ಚಂಡೀಗಡ : ಗಗನಸಖಿಯೊಂದಿಗೆ ಅಸಭ್ಯ ರೀತಿಯಾಗಿ ವರ್ತರಿಸಿದ ವ್ಯಕ್ತಿಯನ್ನು ಪುಲೀಸರು ಬಂಧಿಸಿರುವ ಘಟನೆ ಇಂಡಿಗೋ ಏರ್ಲೈನ್ ವಿಮಾನದಲ್ಲಿ ನಡೆದಿದೆ.
ಮೊಹಮ್ಮದ್ ಡ್ಯಾನಿಶ್ ಎಂಬ ವ್ಯಕ್ತಿಯೇ ಬಂಧಿತ ಆರೋಪಿಯಾಗಿದ್ದು ಈತ ಶ್ರೀನಗರದಿಂದ ಲಕ್ನೋಗೆ ಅಮೃತಸರದ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆಕೆಯೊಡನೆ ಮಿತಿಮೀರಿ ಮಾತಿಗಿಳಿದಿದ್ದಾನೆ. ಈ ವಿಚಾರವನ್ನು ಆಕೆ ತಮ್ಮ ಕ್ಯಾಪ್ಟನ್ ಗೆ ತಿಳಿಸಿದ್ದಾರೆ. ಬಳಿಕ ಅಮೃತಸರದ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ವಿಮಾನವನ್ನು ಅಮೃತಸರದಲ್ಲಿ ಭೂಸ್ಪರ್ಶ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ನಂತರ ಜಾಮೀನಿನ ಮೇಳೆ ಆತನನ್ನು ಬಿಡುಗಡೆಗೊಳಿಸಲಾಯಿತು.