ಮಡಿಕೇರಿ: ಮರ್ಮಾಂಗಕ್ಕೆ ಘಾಸಿಗೊಳಿಸಿ ವಿಶೇಷ ಚೇತನ ಹತ್ಯೆ!

ಮಡಿಕೇರಿ: ಮರ್ಮಾಂಗಕ್ಕೆ ಘಾಸಿಗೊಳಿಸಿ ವಿಶೇಷ ಚೇತನನನ್ನು ಹತ್ಯೆಗೈದ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.

ಉದಯಶಂಕರ್ (57) ಮೃತ ವಿಶೇಷಚೇತನ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಸೊಂಟದ ಕೆಳಕ್ಕೆ ಸ್ವಾದೀನ ಇರಲಿಲ್ಲ. ಕಳತ್ಮಾಡು ಗ್ರಾಮದಲ್ಲಿ ಸ್ವಂತ ಜಾಗದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಸರ್ಕಾರದ ಮಾಸಾಶನ ಹಾಗೂ ಗುತ್ತಿಗೆಗೆ ಬಿಟ್ಟಿರುವ ತೋಟದಿಂದ ಬರುವ ಆದಾಯದಿಂದ ಬದುಕು ಕಟ್ಟಿಕೊಂಡಿದ್ದರು.

× Chat with us