ಕೋಳಿ ಅಂಗಡಿಯಲ್ಲಿ ಕುಳಿತಿದ್ದವರಿಗೆ ಲಾರಿ ಡಿಕ್ಕಿ, ಇಬ್ಬರು ಸಾವು; ಆಯುಧಪೂಜೆ ದಿನವೇ ದುರ್ಘಟನೆ

ಮದ್ದೂರು: ಚಾಲಕನ ನಿಯಂತ್ರಣ ತಪ್ಪಿ ಕೋಳಿ ಅಂಗಡಿ ಬಳಿ ಕುಳಿತಿದ್ದವರ ಮೇಲೆ ಲಾರಿ ಹರಿದಿದ್ದು, ಇಬ್ಬರು ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ನಡೆದಿದೆ. ಆಯುಧ ಪೂಜೆ ದಿನವೇ ಈ ದುರ್ಘಟನೆ ನಡೆದಿದೆ.

ಕೀಳಘಟ್ಟ ಗ್ರಾಮದ ಗಿರೀಶ್ ಶೆಟ್ಟಿ (50), ಎನ್.ಕೋಡಿ ಹಳ್ಳಿ ಗ್ರಾಮದ ಲೋಕೇಶ (44) ಮೃತ ದುರ್ದೈವಿಗಳು. ಗಿರೀಶ್ ಶೆಟ್ಟಿ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಲೋಕೇಶ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಕೋಳಿ ಅಂಗಡಿಯ ಮಾಲೀಕ ನಿಂಗೇಗೌಡಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us