• ಬಿ.ಟಿ.ಮೋಹನ್ ಕುಮಾರ್
ಮಂಡ್ಯ: ಜಿಲ್ಲೆಯ ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, 20230 ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ 26,270 ಮಂದಿಗೆ ನಾಯಿ ಕಡಿದಿದ್ದು, ದಿನಕ್ಕೆ ಸರಾಸರಿ 72 ಮಂದಿ ನಾಯಿ ಕಡಿತಕ್ಕೊಳಗಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ನಾಯಿಗಳ ಹಾವಳಿ ನಿಯಂ ತ್ರಣ ಇಲ್ಲವಾಗಿದೆ. ಸರಿಯಾಗಿ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ-ಅನಿಮಲ್ ಬರ್ತ್ ಕಂಟ್ರೋಲ್) ಕಾರ್ಯಕ್ರಮವೂ ಅನುಷ್ಠಾನವಾಗದ ಕಾರಣ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪರಿಣಾಮ ಜಿಲ್ಲೆಯಲ್ಲಿ ಅಂದಾಜಿನ ಪ್ರಕಾರ ಬರೋಬ್ಬರಿ 1.50 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ.
2022ರಲ್ಲಿ ನಡೆದ 20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 23,894 ಸಾಕು ನಾಯಿಗಳು, 56,510 ಬೀದಿ ನಾಯಿಗಳು ಇವೆ ಎಂಬುದನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಂಕಿ-ಅಂಶಗಳು ದೃಢಪಡಿಸಿವೆ. ಅದರೆ, ವಾಸ್ತವದಲ್ಲಿ 1.50 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳು ಇರಬಹುದೆಂದು ಅಂದಾಜಿಸಲಾಗಿದೆ. ಸಾಕು ನಾಯಿಗಳು ಮತ್ತು ಬೀದಿ ನಾಯಿಗಳು ಮನುಷ್ಯರನ್ನು ಕಡಿದು ತತ್ತರಗೊಳಿಸಿವೆ. ಅದರಲ್ಲೂ ಹಿಂಡು ಹಿಂಡಾಗಿ ಸಂಚರಿಸುವ ಬೀದಿ ನಾಯಿಗಳನ್ನು ಕಂಡರೆ ಜನರು ಬೆಚ್ಚಿ ಬೀಳುವಂತಾಗಿದೆ.
365 ದಿನಗಳಲ್ಲಿ 26,270 ಮಂದಿಗೆ ನಾಯಿಗಳು ಕಡಿದಿದ್ದು, ದಿನಕ್ಕೆ ಸರಾಸರಿ 72 ಮಂದಿಯಂತೆ ನಾಯಿ ಕಡಿತಕ್ಕೆ ಒಳಗಾಗು ತ್ತಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ ಇಷ್ಟೊಂದು ಮಂದಿ ನಾಯಿ ಕಡಿತಕ್ಕೊಳಗಾಗಿ ದ್ದಾರೆಂದರೆ ಇಡೀ ರಾಜ್ಯದಲ್ಲಿ ಇನ್ನೆಷ್ಟು ಮಂದಿ ನಾಯಿಗಳ ದಾಳಿಗೆ ಒಳಗಾಗಿರಬಹುದು ಎಂಬುದು ಆತಂಕ ಮೂಡಿಸು ತದೆ. ಇಷ್ಟಾದರೂ ನಾಯಿಗಳ ನಿಯಂತ್ರಣಕ್ಕೆ ಯಾವೊಂದು ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಕೋರ್ಟ್, ಕಾನೂನು ಕಟ್ಟಲೆಗಳ ಭಯದಿಂದ ಪ್ರಾಣಿ ದಯಾ ಸಂಘದತ್ತ ಬೆರಳು ತೋರಿಸಿ ಅಧಿಕಾರಿಗಳು ಜಾರಿಕೊಳ್ಳುತ್ತಾರೆ.
ಬೀದಿ ನಾಯಿಗಳ ಕಡಿತದಿಂದ ಇಬ್ಬರು ಸಾವು
ಮಂಡ್ಯ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. 2020ರವರೆಗೆ ರೇಬಿಸ್ ರೋಗದಿಂದ ಯಾರೂ ಮೃತಪಟ್ಟಿರಲಿಲ್ಲ. ಆದರೆ, 2021 ಮತ್ತು 2022ರಲ್ಲಿ ತಲಾ ಒಬ್ಬರು, 2023ರಲ್ಲಿ ಇಬ್ಬರು ರೇಬಿಸ್ ನಿಂದ ಮೃತಪಟ್ಟಿದ್ದಾರೆ. ಈ ಅಂಕಿ- ಅಂಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ವಿಭಾಗ ದೃಢಪಡಿಸಿದೆ. ತಿಂಗಳ ಹಿಂದೆ ಬೆಸಗರಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿ ಕಡಿತದಿಂದ ಮೃತಪಟ್ಟಿದ್ದರು.
3 ಡೋಸ್ ಪಡೆಯುವುದು ಸೂಕ್ತ
ನಾಯಿ ಕಡಿತಕ್ಕೊಳಗಾದವರಿಗೆ ಪಿಎಚ್, ಎಚ್‌ಸಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಆ್ಯಂಟಿ ರೇಬೀಸ್ ವ್ಯಾಕ್ಸಿನ್ ನೀಡಲಾಗುತ್ತಿದೆ. ನಾಯಿ ಕಡಿತಕ್ಕೆ ಒಳಗಾವರು ಧೈರ್ಯಗುಂದದೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ನಾಯಿ ಕಚ್ಚಿದ ಚುಚ್ಚುಮದ್ದು ಪಡೆದರೆ, ರೇಬೀಸ್ ರೋಗಕ್ಕೆ ತುತ್ತಾಗಿರುವ ನಾಯಿ ಕಡಿದರೂ ಆರೋಗ್ಯವಾಗಿರಬಹುದು. ಆದ್ದರಿಂದ 3 ಡೋಸ್‌ಗಳನ್ನು ತಪ್ಪದೇ ಹಾಕಿಸಿಕೊಳ್ಳಬೇಕು. ನಾಯಿ ಕಡಿತ ಪ್ರಕರಣಗಳಲ್ಲಿ ಮೊದಲು ನಾಯಿ ಕಚ್ಚಿದ ಜಾಗವನ್ನು ಹರಿಯುವ ನೀರಿನಲ್ಲಿ ಸಾಬೂನಿನಿಂದ ತೊಳೆದರೆ ರೇಬಿಸ್ ಹರಡುವುದನ್ನು ಶೇ.50ರಷ್ಟು ತಡೆಯಬಹುದು ಎಂದು ಡಿಎಚ್‌ಓ ಮಂಡ್ಯ ಡಾ. ಕೆ.ಮೋಹನ್ ಹೇಳಿಕೆ ನೀಡಿದ್ದಾರೆ.
ವರ್ಷವಾರು ನಾಯಿ ಕಡಿತಕ್ಕೊಳಗಾದವರ ವಿವರ:
2015ರಲ್ಲಿ 11,292, 2016ರಲ್ಲಿ 98,88, 2017ರಲ್ಲಿ 10,052, 2018ರಲ್ಲಿ 12,567, 2019ರಲ್ಲಿ 13,568, 2020ರಲ್ಲಿ 20,454, 2021ರಲ್ಲಿ 25,461, 2022ರಲ್ಲಿ 21,274 ಹಾಗೂ 2023 26,270 ಮಂದಿಗೆ ನಾಯಿ ಕಡಿತ.
ಚುಚ್ಚುಮದ್ದು ಅಗತ್ಯ: ಜಿಲ್ಲೆಯ ಎಲ್ಲ ಪಿಎಚ್‌ಸಿ, ಸಿಎಚ್‌ಸಿ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಜಿಲ್ಲಾ ಕೇಂದ್ರ ಮಂಡ್ಯದಲ್ಲಿನ ಮಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಪಿಎಚ್‌ಸಿ, ಸಿಎಚ್‌ಸಿಗಳಲ್ಲಿ ಮೊದಲ ದಿನ ಚಿಕಿತ್ಸೆ ನೀಡಿ, ಹೆಚ್ಚಿನ ನಿರಂತರ ಚಿಕಿತ್ಸೆಗಾಗಿ ಮಿಮ್ಸ್ ಬೋಧಕ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ. ಇದಕ್ಕಾಗಿ ಮಿಮ್ಸ್ ಆಸ್ಪತ್ರೆಯಲ್ಲಿ ರೇಬಿಸ್ ಕ್ಲಿನಿಕ್ (ಎಆರ್‌ಸಿ) ತೆರೆಯಲಾಗಿದೆ.
ಪ್ರತಿ ಚುಚ್ಚುಮದ್ದಿಗೆ ಬಿಪಿಎಲ್ ಕಾರ್ಡ್ ದಾರರಿಗೆ 50 ರೂ., ಎಪಿಎಲ್ ಕಾರ್ಡ್ ದಾರರಿಗೆ 100 ಶುಲ್ಕ ನಿಗದಿಪಡಿಸಲಾಗಿದೆ. ನಾಯಿಗಳ ಕಡಿತದ ತೀವ್ರತೆ, ರಕ್ತಸ್ರಾವ, ಮುಖದ ಮೇಲೆ ನಾಯಿಗಳ ಕಚ್ಚುವಿಕೆ ಆಧರಿಸಿ ರಿಗ್ ವ್ಯಾಕ್ಸಿನ್ (ಇಮಿನೋಗೋಬಿಕ್) ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಈ ಚುಚ್ಚುಮದ್ದಿಗೆ 2,500 ರೂ.ನಿಂದ 3 ಸಾವಿರ ರೂ. ಶುಲ್ಕ ವಿಧಿಸಲಾಗುತ್ತದೆ.
ನಾಯಿ ಕಡಿತದ ತೀವ್ರತೆ ಆಧರಿಸಿ ಮೂರು ಹಂತಗಳಲ್ಲಿ ರೋಗಿಗಳಿಗೆ ಚುಚ್ಚು ಮದ್ದು ನೀಡಲಾಗುತ್ತದೆ. ಇಂಟಾ ಮಸ್ಕೂಲ ರ್(ಐಎಂ-1ಎಂಎಲ್) ಚುಚ್ಚು ಮದ್ದನ್ನು, 3, 7, 14 ಹಾಗೂ 21ನೇ ದಿನಗಳವರೆಗೆ ನಿಯಮಿತವಾಗಿ ರೋಗಿ ಚಿಕಿತ್ಸೆ ಪಡೆ ಯಬೇಕು. ಇಂಟ್ರಾಡರ್ಮಲ್ (ಐಡಿ-0.1 ಎಂಎಲ್) ಚುಚ್ಚುಮದ್ದಾದರೆ ನಿರಂತರವಾಗಿ 5 ದಿನಗಳ ಕಾಲ ಪಡೆಯಬೇಕು.
ಹೊಸದಿಲ್ಲಿ : ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ ನಮ್ಮ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ…
ಮೈಸೂರು : ಕಾಂಗ್ರೆಸ್ ಪಕ್ಷ ಎಂದರೆ ಅದು ಅಹಿಂದ. ಅದನ್ನು ಅರಿಯದೆ ಅಹಿಂದ ಸಮಾವೇಶ ಮಾಡಿ ಕಾಂಗ್ರೆಸ್ ಪಕ್ಷವನ್ನು ಮುಚ್ಚಲು…
ಮೈಸೂರು : ಲಂಡನ್‌ನ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಎಲ್ಲರಿಗೂ ಪ್ರವೇಶ ಇಲ್ಲ. ದಿನಕ್ಕೆ ಇಂತಿಷ್ಟೇ ಜನ ಭೇಟಿ ನೀಡಬೇಕು ಎಂಬ…
ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ತಯಾರಿಕೆಯ ಘಟಕಗಳು ಪತ್ತೆಯಾಗಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಡಿಮಿಡಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು…
ಬೆಂಗಳೂರು : ಮುಂದಿನ ಎರಡು ಮೂರು ತಿಂಗಳ ಒಳಗಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಗಳಿಗೆ ಚುನಾವಣೆ ನಡೆಸಲು…
ಮೈಸೂರು : ರಾಮಕೃಷ್ಣ ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಡಿ.30 ರ ಬದಲಿಗೆ 29ರಂದೇ ನಡೆಸಲಿರುವುದರಿಂದ…