ಜಿಲ್ಲೆಗಳು

74ನೇ ಗಣರಾಜ್ಯೋತ್ಸವ- ಸಂವಿಧಾನದ ಆಶಯಗಳು

ಸುರೇಶ ಸಿ.ಎಚ್.
ಸಹಾಯಕ ಪ್ರಾಧ್ಯಾಪಕರು,
ಬಿಇಎಸ್ ಕಾನೂನು ಕಾಲೇಜು,
ಜಯನಗರ, ಬೆಂಗಳೂರು.

ಗಣರಾಜ್ಯೋತ್ಸವ ದಿನವನ್ನು ಇಡೀ ದೇಶವೇ ಸಂಭ್ರಮಿಸುತ್ತದೆ. ಏಕೆಂದರೆ ಈ ದಿನವು ಭಾರತ ಗಣರಾಜ್ಯ ದೇಶವಾದ ಐತಿಹಾಸಿಕ ದಿನ. ಇಡೀ ವಿಶ್ವದಲ್ಲೇ ಬೃಹತ್ ಸಂವಿಧಾನ ಎಂಬ ಹೆಗ್ಗಳಿಕೆಗೆ ಕಾರಣವಾದ ಭಾರತದ ಸಂವಿಧಾನ ಜಾರಿಗೆ ಬಂದ ದಿನವಾಗಿದೆ.

ಭಾರತೀಯರಾದ ನಾವೆಲ್ಲರೂ ಜನವರಿ 26, 2023ನ್ನು 74ನೇ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಭಾರತವು ಇಂದು ಹೆಮ್ಮೆಯಿಂದ ಗಣರಾಜ್ಯೋತ್ಸವ ದಿನಾಚರಣೆ ಮಾಡುತ್ತಾ ಬಂದಿದ್ದು, ಇದರ ಕೀರ್ತಿ ಸರ್ಧಾರ್ ವಲ್ಲಭ ಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಪೂರ್ವ ಭಾರತವು ಹಲವು ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು. ಸ್ವತಂತ್ರ ಭಾರತದ ಪ್ರಪ್ರಥಮ ಗೃಹ ಮಂತ್ರಿಗಳಾಗಿ ಅಂದು ನೇಮಕವಾಗಿದ್ದ ಉಕ್ಕಿನ ಮನುಷ್ಯ ಎಂಬ ಖ್ಯಾತಿಗೆ ಪಾತ್ರರಾದ ಸರ್ಧಾರ್ ವಲ್ಲಭ ಬಾಯಿ ಪಟೇಲ್ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದಾಗಿ ಕೊಲ್ಕತ್ತಾ, ಮದ್ರಾಸ್, ಹೈದರಾಬಾದ್ ಮುಂತಾದ ಪ್ರಾಂತ್ಯಗಳಾಗಿ ನಿಜಾಮರು, ಸಾಮ್ರಾಟರು, ರಾಜ ಸಂಸ್ಥಾನಗಳ ಪಾಲಾಗಿದ್ದ ಭಾರತದ ಎಲ್ಲ ಪ್ರದೇಶಗಳನ್ನೂ ಒಗ್ಗೂಡಿಸಿ, ಭಾಷಾವಾರು ಪ್ರಾಂತ್ಯಗಳನ್ನಾಗಿ ಮರು ವಿಂಗಡಣೆ ಮಾಡಿ, ಹೊಸ ರಾಜ್ಯಗಳ ರೂಪಕೊಟ್ಟು , ವಿವಿಧ ರಾಜ್ಯಗಳನ್ನೂ ಒಳಗೊಂಡ ಗಣವು ರೂಪುಗೊಂಡ ದಿನ ಜನವರಿ 26, 1950. ಹಾಗಾಗಿ ಈ ದಿನವನ್ನು ನಾವು ಗಣರಾಜ್ಯೋತ್ಸವ ದಿನವನ್ನಾಗಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ.

ಅದೇ ರೀತಿಯಾಗಿ ಆಗಸ್ಟ್ 15, 1947 ರಂದು ಬ್ರಿಟೀಷರಿಂದ ಭಾರತೀಯರು ತಾತ್ವಿಕವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡು ಭವ್ಯ ಭಾರತ ನಿರ್ಮಾಣಕ್ಕಾಗಿ ಅಗತ್ಯವಿದ್ದ ಒಂದು ಸಂವಿಧಾನವನ್ನು ರಚಿಸುವ ಉದ್ದೇಶದಿಂದ ಅಂದು ಸ್ಥಾಪಿತವಾದ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂ ನೇತೃತ್ವದ ಸರ್ಕಾರ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಂವಿಧಾನ ಕರಡು ಸಮಿತಿಯನ್ನು 1947ರ ಆಗಸ್ಟ್ 26 ರಂದು ರಚಿಸಿತು. ಈ ಸಂವಿಧಾನ ಕರಡು ಸಮಿತಿಯು 2 ವರ್ಷ, 11 ತಿಂಗಳು,18 ದಿನಗಳ ಅವಧಿಯಲ್ಲಿ ಪ್ರಜಾಪ್ರಭುತ್ವ ತತ್ವವನ್ನು ಜಗತ್ತಿಗೆ ಸಾರುವ ಸುಂದರ, ದೂರದೃಷ್ಟಿಯ, ಸರ್ವ ಸಮ್ಮತ ಸಂವಿಧಾನವನ್ನು ಪೂರ್ಣಗೊಳಿಸಿದ್ದು, ನವೆಂಬರ್ 26, 1949 ರಂದು ಭಾರತ ಸಂವಿಧಾನವನ್ನು ಅಂಗೀಕರಿಸಲಾಯಿತು. ಅದೇ ದಿನದಂದು ಭಾರತ ಸಂವಿಧಾನದ ಎಲ್ಲಾ ಉಪಬಂಧಗಳನ್ನು ಜಾರಿ ಮಾಡಲಿಲ್ಲ. ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಯಿತು. ಹಾಗಾಗಿ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಸಂವಿಧಾನದ ವೈಶಿಷ್ಟ್ಯವೆಂದರೆ ಇದು ಹಸ್ತಾಕ್ಷರಗಳಲ್ಲಿ ರಚನೆಯಾದ ವಿಶ್ವದ ಮೊದಲ ಸಂವಿಧಾನವಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂವಿಧಾನವನ್ನು ರಚನೆ ಮಾಡಲಾಗಿದ್ದು, ಇಂತಹ ಸಂವಿಧಾನ ರಚನೆಗೆ ಕಾರಣರಾದ ಡಾ.ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ‘ಶಿಲ್ಪಿ’ ಮತ್ತು ಪಿತಾಮಹ ಎಂದು ಕರೆಯಲಾಗುತ್ತದೆ.

ಈ ಸಂವಿಧಾನವನ್ನು ರಷ್ಯಾ, ಅಮೆರಿಕ, ಬ್ರಿಟನ್, ಸ್ವಿಡ್ಜರ್ ಲೆಂಡ್ ಮುಂತಾದ ದೇಶಗಳ ಸಂವಿಧಾನಗಳಿಂದ ಎರವಲು ಪಡೆದು ರಚಿಸಲಾಗಿದ್ದು, ಇದರ ಪ್ರಸ್ತಾವನೆಯಲ್ಲಿ 1976 ರ 42 ನೇ ತಿದ್ದುಪಡಿಯನ್ನು ಒಳಗೊಂಡು ಹತ್ತು ತತ್ವಗಳನ್ನು ಇದರಲ್ಲಿ ಪ್ರತಿಪಾದಿಸಲಾಗಿದೆ.

ಸಮಾಜವಾದ, ಜಾತ್ಯತೀತ, ಸಾರ್ವಭೌಮತ್ವ, ಪ್ರಜಾಪ್ರಭುತ್ವ ಗಣತಂತ್ರ ಸರ್ಕಾರ, ಸ್ವಾತಂತ್ರ್ಯ, ಏಕತೆ, ಸಹೋದರತ್ವ ಅಥವಾ ಭ್ರಾತೃತ್ವ, ಸಮಾನತೆ ಮತ್ತು ನ್ಯಾಯ ಇವೇ ನಮ್ಮ ಸಂವಿಧಾನವು ನಮಗೆ ಪರಿಚಯಿಸಿದ್ದು. ಈ ನೆಲದಲ್ಲಿರುವ ವಿಭಿನ್ನ ಭಾಷೆ, ಸಂಸ್ಕೃತಿ, ವರ್ಗ, ವರ್ಣ, ಜನಾಂಗ, ಧರ್ಮ ಮತ್ತಿತ್ಯಾದಿಗಳನ್ನು ಒಳಗೊಂಡು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ ಎಂದರೆ ಅತಿಶಯೋಕ್ತಿಯಾಗಲಾರದು. ಇಂದು ವಿಶ್ವದಲ್ಲಿನ ವಿದ್ಯಮಾನಗಳನ್ನು ಗಮನಿಸಿದಾಗ ಒಂದೇ ಸಮುದಾಯವನ್ನು ಒಳಗೊಂಡಿರುವ ರಾಷ್ಟ್ರಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಆಂತರಿಕ ಕಲಹಗಳು, ವೈಷಮ್ಯಗಳು, ಅವರವರ ಮಧ್ಯದಲ್ಲೇ ‘ಭಯೋತ್ಪಾದನೆ’ಯ ರೂಪದಲ್ಲಿ ತಾಂಡವವಾಡುತ್ತಿರುವ ಇಂತಹ ಸಂದರ್ಭದಲ್ಲೂ ಎಲ್ಲಾ ಧರ್ಮ, ಭಾಷೆ ಅಥವಾ ವಿಭಿನ್ನ ಸಂಸ್ಕೃತಿಯ ಜನರನ್ನು ಸಮನಾಗಿ ಪರಿಗಣಿಸಿ, ಯಾವುದೇ ಧರ್ಮ ಅಥವಾ ಸಂಸ್ಕೃತಿಯನ್ನು ದೇಶದ ಭಾಷೆ, ಧರ್ಮ ಅಥವಾ ಸಂಸ್ಕೃತಿಯೆಂದು ಸಂವಿಧಾನದಲ್ಲಿ ಘೋಷಿಸದೆ, ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ ಇಂತಹ ಪ್ರಧಾನ ತತ್ವಗಳನ್ನು ಸಾರುವ, ಪ್ರಜೆಗಳನ್ನೇ ಪ್ರಭುಗಳೆಂದು ಪರಿಗಣಿಸಿರುವ, ವಿಶ್ವದಲ್ಲೇ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತ ಹೊಂದಿದೆ. ಇಂತಹ ಭವ್ಯ ಭಾರತದ ಸಂಸ್ಕೃತಿಯನ್ನು ಮರೆತ ರಾಜಕೀಯ ವರ್ಗಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಧರ್ಮ-ಧರ್ಮಗಳ ನಡುವೆ, ವರ್ಗ- ವರ್ಗಗಳ ನಡುವೆ ವೈಷಮ್ಯವನ್ನು ಬಿತ್ತುವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾದ ಮತದಾನ ವ್ಯವಸ್ಥೆಯನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿ ಇಂದು ಭಾರತವನ್ನು ಸಂವಿಧಾನದ ನೈಜ ಮತ್ತು ಮೂಲ ಆಶಯಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರಗಳನ್ನು ಮುಂದುವರಿಸುತ್ತಲೇ ಇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳುವಂತೆ ಪ್ರತಿಯೊಬ್ಬ ಭಾರತೀಯನೂ ತನ್ನ ಮತದ ಮೌಲ್ಯವನ್ನು ಅರಿತು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಕಾಣಬಹುದಾಗಿದೆ. ಸಂವಿಧಾನದ ಮೂಲ ಆಶಯಗಳನ್ನು ಗೌರವಿಸೋಣ,ಉಳಿಸಿ ಬೆಳೆಸೋಣ.


 

*ಸಂವಿಧಾನದಲ್ಲಿ ಹತ್ತು ತತ್ವಗಳ ಪ್ರತಿಪಾದನೆ

* ವೈವಿಧ್ಯತೆಯಲ್ಲಿ ಏಕತೆ ಒಳಗೊಂಡ ಏಕೈಕ ರಾಷ್ಟ್ರ

*ಜ.26, 1950 ರಂದು ಸಂವಿಧಾನ ಪೂರ್ಣ ಅನುಷ್ಠಾನ

* ಹಸ್ತಾಕ್ಷರಗಳಲ್ಲಿ ರಚನೆಯಾದ ವಿಶ್ವದ ಪ್ರಥಮ ಸಂವಿಧಾನ

*ರಷ್ಯಾ,ಬ್ರಿಟನ್,ಅಮೆರಿಕ, ಸ್ವಿಜರ್ ಲೆಂಡ್ ಮುಂತಾದ ದೇಶಗಳ ಸಂವಿಧಾನಗಳಿಂದ ಎರವಲು

*ಸಂವಿಧಾನ ರಚನೆಗೆ ತೆಗೆದುಕೊಂಡ ಅವಧಿ 2 ವರ್ಷ, 11 ತಿಂಗಳು, 18 ದಿನ.

 

 

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

15 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago