ಮಧ್ಯಪ್ರದೇಶ : ತನ್ನ ಬೈಕಿನ ಕೀ ನೀಡಲು ನಿರಾಕರಿಸಿದ್ದಕ್ಕಾಗಿ ತಂದೆ ಮತ್ತು ಚಿಕ್ಕಪ್ಪ ಯುವಕನ ಥಳಿಸಿ ಕೈಯನ್ನು ಕತ್ತರಿಸಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಬಾಬಾಯಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.
ತಂದೆ ಮೋತಿ ಕಚ್ಚಿ (52) ಮೋಟಾರ್‌ಸೈಕಲ್‌ನ ಕೀಗಳನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾನೆ. “ಮೋತಿ ಕಚ್ಚಿ ಪೊಲೀಸರಿಗೆ ಶರಣಾಗಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅನ್ವಯ ಅವರನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಮೋತಿ ಬೈಕಿನ ಕೀಗಳನ್ನು ಕೇಳಿದಾಗ ಸಂತೋಷ್ ನೀಡಲು ನಿರಾಕರಿಸಿದ. ಇದು ತಂದೆಗೆ ಕೋಪ ತರಿಸಿತು. ಆತನೊಂದಿಗೆ ಜಗಳವಾಡುತ್ತಿದ್ದ ಸಂತೋಷ್‌ಗೆ ತಂದೆ ಮತ್ತು ಆತನ ಸಹೋದರ ರಾಮ್ ಕಿಶನ್ ಥಳಿಸಿದ್ದಾರೆ. ಮೋತಿ ಸಮೀಪದಲ್ಲಿ ಬಿದ್ದಿದ್ದ ಕೊಡಲಿಯನ್ನು ಎತ್ತಿಕೊಂಡು ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಯುವಕನ ಎಡಗೈಯನ್ನು ಕತ್ತರಿಸಿದ್ದಾನೆ” ಎಂದು ವರದಿಗಳು ತಿಳಿಸಿವೆ.
ಸಂತೋಷ್ ಹೆಂಡತಿ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಬಲ್ಪುರಕ್ಕೆ ಕರೆದೊಯ್ಯಲಾಗಿತ್ತು ಆದರೆ ಮತ್ತು ದಾರಿಯಲ್ಲಿ ಗಾಯಗೊಂಡು ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಮೋತಿ ಕಚ್ಚಿ ಕೈ ಮತ್ತು ಕೊಡಲಿಯೊಂದಿಗೆ ಬಾಬಾಯಿ ಪೊಲೀಸ್ ಠಾಣೆಗೆ ಹೋದರು ಎಂದು ವರದಿಗಳು ತಿಳಿಸಿವೆ. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.