ಜಿಲ್ಲೆಗಳು

ಯೂನಿಟ್‌ಗೆ 1.46 ರೂ. ಹೆಚ್ಚಳಕ್ಕೆ ಸೆಸ್ಕ್ ಪ್ರಸ್ತಾಪ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿಚಾರಣೆ
ದರ ಹೆಚ್ಚಳಕ್ಕೆ ಅವಕಾಶ ಕೊಡದಂತೆ ಸಾರ್ವಜನಿಕರ ಒತ್ತಾಯ

ಮೈಸೂರು: ಕೊರೊನಾ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ, ಬಳಕೆ ಕಡಿಮೆ, ಬಡ್ಡಿದರದಲ್ಲಿ ಹೆಚ್ಚಳ, ಸರ್ಕಾರಿ ಯೋಜನೆಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಸೇವೆ ಒದಗಿಸುವುದೂ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಎಲ್ಲಾ ವೆಚ್ಚಗಳನ್ನೊಳಗೊಂಡಂತೆ ಪ್ರತಿ ಯೋನಿಟ್‌ಗೆ 1.46 ಪೈಸೆ ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿ ಕೋರಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು (ಸೆಸ್ಕ್) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಕ್ಕೆ ಪ್ರಸ್ತಾಪ ಸಲ್ಲಿಸಿದೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗದ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ 2023-24ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಅರ್ಜಿ ಕುರಿತು ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ದರ ಪರಿಷ್ಕರಣೆ ಕುರಿತಂತೆ ಬೇಡಿಕೆ ಇಡಲಾಯಿತು. ಆದರೆ, ಇದಕ್ಕೆ ಅಪಸ್ವರ ತೆಗೆದ ರೈತರು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು , ವಾಣಿಜ್ಯೋದ್ಯಮಿಗಳು ದರ ಹೆಚ್ಚಳವನ್ನು ವಿರೋಧಿಸಿದರು.

ಸಭೆಯ ಆರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಅವರು ೨೦೨೧-೨೨ನೇ ಸಾಲಿನ ಕೊರತೆ 382.57 ಕೋಟಿ ರೂ.ಗಳಾಗಿದ್ದು, 2023-24ಕ್ಕೆ ಪ್ರಸ್ತುತ ವಿದ್ಯುತ್ ದರಗಳಿಂದ 5572.74 ಕೋಟಿ ರೂ.ಆದಾಯ ಬರಲಿದ್ದು, ಅಗತ್ಯವಿರುವ   6622.48ಕೋಟಿ ರೂ. ವೆಚ್ಚವಾಗಲಿದೆ. ಹಾಗಾಗಿ, 2021-22ನೇ ಸಾಲಿನ ಕೊರತೆ382.57 ಕೋಟಿ ರೂ. ಮತ್ತು 2023-24ನೇ ಸಾಲಿನ ಅಂದಾಜು ಕೊರತೆ  667.17ಕೋಟಿ ರೂ. ಸೇರಿ ಒಟ್ಟು 1049.74ಕೋಟಿ ರೂ.ಗಳಾಗುವ ಕಾರಣ ಸರಾಸರಿ ಪ್ರತಿಯೂನಿಟ್‌ಗೆ 1.46 ಪೈಸೆ ಹೆಚ್ಚಳ ಮಾಡಲು ಅನುವು ಮಾಡಿಕೊಡಬೇಕು ಎಂದು ಪ್ರಸ್ತಾಪ ಸಲ್ಲಿಸಿದರು.

2023-24ನೇ ಸಾಲಿನಲ್ಲಿ  8245.68ದಶಲಕ್ಷ ಯೂನಿಟ್‌ಗಳ ವಿದ್ಯುತ್ ಖರೀದಿ ಮಾಡಿದರೆ, 7167.89ದಶಲಕ್ಷ ಯೂನಿಟ್‌ಗಳ ವಿದ್ಯುತ್ ಮಾರಾಟವಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ವಿದ್ಯುತ್ ಖರೀದಿಗೆ 4603.2 ಕೋಟಿ ರೂ., ಕಾರ್ಯ ಮತ್ತುಪಾಲನೆ ವೆಚ್ಚ   971.89ಕೋಟಿ ರೂ., ಸವಕಳಿ 431.85 ಕೋಟಿ ರೂ., ಬಡ್ಡಿ ಮತ್ತು ಆರ್ಥಿಕ ವೆಚ್ಚಗಳಿಗೆ  505.14 ಕೋಟಿ ರೂ., ಇತರೆ ಖರ್ಚು 12.2 ಕೋಟಿ ರೂ., ಗ್ರಾಹಕ ಶಿಕ್ಷಣಕ್ಕೆ 0.5 ಕೋಟಿ ರೂ. ಸೇರಿದಂತೆ  6522.48 ಕೋಟಿ ರೂ. ಖರ್ಚಾದರೆ, ವಿದ್ಯುತ್ ದರಗಳಿಂದ 5572.74 ಕೋಟಿ ರೂ. ಕಂದಾಯ ಬರಲಿದೆ. ಹೀಗಾಗಿ, ಕೊರತೆ ನೀಗಿಸಲು ದರ ಹೆಚ್ಚಳ ಮಾಡುವುದು ಅಗತ್ಯವಾಗಿದೆ. ನಮ್ಮ ಬೇಡಿಕೆಯನ್ನು ಪರಿಗಣಿಸಿ ಒಪ್ಪಿಗೆ ಕೊಡಬೇಕು ಎಂದು ಕೋರಿದರು.

ಕೊರೊನಾ ವರ್ಷದಲ್ಲಿ ಮಾರಾಟ ಕಡಿಮೆ: ಕೊರೊನಾ ವರ್ಷದಲ್ಲಿ ವಿದ್ಯುತ್ ಬೇಡಿಕೆ ಮತ್ತು ಮಾರಾಟ ಕಡಿಮೆಯಾಗಿದ್ದರಿಂದ 2021ರ ಅವಧಿಯಲ್ಲಿ ನಷ್ಟವಾಗಿದೆ. ಸರ್ಕಾರಿ ಯೋಜನೆಗಳನ್ನು ಮುಂದುವರಿಸುವುದೂ ಸೇರಿದಂತೆ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಕೊಡಲಾಗಿದೆ. ಕೈಗಾರಿಕೆಗಳು ಬಂದ್ ಆಗಿದ್ದರಿಂದ ಬೇಡಿಕೆ ಬರಲಿಲ್ಲ, ಮಾರಾಟವೂ ನಡೆಯಲಿಲ್ಲ. ಹಾಗಾಗಿ, ನಷ್ಟಕ್ಕೆ ಕಾರಣವಾಗಿದೆ. ಆದರೆ, ಈ ವರ್ಷದಲ್ಲಿ ಅದನ್ನು ಸರಿದೂಗಿಸಿಕೊಳ್ಳುವ ಕೆಲಸ ಮಾಡಲಾಗಿದೆ ಎಂದು ಜಯವಿಭವಸ್ವಾಮಿ ಆಯೋಗದ ಗಮನಕ್ಕೆ ತಂದರು.

ಒಟ್ಟು ವೆಚ್ಚ  6522.48ಕೋಟಿ ರೂ.
ಆದಾಯ  5572.74 ಕೋಟಿ ರೂ.

ಯಾವುದಕ್ಕೆ ಎಷ್ಟು?

ವಿದ್ಯುತ್ ಖರೀದಿಗೆ 4603.2 ಕೋಟಿ ರೂ.

ಕಾರ್ಯ ಮತ್ತು ಪಾಲನೆ ವೆಚ್ಚ  971.89 ಕೋಟಿ ರೂ.

ಸವಕಳಿ ವೆಚ್ಚ431.85 ಕೋಟಿ ರೂ.

ಬಡ್ಡಿ ಮತ್ತು ಆರ್ಥಿಕ ವೆಚ್ಚ505.14 ಕೋಟಿ ರೂ.

ಇತರೆ ಖರ್ಚು 12.2 ಕೋಟಿ ರೂ.

ಗ್ರಾಹಕ ಶಿಕ್ಷಣಕ್ಕೆ 0.5 ಕೋಟಿ ರೂ.

 

andolanait

Recent Posts

ಬೈಕ್ ಸಮೇತ ಸಜೀವ ದಹನವಾದ ಯುವಕ ; ಕೊಲೆ ಶಂಕೆ

ನಂಜನಗೂಡು : ಬೈಕ್ ಸಮೇತ ಯುವಕ ಸಜೀವ ದಹನವಾಗಿರುವ ಘಟನೆ ತಾಲ್ಲೂಕಿನ ಕೊರೆಹುಂಡಿ ಗ್ರಾಮದ ಹುಲ್ಲಹಳ್ಳಿ ನಾಲೆ ಬಳಿ ನಡೆದಿದೆ.…

5 mins ago

ಪೂರ್ಣ ಪ್ರಮಾಣದಲ್ಲಿ ಜಾರಿಯಾಗದ ಗ್ಯಾರಂಟಿ : ಸುಧಾಕರ್‌ ಟೀಕೆ

ಹನೂರು : ಯಾರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ ಅನ್ನೋದು ಮುಖ್ಯವಲ್ಲ. ಅಭಿವೃದ್ಧಿ ಮಾಡ್ತಿದ್ದಾರಾ, ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರಾ ಅನ್ನೋದೇ…

33 mins ago

ಮೈಸೂರು | ವಿವಿಧೆಡೆ ವಿಷ್ಣುವರ್ಧನ್‌ ಅವರ ಪುಣ್ಯ ಸ್ಮರಣೆ

ಮೈಸೂರು : ಕರ್ನಾಟಕ ರತ್ನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 16 ನೇ ವರ್ಷದ ಸ್ಮರಣೆಯನ್ನು ನಗರದ ವಿವಿಧೆಡೆ ವಿಷ್ಣುವರ್ಧನ್…

2 hours ago

ಉತ್ತರಾಖಂಡದ ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್:‌ 7 ಮಂದಿ ಪ್ರಯಾಣಿಕರು ಸಾವು

ಉತ್ತರಾಖಂಡ: ಇಲ್ಲಿನ ಅಲ್ಮೋರಾದ ಭಿಕಿಯಾಸೈನ್‌ ಪ್ರದೇಶದಲ್ಲಿ ಪ್ರಯಾಣಿಕರಿದ್ದ ಬಸ್‌ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, 12 ಮಂದಿ…

3 hours ago

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್‌ ವಾದ್ರಾ ನಿಶ್ಚಿತಾರ್ಥ

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್‌ ವಾದ್ರಾ ಪುತ್ರ ರೈಹಾನ್‌ ವಾದ್ರಾ ತಮ್ಮ ಬಹುಕಾಲದ ಗೆಳತಿ…

3 hours ago

ಬಂಗಾಳದಲ್ಲಿ ಬಿಜೆಪಿಗೆ ಒಂದು ಅವಕಾಶ ಕೊಡಿ: ಅಮಿತ್‌ ಶಾ ಮನವಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಒಂದು ಅವಕಾಶ ಕೊಡಿ. ಭಯ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಉತ್ತಮ ಆಡಳಿತದೊಂದಿಗೆ…

3 hours ago