ಜಿಲ್ಲೆಗಳು

ಕ್ರಾಸ್‌ಕಂಟ್ರಿಗೆ 72ಕಾಲೇಜಿನ 481 ಕ್ರೀಡಾಪಟುಗಳ ನೊಂದಣಿ

ಹುಣಸೂರಲ್ಲಿ ಶುಕ್ರವಾರ ಬೆಳಗ್ಗೆ 6.30ಕ್ಕೆ ಗುಡ್ಡಗಾಡು ಓಟ.

ಹುಣಸೂರು: ಹುಣಸೂರಿನಲ್ಲಿ ಡಿ.2ರ ಶುಕ್ರವಾರ ನಡೆಯಲಿರುವ ಮೈಸೂರು ವಿ.ವಿ.ಯ ಮಹಿಳಾ ಮತ್ತು ಪುರುಷರ ಕ್ರಾಸ್ ಕಂಟ್ರಿ(ಗುಡ್ಡಗಾಡು ಓಟ)ಸ್ಪರ್ಧೆಯಲ್ಲಿ 72 ಕಾಲೇಜುಗಳಲ್ಲಿ 191 ಮಹಿಳೆಯರು, 290 ಪುರುಷ ಓಟಗಾರರು ಸೇರಿ ಒಟ್ಟು 481ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

ಇಲ್ಲಿನ ಮಹಿಳಾ ಸರಕಾರಿ ಪದವಿ ಕಾಲೇಜಿನಿಂದ ನಡೆಯುತ್ತಿರುವ ಈ ಸ್ಪರ್ಧೆ ಶುಕ್ರವಾರ ಬೆಳಗ್ಗೆ 6.30ಕ್ಕೆ ಎಚ್.ಡಿ.ಕೋಟೆ ವೃತ್ತದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಸ್ಪರ್ಧೆಗೆ ಚಾಲನೆ ನೀಡಿದರು, ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಡಾ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಉಪ ವಿಭಾಗಾಧಿಕಾರಿ ರುಚಿಬಿಂದಾಲ್, ಡಿವೈಎಸ್ ರವಿಪ್ರಸಾದ್ ರವಿಪ್ರಸಾದ್ , ಡಾ.ಸರ್ವೇಶ್‌ರಾಜೇಅರಸ್ ಎಟ್ ಹಾಜರಿದ್ದಾರೆ. ನಗರದ ಹೊರವಲಯ ಸೇರಿದಂತೆ ವಿವಿಧ ವೃತ್ತಗಳ ಮೂಲಕ 10ಕಿ.ಮೀಟವನ್ನು ಪೂರೈಸಬೇಕಿದ್ದು, ಮಹಿಳಾ ಕಾಲೇಜಿನ ಸ್ಪರ್ಧೆ ಅಂತ್ಯಗೊಳ್ಳಲಿದೆ. ಮೈಸೂರು ವಿವಿಯ ದೈಹಿಕಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಪಿ.ಕೃಷ್ಣಯ್ಯರ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ನೂರು ಮಂದಿ ಅಧಿಕಾರಿಗಳ ತಂಡ ಹಾಗೂ ನೂರಕ್ಕೂ ಹೆಚ್ಚು ಸ್ಪಯಂಸೇವಕರು ಸ್ಪರ್ಧೆ ನಡೆಸಲಿದ್ದಾರೆ.  

ಬೆಳಗ್ಗೆ 10ಕ್ಕೆ ಕಾಲೇಜು ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ, ಸಿಡಿಸಿ ಅಧ್ಯಕ್ಷರೂ ಆದ ಶಾಸಕ ಮಂಜುನಾಥ್ ಬಹುಮಾನ ವಿತರಿಸಿದರು. ಅಂತರಾಷ್ಟ್ರೀಯ ಟ್ರಯಥ್ಲಾನ್ ಆಟಗಾರ್ತಿ ಡಾ.ಉಷಾಹೆಗ್ಗಡೆ ಸಮಾರೋಪ ಭಾಷಣ ಮಾಡುತ್ತಾರೆ. ನಗರಸಭೆ ಅಧ್ಯಕ್ಷೆ ಗೀತಾನಿಂಗರಾಜು, ಸದಸ್ಯ ಶ್ರೀನಾಥ್, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಎಸ್.ಬಿ.ಅಪ್ಪಾಜಿಗೌಡ, ಪ್ರಾಚಾರ್ಯ ಜ್ಞಾನಪ್ರಕಾಶ್, ಸಿಡಿಸಿ ಸದಸ್ಯರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಾಸ್ಕರ್.

andolana

Recent Posts

ಮದ್ದೂರು ಬಳಿಯ ವಳೆಗೆರೆಹಳ್ಳಿಯಲ್ಲಿ ಮಳೆರಾಯನಿಗಾಗಿ ಪೂಜೆ

ಮದ್ದೂರು: ಹುಯ್ಯೋ ಹುಯ್ಯೋ ಮಳೆರಾಯ ತೆಂಗಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಬಾರಪ್ಪ ಮಳೆರಾಯ…

4 hours ago

ಸಮರ್ಥವಾಗಿ ಕಾರ್ಯನಿರ್ವಹಿಸದ ಸಚಿವರನ್ನು ಬದಲಾಯಿಸಿ: ಶಾಸಕ ರವಿಕುಮಾರ್‌ ಗಣಿಗ

ಮಂಡ್ಯ: ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ.…

4 hours ago

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್‌ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ…

4 hours ago

ಹಾಸನ: ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ…

4 hours ago

ಶಿವಮೊಗ್ಗ: ಪಶುವೈದ್ಯೆ ಕೊಂದಿದ್ದ ನೀರಾನೆಗೆ ಬಹು ಅಂಗಾಂಗ ವೈಫಲ್ಯ

ಶಿವಮೊಗ್ಗ: ತ್ಯಾವರಕೊಪ್ಪದ ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ನೀರಾನೆ ಹಂಸಿನಿಯ ಮರಿ ಗರ್ಭದಲ್ಲೇ ಸಾವನ್ನಪ್ಪಿದೆ.…

4 hours ago

ಪಾಕ್‌ ಜನತೆಗೆ ಮತ್ತೊಂದು ಶಾಕ್:‌ ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಇಸ್ಲಾಮಾಬಾದ್:‌ ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್‌ ದರವನ್ನು ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ…

4 hours ago