ಮಂಡ್ಯ: ಸಿಸಿಟಿವಿ ಕ್ಯಾಮೆರಾ ಒಡೆದು ಹಾಕಿ ಮಹಿಳೆಯಿಂದ ಕಳ್ಳತನ

ಮಂಡ್ಯ: ಮಹಿಳೆಯೊಬ್ಬರು ತೋಟದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಒಡೆದು ಹಾಕಿ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಕೆ.ರಾಮೇಗೌಡ ಅವರು ತಮ್ಮ ತೋಟದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಶುಕ್ರವಾರ ತೋಟಕ್ಕೆ ಬಂದ ಮಹಿಳೆಯೊಬ್ಬಳು ಸಿಸಿಟಿವಿ ಕ್ಯಾಮೆರಾವನ್ನು ಕೋಲಿನಿಂದ ಹೊಡೆದು ಹಾಕಿ ನಂತರ ಕಳ್ಳತನ ಮಾಡಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.

ಸಿಸಿಟಿವಿ ಕ್ಯಾಮೆರಾವನ್ನು ಹೊಡೆದು ಹಾಕಿರುವ ಮಹಿಳೆ ಬಂಡಿಹೊಳೆ ಗ್ರಾಮದ ರಶ್ಮಿ ಎಂದು ಗುರುತಿಸಲಾಗಿದ್ದು, ಈ ಕುರಿತು ರಾಮೇಗೌಡರು ಕೆ.ಆರ್‌.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

× Chat with us