ನಾಟಿ ಹಸುಗಳಿಂದ ಲಕ್ಷಾಂತರ ಆದಾಯ ಗಳಿಕೆ

ಉಮೇಶ್ ಸಿದ್ದಾಪುರ

ಹಸುಗಳನ್ನು ಕೇವಲ ಹಾಲು ಹಾಗೂ ಸಗಣಿ ಗೊಬ್ಬರಕಷ್ಟೇ ಬಳಕೆ ವಾಡಲಾಗುತ್ತದೆ. ಆದರೆ, ಜಯರಾಮ್ ಅವರು ಹಸುಗಳಿಂದ ಸಿಗುವ ಗೋಮೂತ್ರ, ಸಗಣಿುಂನ್ನು ಬಳಸಿಕೊಂಡು ಹತ್ತಾರು ಉಪುುಂಕ್ತ ವಸ್ತುಗಳನ್ನು ತಾಂರಿಸುತ್ತಿದ್ದಾರೆ. ಮುಖ್ಯವಾಗಿ ಹಬೆಯ ಮೂಲಕ ಶುದ್ಧ ಗೋಮೂತ್ರವನ್ನು ತೆಗೆಯುತ್ತಿದ್ದಾರೆ. ಸಗಣಿಯಿಂದ ಸಂಪೂರ್ಣ ಉರಿಯುವ ದೀಪ, ದೂಪದ ಬತ್ತಿಗಳು, ಗಂಧದ ಕಡ್ಡಿ, ಬೆರಣಿ, ಹಲ್ಲುಪುಡಿ ಹೀಗೆ ಹತ್ತಾರು ಬಗೆಬಗೆಯ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೆ.

 

ಹಸು ಎಮ್ಮೆಗಳನ್ನು ಸಾಕಿದರೆ ನಷ್ಟವಾಗುತ್ತದೆ ಎಂದು ಕೆಲ ರೈತರು ತಮ್ಮ ಜಾನುವಾರುಗಳನ್ನು ಕಟುಕರಿಗೆ ನೀಡುತ್ತಿರುವುದು ದುರದೃಷ್ಟಕರ. ಇದರ ನಡುವೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಶಿಕ್ಷಕ ಜಯರಾಮ್ ಅವರು ಕೇವಲ ಐದು ನಾಟಿ ಹಸುಗಳನ್ನು ಸಾಕಿಕೊಂಡು ಅದರಿಂದಲೇ ಲಕ್ಷಾಂತರ ರೂ. ಲಾಭ ಗಳಿಸುವ ಮೂಲಕ ಕೃಷಿಕರಿಗೆ ವಾದರಿಾಂಗಿದ್ದಾರೆ.

 

ವೃತ್ತಿುಂಲ್ಲಿ ಶಿಕ್ಷಕರಾಗಿರುವ ಜಯರಾಮ್ ತಮ್ಮ ಬಿಡುವಿನ ಸಮುಂದಲ್ಲಿ ಕಾಲ ಕಳೆಯಲು ಹೋಬಳಿಯ ವಡ್ಡರಹಳ್ಳಿಯ ಸಾಸಲು ರಸ್ತೆಯಲ್ಲಿರುವ ಅವರ ತೋಟದಲ್ಲಿ ಒಂದು ಮಲೆನಾಡು ಗಿಡ್ಡ ತಳಿಯ ಸಣ್ಣ ಹಸುವನ್ನು ತಂದು ಸಾಕಿದರು. ಅದರಿಂದ ಗೋಮೂತ್ರ ಪಡೆದುಕೊಂಡು ಸೇವೆನೆ ವಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾದರು. ಇದೇ ಸಮಯದಲ್ಲಿ ಅಕ್ಕಪಕ್ಕದವರೂ ಗೋಮೂತ್ರಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಗಿರ್ ಮತ್ತಿತರ ತಳಿಯ ನಾಲ್ಕು ಗೋವುಗಳನ್ನು ಖರೀದಿಸಿದರು. ಅವುಗಳು ಮತ್ತೆ ಮೂರು ಕರುಗಳನ್ನು ಹಾಕಿದವು. ಅವುಗಳಿಂದ ಪ್ರತಿದಿನ ಮುಂಜಾನೆ ಎಂಟು ಲೀಟರ್‌ಗಳಷ್ಟು  ಗಂಜಲ ಲಭಿಸುತ್ತಿವೆ. ಗಂಜಲಗಳನ್ನು ಬೆಂಕಿುಂಲ್ಲಿ ಬೇಯಿಸಿ ಆವಿುಂ ಮೂಲಕ ಶುದ್ಧ ಗೋಮೂತ್ರವನ್ನು ಸಂಗ್ರಹ ವಾಡಿಕೊಂಡು ಅದನ್ನು ಜನರಿಗೆ ಕಾಮಧೇನು ಎಂಬ ಹೆಸರಿನಿಂದ ವಾರಾಟ ವಾಡುತ್ತಿದ್ದು ರಾಜ್ಯದ ವಿವಿಧ ಭಾಗಗಳಿಂದ ಜನರು ಬಂದು ಖರೀದಿಸುತ್ತಿದ್ದಾರೆ.

 

 

ರೋಗನಿವಾರಣೆಗೆ ರಾಮಬಾಣ

ಹಸುಗಳನ್ನು ಕೇವಲ ಹಾಲು ಹಾಗೂ ಸಗಣಿ ಗೊಬ್ಬರಕಷ್ಟೇ ಬಳಕೆ ವಾಡಲಾಗುತ್ತದೆ. ಆದರೆ, ಜಯರಾಮ್ ಅವರು ಹಸುಗಳಿಂದ ಸಿಗುವ ಗೋಮೂತ್ರ, ಸಗಣಿಯನ್ನು ಬಳಸಿಕೊಂಡು ಹತ್ತಾರು ಉಪುಯುಕ್ತ ವಸ್ತುಗಳನ್ನು ತಾಂರಿಸುತ್ತಿದ್ದಾರೆ. ಮುಖ್ಯವಾಗಿ ಹಬೆಯ ಮೂಲಕ ಶುದ್ಧ ಗೋಮೂತ್ರವನ್ನು ತೆಗೆಯುತ್ತಿದ್ದಾರೆ. ಸಗಣಿಯಿಂದ ಸಂಪೂರ್ಣ ಉರಿಯುವ ದೀಪ, ದೂಪದ ಬತ್ತಿಗಳು, ಗಂಧದ ಕಡ್ಡಿ, ಬೆರಣಿ, ಹಲ್ಲುಪುಡಿ ಹೀಗೆ ಹತ್ತಾರು ಬಗೆಬಗೆಯ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೆ.  ಸಕ್ಕರೆ ಕಾಯಿಲೆ, ಕ್ಯಾನ್ಸರ್ ಸೇರಿದಂತೆ ವಿವಿಧ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗಲಿ ಎಂಬ ಕಾರಣಕ್ಕಾಗಿ ಗೋಮೂತ್ರದ ಜೊತೆಗೆ ತುಳಸಿ, ಮಧುನಾಶಿನಿ, ಅಮೃತಬಳ್ಳಿ ಸೇರಿದಂತೆ ವಿವಿಧ ಬಗೆಯ ಸಸ್ಯಗಳನ್ನು ಸೇರಿಸಿ ಬೇಯಿಸಿ ಸಂಗ್ರಹ ವಾಡುತ್ತಾರೆ. ಸ್ವಚ್ಛವಾಗಿ ಸಂಗ್ರಹಿಸಿದ ಸಗಣಿಯಿಂದ ಕ್ರಿಮಿಗಳು ನಾಶವಾಗುವಂತೆ ಧೂಪ, ಜೊತೆಗೆ ಎಣ್ಣೆಯ ದೀಪ ಮಾಡಿದ್ದಾರೆ.

ಈ ದೀಪಕ್ಕೆ ಎಣ್ಣೆ ಮತ್ತು ಬತ್ತಿಯನ್ನು ಹಾಕಿ ರಾತ್ರಿ ವೇಳೆಯಲ್ಲಿ ಹಚ್ಚಿದರೆ ಅದು ಎಣ್ಣೆ ಖಾಲಿಯಾದ ನಂತರ ದೀಪ ತಾನಾಗಿಯೇ ಉರಿದು ಹೋಗುತ್ತದೆ. ಇದರ ಜೊತೆಗೆ ಬೆರಣಿಯನ್ನು ಸಂಜೆಯ ವೇಳೆ ಮತ್ತು ಮುಂಜಾನೆ ಹಚ್ಚಿದರೆ ಮನೆಯಲ್ಲಿ ಶಕ್ತಿ ಸಂಚಯವಾಗಿ  ವಾುುಂವಾಲಿನ್ಯ ಸಮಸ್ಯೆಗೆ ಒಂದು ಪರಿಹಾರ ಎಂದು ಹೇಳಲಾಗಿದೆ.

 

 

ಲಕ್ಷಾಂತರ ರೂ. ಲಾಭ

ಒಂದು ಲೀಟರ್ ಶುದ್ಧ ಗೋಮೂತ್ರಕ್ಕೆ ೩೦೦ ರೂ., ದೂಪಕ್ಕೆ, ದೀಪಗಳಿಗೆ ಹತ್ತು ರೂ., ಹಲ್ಲುಪುಡಿಗೆ ೨೦ ರೂ., ಒಂದು ಕೆ.ಜಿ. ಸಗಣಿಗೆ ೩೦ ರೂ. ಹೀಗೆ ಗೋವುಗಳಿಂದ ಸಂಗ್ರಹವಾಗುವ ಎಲ್ಲಾ ವಸ್ತುಗಳಿಗೂ ಬೇಡಿಕೆ ಇರುವುದರಿಂದ ಸಾಕಷ್ಟು ಲಾಭವಾಗುತ್ತಿದೆ. ಇದರ ಜೊತೆಗೆ ಎರಡು ಎಕರೆಗಳ ತೋಟಕ್ಕೆ ಹಸುಗಳಿಂದ ಸಂಗ್ರಹವಾಗುವ ಸಗಣಿ ಮತ್ತು ಗೋಮೂತ್ರ ಬಿಟ್ಟು ಬೇರೆ ಯಾವ ರಾಸಾಯನಿಕ ಗೊಬ್ಬರವನ್ನೂ ಬಳಸುತ್ತಿಲ್ಲ. ಇದರಿಂದ ಹಣ ಉಳಿಯುವ ಜೊತೆಗೆ ಪೌಷ್ಟಿಕಾಂಶ ಇರುವ ಬೆಳೆಗಳನ್ನು ಬೆಳೆುಂಲಾಗುತ್ತಿದೆ. ಇದರಿಂದ ಜಯರಾಮ್ ಕಡಿಮೆ ಖರ್ಚಿನಿಂದ ಹೆಚ್ಚು ಲಾಭ ಗಳಿಸುವ ಜೊತೆಗೆ ಅವರ ಮತ್ತು ಅವರ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಯುವಜನರಿಗೆ ಆದರ್ಶವಾಗಲಿ

ನಾವು ಇಂದು ಆಧುನಿಕತೆಗೆ ಮಾರು ಹೋಗುತ್ತಿದ್ದು ಎಲ್ಲವೂ ತಕ್ಷಣವೇ ಆಗಬೇಕು ಎಂದು ತೆಗೆದುಕೊಳ್ಳುತ್ತಿರುವ ಆಹಾರ, ಔಷಧಿಗಳು ನಮ್ಮ ಜೀವನದ ದಿನಗಳನ್ನು ಕಡಿಮೆ ವಾಡುವ ಜೊತೆಗೆ ನಾವು ರೋಗದಿಂದ ಬಳಲುವಂತೆ ವಾಡುತ್ತಿವೆ.  ಇಂತಹ ಸಮುಯದಲ್ಲಿ ಶಿಕ್ಷಕರೊಬ್ಬರು ಗೋವುಗಳನ್ನು ಬಳಸಿಕೊಂಡು ರೋಗ ನಿರೋಧಕ ಔಷಧಿಗಳನ್ನು ಸವಾಜಕ್ಕೆ ನೀಡುತ್ತಿರುವುದು ಸ್ವಾಗತಾರ್ಹ. ಸರ್ಕಾರ ಇಂತಹ ವ್ಯಕ್ತಿಗಳಿಗೆ ಸಣ್ಣ ಕೈಗಾರಿಕಾ ಯೋಜನೆುಂಡಿ ಸಹಕಾರ ನೀಡಬೇಕು. ಯುವಕರು ಜಯರಾಮ್ ಅವರನ್ನು ಆದರ್ಶವಾಗಿಟ್ಟುಕೊಂಡು ಅವರ ಜೀವನ ರೂಪಿಸಿಕೊಳ್ಳುವ ಜೊತೆಗೆ ಆರೋಗ್ಯವಂತ ದೇಶ ಕಟ್ಟಲು ಮುಂದಾಗಬೇಕಾಗಿದೆ.

-ಅರ್ಚನಾ, ಪರಿಸರ ಅಭಿಯಂತರರು, ಪುರಸಭೆ, ಕೆ.ಆರ್.ಪೇಟೆ.

 

ಲಾಭಕ್ಕಾಗಿ ಮಾಡುತ್ತಿಲ್ಲ

ಶಾಲಾ ಶಿಕ್ಷಕನಾದ ನನಗೆ ಕುಟುಂಬ ನಿರ್ವಹಣೆ ವಾಡಲು ಯಾವುದೇ ತೊಂದರೆ ಇಲ್ಲ. ಆದರೆ ವಿರಾಮದ ಸಮಯದಲ್ಲಿ ನಾಟಿ ಹಸುಗಳೊಂದಿಗೆ ಕಾಲ ಕಳೆದರೆ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಆದುದರಿಂದ ನಾನು ದೂರದ ಊರುಗಳಿಂದ ಮಲೆನಾಡು ಗಿಡ್ಡ, ಗೀರ್ ಇತರೆ ಉತ್ತಮ ತಳಿಗಳನ್ನು ತಂದಿರುವೆ.

ಈಗ ಜನರ ಒತ್ತಾಯದಂತೆ ಗೋವುಗಳಿಂದ ತಯಾರಿಸಿದ ವಸ್ತುಗಳನ್ನು ನಮ್ಮ ಖರ್ಚಿಗೆ ಅನುಗುಣವಾಗಿ ಮಾರಾಟ ವಾಡುತ್ತಿದ್ದೇನೆ. ನನಗೆ ಲಾಭದ ಉದ್ದೇಶ ಇಲ್ಲ.

ಎಲ್ಲಕಿಂತ ಮುಖ್ಯವಾಗಿ ಮಲೆನಾಡ ಗಿಡ್ಡ ಹೋರಿಯಿಂದ ಇಲ್ಲಿನ ಹಸುಗಳಿಗೆ ಕ್ರಾಸ್ ಮಾಡಿಸಿ ಅವುಗಳ ಸಂತತಿಯನ್ನು ಹೆಚ್ಚಳ ವಾಡುತ್ತಿದ್ದೇನೆ.

-ಜಯರಾಮ್, ನಾಟಿ ಹಸುಗಳ ಸಾಕಾಣಿಕೆ ವಾಡುತ್ತಿರುವ ಶಿಕ್ಷಕ.

 

ಆರೋಗ್ಯವಾಗಿದ್ದೇನೆ:

ನನಗೆ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಳವಾಗಿ ಉಸಿರಾಡಲು ಮತ್ತು ಓಡಾಡಲು ತೊಂದರೆ ಆಗುತ್ತಿತ್ತು. ನಾನು ಕಳೆದ ಆರು ತಿಂಗಳಿನಿಂದ ಬೆಳಿಗ್ಗೆ  ಮತ್ತು ಸಂಜೆ ೩೦ ಎಂ.ಎಲ್.ಗಳಷ್ಟು ಗೋಮೂತ್ರವನ್ನು ಸೇವಿಸುತ್ತಿದ್ದೇನೆ. ಇದರಿಂದ ನನ್ನ ದೇಹ ತೂಕ ಸುವಾರು ಐದು ಕೆ.ಜಿ. ಕಡಿಮೆಯಾಗಿದೆ.  ಈಗ ಉಸಿರಾಟದ ಸಮಸ್ಯೆ ಇಲ್ಲ. ಕೊಬ್ಬು ಕಡಿಮೆಯಾಗಿದೆ. ಇದರ ಜೊತೆಗೆ ನಾಟಿ ಹಸುವಿನ ಬೆರಣಿಯನ್ನು ಸಂಜೆಯ ಸಮಯದಲ್ಲಿ ಮನೆಯಲ್ಲಿ ಹಚ್ಚುತ್ತೇನೆ. ಈ  ಕಾರಣದಿಂದ ನಮ್ಮ ಮನೆುಂಲ್ಲಿ ಯಾವುದೇ ಕ್ರಿಮಿ ಕೀಟಗಳ ಹಾವಳಿ ಇಲ್ಲವಾಗಿದೆ.

-ನಾಗೇಶ್, ವಿದ್ಯುತ್ ಗುತ್ತಿಗೆದಾರರು, ಹೊಸ ಹೊಳಲು.