ಜಿಲ್ಲೆಗಳು

ಆಂದೋಲನ ಸಂದರ್ಶನ : 5 ಲಕ್ಷಕ್ಕೂ ಹೆಚ್ಚು ಮಂದಿಗೆ ಯಶಸ್ವಿನಿ ಉಪಯೋಗ

ಯಶಸ್ವಿನಿ ಯೋಜನೆ ಕುರಿತು ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್.ವಿಜಯ್‌ ಕುಮಾರ್ ಅಭಿಮತ

ಬಿ ಎನ್‌. ಧನಂಜಯಗೌಡ
ಮೈಸೂರು:
ಮುಖ್ಯಮಂತ್ರಿಗಳು ೨೦೨೨-೨೩ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನ.2ರಿಂದ ಸದಸ್ಯರ ನೋಂದಣಿ ಪ್ರಾರಂಭವಾಗಲಿದೆ ಈ ಕುರಿತು ‘ಆಂದೋಲನ’ ಜೊತೆ ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್.ವಿಜಯ್‌ ಕುಮಾರ್ ಮಾತನಾಡಿದ್ದಾರೆ.

ಆಂದೋಲನ: ಯಶಸ್ವಿ ಯೋಜನೆ ನೋಂದಣಿ ಮೈಸೂರಲ್ಲಿ ಯಾವಾಗಿನಿಂದ ಆರಂಭವಾಗಲಿದೆ?
ವಿಜಯಕುಮಾರ್: ಸರ್ಕಾರ ಆದೇಶ ಮಾಡಿದೆ. ಆದರೆ, ನೋಂದಣಿ ಸಂಬಂಧ ಮತ್ತು ಹಣವನ್ನು ಹೇಗೆ ಕಲೆಕ್ಟ್ ಮಾಡಬೇಕು ಎಂಬ ಬಗ್ಗೆ ಇನ್ನೂ ಮಾರ್ಗಸೂಚಿ ಬಂದಿಲ್ಲ. ನೋಂದಣಿ ನಮೂನೆಗಳು ಇನ್ನೂ ಬಂದಿಲ್ಲ. ಹಾಗಾಗಿ, ನ.೨ರ ನಂತರ ಪ್ರಕ್ರಿಯೆ ಆರಂಭಿಸಲು ಮಾರ್ಗಸೂಚಿ ಬರಬಹುದು.

ಆಂದೋಲನ: ಈ ಯೋಜನೆಗೆ ಯಾರೆಲ್ಲ ಅರ್ಹರು, ನೋಂದಣಿ ಎಲ್ಲಿ ಆಗಲಿದೆ?
ವಿಜಯಕುಮಾರ್: ಯಾವುದೇ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದವರು. ನೋಂದಣಿ ಮಾಡಿಕೊಳ್ಳಬಹುದು. ಮೈಸೂರು ಜಿಲ್ಲೆಯಲ್ಲಿ ಸುಮಾರು ೨ ಸಾವಿರ ಸಹಕಾರ ಸಂಘಗಳು ಇದ್ದು. ಎಲ್ಲ ಸಹಕಾರ ಸಂಘಗಳಲ್ಲೂ ನೋಂದಣಿ ಮಾಡಿಸಬಹುದು. ನಮ್ಮಲ್ಲಿ ೫ರಿಂದ ೬ ಲಕ್ಷ ಸಹಕಾರ ಸಂಘಗಳ ಸದಸ್ಯರಿದ್ದು ಅವರೆಲ್ಲರೂ ಒಳಪಡಬಹುದು.

ಆಂದೋಲನ: ಈ ಹಿಂದೆ ನೋಂದಣಿ ಮಾಡಿಕೊಡವರು ಮತ್ತು ಹೊಸ ನೋಂದಣಿ ಹೇಗೆ?
ವಿಜಯಕುಮಾರ್: ಇದು ಪ್ರತಿವರ್ಷ ನವೀಕರಣ ಇರಲಿದೆ. ಹೊಸ ಸದಸ್ಯರು ಸದಸ್ಯತ್ವ ಪಡೆದು ಮೂರು ತಿಂಗಳ ನಂತರ ಅವರೂ ನೋಂದಣಿ ಮಾಡಿಸಬಹುದು.

ಆಂದೋಲನ: ನೋಂದಣಿಯಾದ ಸದಸ್ಯರು ಪಾವತಿಸಬೇಕಾದ ಹಣವೆಷ್ಟು?
ವಿಜಯಕುಮಾರ್: ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳ ಸದಸ್ಯರಿಗೆ ನಾಲ್ಕು ಮಂದಿಯುಳ್ಳ ಕುಟುಂಬಕ್ಕೆ ತಲಾ ೫೦೦ ರೂ. ಹಾಗೂ ನಗರ ಪ್ರದೇಶದವರಿಗೆ ೧೦೦೦ ರೂ. ವಂತಿಗೆ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ ೨೦೦ ರೂ. ವಂತಿಗೆ ಪಾವತಿಸಿ, ನೋಂದಾಯಿಸಬಹುದು.

ಆಂದೋಲನ: ಯೋಜನೆಯಲ್ಲಿ ನೋಂದಣಿಯಾದ ಕುಟುಂಬ ನಗದು ರಹಿತವಾಗಿ ಎಷ್ಟು ಮೊತ್ತದವರೆಗೆ ಚಿಕಿತ್ಸೆ ಪಡೆಯಬಹುದು?
ವಿಜಯಕುಮಾರ್: ಈ ಯೋಜನೆಯಡಿ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ ೫ ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ ೩೦೦ ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಹೆಚ್ಚುವರಿ ಹಣವನ್ನು ಅವರೇ ಪಾವತಿಸಬೇಕು.

ಆಂದೋಲನ : ಯೋಜನೆಯ ನೆಟ್‌ವರ್ಕ್ ಹೊಂದಿರುವ ಆಸ್ಪತ್ರೆಗಳು ಯಾವುವು?
ವಿಜಯಕುಮಾರ್: ಈ ಬಗ್ಗೆ ಸರ್ಕಾರ ಇನ್ನೂ ಪಟ್ಟಿಯನ್ನು ನೀಡಿಲ್ಲ. ಈ ಕಾರಣದಿಂದಲೇ ನೋಂದಣಿ ಪ್ರಕ್ರಿಯೆ ವಿಧಾನದ ಮಾರ್ಗಸೂಚಿ ನಮಗೆ ಬಂದಿಲ್ಲ.

ಯಶಸ್ವಿನಿ ಯೋಜನೆ ಹಿನ್ನೆಲೆ
ಮೈಸೂರು: ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡಲು ೨೦೦೩ರಲ್ಲಿ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿತ್ತು. ಆದರೆ ೨೦೧೮ರಲ್ಲಿ ರಾಜ್ಯದ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡಲು ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿದ ಸರ್ಕಾರ ೨೦೧೮ರ ಮೇ ೩೧ರಂದು ಯಶಸ್ವಿನಿ ಆರೋಗ್ಯ ಯೋಜನೆಯನ್ನು ರದ್ದುಗೊಳಿಸಿತ್ತು. ಇದೇ ಯೋಜನೆಗೆ ಈಗ ಮರು ಚಾಲನೆ ನೀಡಲಾಗುತ್ತಿದೆ.

andolanait

Recent Posts

ವಿಭಿನ್ನ ಓದಿಗೆ ಆಹ್ವಾನಿಸುವುದೇ ಉತ್ತಮ ಸಾಹಿತ್ಯ

`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…

3 mins ago

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

11 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

11 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

12 hours ago