ಗುಂಡ್ಲುಪೇಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ನೌಕರರೊಬ್ಬರು ಆತ್ಮಹತ್ಯೆ!

ಗುಂಡ್ಲುಪೇಟೆ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಸಂಸ್ಕರಣ ಘಟಕದಲ್ಲಿ ಮಂಗಳವಾರ ಮಹಿಳಾ ನೌಕರರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.

ಹೊರೆಯಾಲ ಗ್ರಾಮದ ಸುಧಾ (47) ಆತ್ಮಹತ್ಯೆ ಮಾಡಿಕೊಂಡವರು.

ಮೃತ ಸುಧಾ ಅವರು ಬೇಗೂರು ಗ್ರಾಮದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದ ಆಹಾರ ಸಂಸ್ಕರಣ ಘಟಕದಲ್ಲಿ ಕೆಲ ವರ್ಷಗಳಿಂದ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದರು. ಪ್ರತಿದಿನ ಈ ಆಹಾರ ಸಂಸ್ಕರಣ ಘಟಕದಲ್ಲಿ 17 ಮಂದಿ ಮಹಿಳಾ ನೌಕರರು ಎರಡು ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದರು. ಹೊರೆಯಾಲದಿಂದ ಬರುತ್ತಿದ್ದ ಮೃತ ಮಹದೇವಮ್ಮ ಅವರು ಸೋಮವಾರ ಸಂಜೆ ಆಹಾರ ಸಂಸ್ಕರಣ ಘಟಕದ ಬೀಗದ ಕೀ ತೆಗೆದುಕೊಂಡಿದ್ದರು ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಬಂದ ಸಿಡಿಪಿಒ ಚೆಲುವರಾಜು ಅವರನ್ನು ಮೃತರ ಸಂಬಂಧಿಕರು ತರಾಟೆಗೆ ತೆಗೆದುಕೊಂಡರು. ನಿಮ್ಮ ಅವ್ಯವಹಾರಕ್ಕೆ ನಮ್ಮವರು ಬಲಿಯಾದರು ಎಂದು ಆಕ್ರೋಶ ವ್ಯಕ್ತಪಡಿಸಿದಲ್ಲದೇ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದರು. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us