ಪುನೀತ ರಾಜ್ ಕುಮಾರ್ ಚಿತ್ರಮಂದಿರದಲ್ಲಿ ಡಿ.೯ರಂದು ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಅಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ ಕಶ್ಯಪ್ ಅವರು ಚಾಲನೆ ನೀಡುವರು. ಚಿತ್ರನಟ ದೊಡ್ಡಣ್ಣ ಅವರು ಭಾಗವಹಿಸುವರು. ನಾನಾ ಭಾಷೆಯ ಸುಮಾರು ೨೮ ಚಲನಚಿತ್ರಗಳು ಪ್ರದರ್ಶನವಾಗಲಿವೆ.

ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ರಂಗಾಭಿಮಾನಿಗೆ ಟಿಕೆಟ್ ವಿತರಿಸಲಾಯಿತು.

ರಾಷ್ಟ್ರೀಯ ವಿಚಾರ ಸಂಕಿರಣ: ಡಿ.೧೦ ಮತ್ತು ೧೧ರಂದು ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಸನಾತನ ಧರ್ಮ ಮತ್ತು ಭಾರತೀಯತೆ’ ಹಾಗೂ ‘ಭವಿಷ್ಯದಲ್ಲಿ ಭಾರತೀಯ ಸಂಸ್ಕೃತಿ’ ಎಂಬ ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ. ವಿಚಾರ ಸಂಕಿರಣದಲ್ಲಿ ಲೇಖಕರಾದ ಡಾ.ಎಸ್.ಆರ್.ಲೀಲಾ, ಎಸ್.ಎನ್.ಸೇತುರಾಮ್, ಚಿಂತಕರಾದ ಡಾ.ಬಿ.ವಿ.ಆರತಿ, ರಮಾನಂದ ಐನಕೈ, ಸಾಹಿತಿ ಬಾಬು ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕ ಸು.ರಾಮಣ್ಣ ಭಾಗವಹಿಸಿ ವಿಚಾರ ಮಂಡನೆ ಮಾಡುವರು.

ಡಿ.೧೧ರಂದು‘ವೈವಿಧ್ಯತೆಯಲ್ಲಿ ಭಾರತೀಯತೆ’ ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಸ್ಪರ್ಧೆಯಲ್ಲಿ ಪದವಿ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಪ್ರಥಮ ಬಹುಮಾನವಾಗಿ ೧೫ ಸಾವಿರ ರೂ, ದ್ವಿತೀಯ ಬಹುಮಾನ ೧೦ ಸಾವಿರ ರೂ. ಮತ್ತು ತೃತೀಯ ಬಹುಮಾನ ೫ ಸಾವಿರ ರೂ. ಇರಲಿದೆ.

ಉದ್ಘಾಟನೆ: ಡಿ.೧೦ರಂದು ಸಂಜೆ ೫.೩೦ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ ಪರೇಶ್ ರಾವಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್, ಮಹಾಪೌರರಾದ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಉಪಸ್ಥಿತರಿರುವರು.

ಈ ಸಂಬಂಧ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಆಯೋಜಿಸಿ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ಭಾರತವೆಂದರೆ ಅದು ಕೇವಲ ನೆಲವೊಂದೇ ಅಲ್ಲ. ನಾವು ಇದನ್ನು ಮಾತೆ ಎಂದು ಪೂಜಿಸುತ್ತೇವೆ. ಹಾಗಾಗಿ, ಅತ್ಯಂತ ಗಂಭೀರವಾಗಿ ಚರ್ಚಿಸಿ ‘ಭಾರತೀಯತೆ’ ಶೀರ್ಷಿಕೆ ಇಡಲಾಗಿದೆ ಎಂದರು.

ಈ ಬಾರಿ ಬಜೆಟ್ ಅನ್ನು ಕಡಿಮೆ ನೀಡಲಾಗಿದ್ದು, ೨೫ ಲಕ್ಷ ರೂ.ನೀಡಲಾಗಿದೆ. ಆದರೂ, ವಿಭಿನ್ನ ಮತ್ತು ವಿಶಿಷ್ಟವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇನ್ನು ಕೆಲವು ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಸೇರ್ಪಡೆ ಮಾಡಬೇಕಿದೆ ಈಗಾಗಲೇ ನಾಟಕದ ಟಿಕೆಟ್ ದೊರೆಲಿದೆ. ಪ್ರತಿ ನಾಟಕಕ್ಕೆ ೧೦೦ ರೂ.ಪ್ರವೇಶ ಶುಲ್ಕವಿರಲಿದೆ ಎಂದರು.

ಇದೇ ಸಮಯದಲ್ಲಿ ರಂಗಾಭಿಮಾನಿಗೆ ಟಿಕೆಟ್ ವಿತರಿಸಲಾಯಿತು. ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಉಪನಿರ್ದೇಶಕರಾದ ನಿರ್ಮಲ ಮಠಪತಿ, ಸಂಚಾಲಕರಾದ ಜಗದೀಶ್ ಬನವಾಸೆ ಇದ್ದರು.

 

 

 

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

6 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

8 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

22 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago