ಸ್ನೇಹಿತನಿಗೆ ಸಾಲ ಕೊಡಿಸಿ ಆತ ವಾಪಸ್ ಕೊಡದೇ ಸಾಲಗಾರರ ಕಿರುಕುಳ ಹೆಚ್ಚಾದ ಕಾರಣ ಮೈಸೂರಿನ ಯರಗನಹಳ್ಳಿ ನಿವಾಸಿಗಳಾದ ದಂಪತಿ ವಿಶ್ವ ( 34 ) ಹಾಗೂ ಸುಷ್ಮ ( 28 ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶ್ವ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು ಶಿವು ಎಂಬ ಸ್ನೇಹಿತನಿಗೆ ಸಾಲಗಾರರಿಂದ 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಆದರೆ ಶಿವು ಸಾಲದ ಹಣವನ್ನು ವಾಪಸ್ ಕೊಡದೇ ಹಣ ಹಿಂತಿರುಗಿಸಲು ಕೇಳಿದಾಗ ಕೆಟ್ಟ ಮಾತಿಗಳಿಂದ ನಿಂದಿಸಿ, ರೌಡಿ ಕರೆದುಕೊಂಡು ಬರುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಸ್ವತಃ ವಿಶ್ವ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿರುವ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಅತ್ತ ಸಾಲ ಕೊಟ್ಟ ಸಾಲಗಾರರು ತನ್ನ ಮನೆ ಮುಂದೆ ಬಂದು ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದಾರೆ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಶ್ವ ವಿಡಿಯೊದಲ್ಲಿ ತಿಳಿಸಿದ್ದಾರೆ.
ಅಲ್ಲದೇ ಚೋರನಹಳ್ಳಿಯ ರಾಜಣ್ಣ ಎಂಬಾತನಿಗೂ ಸಹ ತಾನು ಚಿನ್ನಾಭರಣವನ್ನು ನೀಡಿದ್ದೆ. ಅದನ್ನು ವಾಪಸ್ ಕೇಳಿದಾಗ ಹಿಂತಿರುಗಿಸದೇ ಸಹಾಯ ಮಾಡುತ್ತಿದ್ದಾನೆ ಎಂದು ಮತ್ತೊಂದು ಆರೋಪವನ್ನು ವಿಡಿಯೊದಲ್ಲಿ ಮಾಡಿರುವ ವಿಶ್ವ ಕೊನೆಯಲ್ಲಿ ಆ ಚಿನ್ನವನ್ನು ತನ್ನ ಮನೆಯವರಿಗೆ ಸಿಗುವ ಹಾಗೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ. ಆತ್ಮಹತ್ಯೆ ಚಿಂತನೆ ತಲೆಗೆ ಬಂದಾಗ ಆಪ್ತರೊಡನೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಅಥವಾ ಈ ಸಹಾಯವಾಣಿಗೆ ಕರೆ ಮಾಡಬೇಕು.
Suicide prevention Helpline Number: 9152987821
ಮೈಸೂರು : ಕಲೆ ಎಲ್ಲರಿಗೂ ಒಲಿದು ಬರೋದಿಲ್ಲ ಕೆಲವರಿಗೆ ಮಾತ್ರ ಒಲಿದು ಬರುತ್ತದೆ. ಕಲೆ ಮತ್ತು ಸಂಸ್ಕೃತಿ ಮೈಗೂಡಿಸಿಕೊಂಡರೆ ತಮ್ಮ…
ಗದಗ : ಗುತ್ತಿಗೆದಾರನಿಂದ ಕಮಿಷನ್ ರೂಪದಲ್ಲಿ ಐದು ಲಕ್ಷ ಹಣ ಪಡೆಯುತ್ತಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ…
ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ರಣರಂಗವನ್ನು ಬಿಟ್ಟು…
ಮಂಡ್ಯ: ಜಿಲ್ಲೆಯಲ್ಲಿ ನಿರುದ್ಯೋಗಿ ಸಮಸ್ಯೆಯನ್ನು ಹೋಗಲಾಡಿಸಲು ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಿದ್ದು ಯುವಜನತೆಯ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶವನ್ನು ಕಲ್ಪಿಸುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ವಿಶೇಷವಾಗಿ ಕಾಳಜಿ ವಹಿಸಿದ್ದೇನೆ…
ಮೈಸೂರು: ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡಲ್ಲ ಎಂಬ ಎಂಎಲ್‌ಸಿ ಹಾಗೂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಮಾಜಿ…