ನಾಳೆಯಿಂದ ನವರಾತ್ರಿ ಉತ್ಸವ ಆರಂಭ; ದುರ್ಗಾಪೂಜೆಗೆ ಹೀಗಿದೆ ಬಿಬಿಎಂಪಿ ಮಾರ್ಗಸೂಚಿ!

ಬೆಂಗಳೂರು: ನವರಾತ್ರಿ ಉತ್ಸವ ನಾಳೆಯಿಂದ 10 ದಿನಗಳ ಕಾಲ ನಡೆಯಲಿದ್ದು, ಎಲ್ಲೆಡೆ ದುರ್ಗಾದೇವಿಯ ಪೂಜಾ ಕೈಂಕರ್ಯ ಜರುಗಲಿದೆ. ಈ ನಡುವೆಯೂ ಕೊರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಿರುವ ಬೆಂಗಳೂರು ಬೃಹತ್‌ ಮಹಾನಗರಪಾಲಿಕೆ ದುರ್ಗಾದೇವಿ ಪೂಜೆ ನೇರವೇರಿಸಲು ಮಾರ್ಗಸೂಚಿಯನ್ನು ಹೊರಡಿಸಿದೆ.

ಹೀಗಿರಲಿದೆ ಮಾರ್ಗಸೂಚಿ
* ಅ.11ರಿಂದ 15ರ ವರೆಗೆ ನಗರದ ಯಾವುದೇ ಭಾಗದಲ್ಲಿ ನಗರವಾಸಿಗಳು 4 ಅಡಿಗಳಿಗಿಂತ ಹೆಚ್ಚು ಎತ್ತರದ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ.

* ಮೂರ್ತಿ ಸ್ಥಾಪನೆ ಮಾಡುವ ಮೊದಲು ಸುತ್ತಮುತ್ತ ಸ್ವಚ್ಛಗೊಳಿಸಬೇಕು, ಪ್ರತಿ ವಾರ್ಡ್ ಗೆ ಒಂದು ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಲು ಅನುಮತಿ, ಸರಳವಾಗಿ ಪ್ರಾರ್ಥನೆ, ಪೂಜೆಗಳಿಗೆ ಅವಕಾಶ.

* ಪ್ರಾರ್ಥನೆ ಸಲ್ಲಿಕೆ ವೇಳೆ 50ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ. ಪೂಜೆ-ಪುನಸ್ಕಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

* ಪೂಜೆ ನಂತರ ಸಿಹಿ ತಿನಿಸು, ಹಣ್ಣುಗಳು, ಹೂವುಗಳ ವಿತರಣೆಗೆ ಅವಕಾಶವಿಲ್ಲ.

* ಒಂದು ಬಾರಿಗೆ 100ಕ್ಕಿಂತ ಹೆಚ್ಚು ಮಂದಿಗೆ ಪ್ರವೇಶಕ್ಕೆ ಅವಕಾಶವಿಲ್ಲ.

* ದೇವಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಅಧಿಕ ಮಂದಿ ಸೇರುವುದಿಲ್ಲ, ಸಿಂಧೂರ ಖೇಲಾ ಎಂಬ ಆಟವನ್ನು ಹೆಚ್ಚು ಜನರು ಜಮಾಯಿಸಿ ಆಡುವಂತಿಲ್ಲ, 10 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

* ಡಿಜೆ/ ಧಾಕ್/ಡ್ರಮ್ಸ್ ನ್ನು ವಿಸರ್ಜನೆ ವೇಳೆ ಬಳಸುವಂತಿಲ್ಲ.

* ಸಾರ್ವಜನಿಕ ಟ್ಯಾಂಕ್/ ವಿಸರ್ಜನೆ ಕೊಳದಲ್ಲಿ ಗುರುತಿಸಿ ವಲಯ ಜಂಟಿ ಆಯುಕ್ತರು ಮತ್ತು ಪೊಲೀಸರು ಅನುಮತಿ ನೀಡಬೇಕು.

* ಜನರು ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.