ಠಾಣೆಯಲ್ಲೇ ಕುಸಿದು ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್; ನಿನ್ನೆ-ಮೊನ್ನೆ ನಮ್ಮ ಜನ

‘ಪ್ರಮೋಷನ್ ಟೈಮಿನಲ್ಲಿ ಹೀಗಾಗಬಾರದಿತ್ತು ಎಂಬ ಮಾತು ಕೇಳಿ ಅದುರಿಬಿದ್ದಿದ್ದೆ’

ಭಾಗ- ೬
(ಹಿಂದಿನ ಸಂಚಿಕೆಯಿಂದ)
ಲಾಕಪ್ ಡೆತ್ತಿನ ಮೊದಲ ತನಿಖಾ ಕ್ರಮವೇ ಸಂಬಂಧಿಸಿದ ಅಧಿಕಾರಿಗಳ ದಸ್ತಗಿರಿ. ಒಮ್ಮೆ ಜೈಲಿಗೆ ಹೋದರೆ ಆರೇಳು ತಿಂಗಳು ಸುತಾರಾಂ ಜಾಮೀನು ಸಿಕ್ಕುವುದಿಲ್ಲ. ಪೊಲೀಸರಿಗೆ ಹೆಚ್ಚುವರಿ ಶಿಕ್ಷೆ (eಟಿhಚಿಟಿಛಿeಜ ಠಿuಟಿishmeಟಿಣ!) ಇರುವುದರಿಂದ ಜಾಮೀನು ಸಾಧ್ಯವಿಲ್ಲ. ಯಾರೂ ನೆರವಿಗೆ ನಿಲ್ಲುವುದಿಲ್ಲ. ಟೀಕೆಗಳ ಮಹಾಪೂರವೇ ಹರಿಯುತ್ತದೆ. ಪ್ರತಿಭಟನೆಗಳು ಶುರುವಾಗುತ್ತವೆ. ಮಾಧ್ಯಮಗಳು ಕಾರುತ್ತವೆ. ಕೇಸಿನ ತನಿಖೆಯನ್ನು ಸಿಐಡಿ ಕೈಗೊಳ್ಳುತ್ತದೆ.
ನಾನೂ ಸಿಐಡಿಯಲ್ಲಿ ಕೆಲಸ ಮಾಡಿದ್ದೆ. ರಿಪೋರ್ಟ್ ಮಾಡಿಕೊಳ್ಳುವಾಗ ಮೇಲಧಿಕಾರಿಗಳು ಎಚ್ಚರಿಸಿದ್ದರು.
“ನಾವುಗಳು ಕೆಲಸ ಮಾಡಬೇಕಾಗಿರೋದೇ ನಮ್ಮ ಇಲಾಖೆಯವರ ವಿರುದ್ಧ ಕಣ್ರೀ. ಒಂದು ಚೂರು ಎಡವಟ್ಟಾದರೂ ಜನ ಸಿಓಡಿ ಮೇಲೆ ದೊಡ್ಡ ಆಪಾದನೆ ಮಾಡುತ್ತಾರೆ. ಕೊಲೆಗಡುಕ ಪೊಲೀಸರನ್ನು ಬಚಾವ್ ಮಾಡಲು ಕೇಸನ್ನೇ ತಿರುಚಿದ್ದಾರೆ ಹಾಗೆ ಹೀಗೆ ಎಂದು ಇಲ್ಲದ ಕಾಂಟ್ರೋವರ್ಸಿಗಳನ್ನು ಸೃಷ್ಟಿಸುತ್ತಾರೆ. ನೀವದಕ್ಕೆ ಒಂದಿಷ್ಟೂ ಆಸ್ಪದ ಕೊಡಕೂಡದು. ನಿಮ್ಮ ಸ್ವಂತ ತಮ್ಮನೇ ಸಿಲುಕಿದ್ದರೂ ಅಪರಾಧಿ ಅಪರಾಧಿಯೇ. ಯಾರಿಗೋ ಸಹಾಯ ಮಾಡಲು ಹೋಗಿ ನಾವೇ ಇಲ್ಲದ ಕೋಟಲೆಗೆ ಸಿಕ್ಕಿ ಹಾಕಿಕೊಳ್ಳುವಂತೆ ಆಗಬಾರದು”
ಎಂದು ಅನೇಕ ಪ್ರಸಂಗಗಳನ್ನು ಉದಾಹರಣೆಯಾಗಿ ಹೇಳಿದ್ದರು.
ಹಾಡಹಗಲೇ ಎಲ್ಲರೆದುರಿಗೆ ಕೊಲೆ ಮಾಡಿದವ ಹೇಗಾದರೂ ಬಚಾವಾಗಬಹುದು. ಪೊಲೀಸ್ ಮಾತ್ರ ಬಚಾವಾಗಲಾರ. ಅವನ ವಶದಲ್ಲಿರಲಿ ಬಿಡಲಿ, ಠಾಣಾ ಆವರಣದಲ್ಲಿ ಯಾರೇ ಸತ್ತರೂ ಅದರ ಜವಾಬ್ದಾರಿ ಠಾಣಾಧಿಕಾರಿಯ ಮೇಲೆ ತೂಗುಗತ್ತಿಯಾಗಿ ನಿಂತಿರುತ್ತದೆ. ಶಿಕ್ಷೆಯ ಪ್ರಮಾಣವೂ ಹೆಚ್ಚು. ಉಳಿದವರಿಗೆ ಜೀವಾವಧಿ ಶಿಕ್ಷೆ ನೀಡಿದರೆ, ಪೊಲೀಸರಿಗೆ ‘ಸಾಯುವ ತನಕ ಜೀವಾವಧಿ ಶಿಕ್ಷೆ’ ವಿಧಿಸುತ್ತಾರೆ.
ಡಾ.ಚೆಲುವರಾಜು ಅವರು ಪ್ರಾಸಂಗಿಕವಾಗಿ ಹೇಳಿದ ಮಾತು ಬೇರೆ ಕೊರೆಯುತ್ತಿತ್ತು:
ಈ ಡಯಾಬಿಟಿಕ್ ಪೇಷಂಟ್‌ಗಳ ಕಂಡೀಷನ್ ಹೀಗೇ ಅಂತ ಹೇಳೋದಿಕ್ಕೆ ಆಗೋದಿಲ್ಲ. ಚೆನ್ನಾಗೇ ಇರ್ತಾರೆ. ಇದ್ದಕ್ಕಿದ್ದಂತೆ ಸೈಲೆಂಟಾಗಿ ಮಲ್ಟಿಪಲ್ ಹಾರ್ಟ್ ಅಟ್ಯಾಕ್ಸ್ ಆಗಿ ಬಿಡುತ್ತದೆ! ತುಂಬಾ ಕೇರ್‌ಫುಲ್ ಆಗಿ ಮಾನಿಟರ್ ಮಾಡಬೇಕು”.
ಈ ಮಾತು ಊರಿಗೆ ಹೋಗಬೇಕೆಂದಿದ್ದ ನನ್ನ ಧೈರ್ಯವನ್ನೇ ಉಡುಗಿಸಿಬಿಟ್ಟಿತು. ರಜೆಯ ಮಜಾವನ್ನು ಕ್ಯಾನ್ಸಲ್ ಮಾಡಿ ತುಮಕೂರಿನಲ್ಲಿ ಉಳಿದುಬಿಟ್ಟೆ. ನಡುರಾತ್ರಿಯಾದರೂ ಲೋಕಾಯುಕ್ತ ಸಿಬ್ಬಂದಿ ಆಸ್ಪತ್ರೆ ಬಿಟ್ಟು ಕದಲಲಿಲ್ಲ. ವೈದ್ಯರು ಅಪಾಯವಿಲ್ಲ ಎಂದು ಹೇಳಿದ್ದರೂ ಯಾರಿಗೂ ಸಮಾಧಾನ ಉಳಿಯಲಿಲ್ಲ.
ಪೊಲೀಸ್ ಕಮೀಷನರ್ ಸಿ.ಚಂದ್ರಶೇಖರ್ ಅವರು ಒಮ್ಮೆ  ಹೇಳಿದ್ದ ಎಚ್ಚರಿಕೆ ಗಂಟೆ ತಲೆಯಲ್ಲಿ ರಿಂಗಣಿಸುತ್ತಿತ್ತು. ಅವರ ಮಾತುಗಳಲ್ಲೇ ಹೇಳಬೇಕೆಂದರೆ, “ಠಾಣೆಗೆ ಯಾರೇ ಬರಲಿ ಅವರ  ಕ್ಷೇಮ ಮತ್ತು ರಕ್ಷಣೆ ೧೦೦% ನಿಮ್ಮದೇ ಹೊಣೆ. ಪೊಲೀಸಿನಲ್ಲಿ ನಾನು ನೋಡಿರುವ ಮತ್ತು ಅನುಭವಿಸಿರುವ ಅತ್ಯಂತ ಕ್ಲಿಷ್ಟಕರ ಸಮಸ್ಯೆ ಎಂದರೆ ಅದು ಕಸ್ಟೋಡಿಯಲ್ ಡೆತ್.
ಈ ಸಾವಿನ ಸುತ್ತಲಿನ ಸಂದರ್ಭಗಳು ಇದರ ಸಂಕೀರ್ಣತೆಯನ್ನು ಉಲ್ಬಣಗೊಳಿಸುತ್ತವೆ.
ಈ ದುಸ್ಥಿತಿ ಯಾರಿಗೂ ಬೇಡ. ನಿಮ್ಮ ಕೈವಾಡವೇ ಇಲ್ಲದೆ ಕೂಡ ಒಬ್ಬಾತ ನಿಮ್ಮ ಠಾಣೆಯಲ್ಲಿ ಸಾಯಬಹುದು. ಇದನ್ನು ಸಾರ್ವಜನಿಕರಾಗಲೀ, ಮಾಧ್ಯಮದವರಾಗಲೀ,ಮೇಲಧಿಕಾರಿಗಳಾಗಲೀ ನಂಬಲಾರರು. ಹೆಚ್ಚೇಕೆ? ನಿಮ್ಮ ಮನೆಯವರೂ ನಂಬಲಾರರು! ಲಾಕಪ್ ಡೆತ್ ನ ದುರದೃಷ್ಟವೇ ಹಾಗೆ. Iಣ’s ಚಿ siಣuಚಿಣioಟಿ ಣhಚಿಣ ಡಿeಟಿಜeಡಿs ಥಿou boಣh moಡಿಚಿಟಟಥಿ ಚಿಟಿಜ sಠಿiಡಿiಣuಚಿಟಟಥಿ ಜeಜಿuಟಿಛಿಣ.
“ಹೀಗಾದರೆ ಭಗವಂತನೂ ನಿಮ್ಮನ್ನು ಬಚಾವು ಮಾಡಲಾರ. ಲಾಕಪ್ ಡೆತ್‌ನಂತಹ ದುಸ್ಥಿತಿಯನ್ನು ನನ್ನ ಪರಮ ಶತ್ರುವಿಗೂ ನಾನು ಬಯಸೋದಿಲ್ಲ. ಅಂತಹ hಚಿzಚಿಡಿಜousಟಥಿ ಜಚಿಟಿgeಡಿ ಅದು. ಠಾಣೆಯಲ್ಲಿ ಮಾತ್ರ ಯಾವುದೇ ಹಿಂಸೆಗೂ ಅವಕಾಶ ಕೊಡಬೇಡಿ” ಎಂದು ಖಡಾಖಂಡಿತವಾಗಿ ಹೇಳಿದ್ದರು. ಅನೇಕ ಪ್ರಸಂಗಗಳನ್ನೂ ಉದಾಹರಿಸಿದ್ದರು. ಅವೆಲ್ಲವೂ ಭಯಂಕರ ಪಿಶಾಚಿಗಳಾಗಿ ಈಗ ಕಾಡತೊಡಗಿದವು.
ಮಾರನೆಯ ದಿನವೂ ಆರ್.ಐ. ನ ಪರಿಸ್ಥಿತಿ ಸುಧಾರಿಸಲಿಲ್ಲ. ಆತ ಮಾತೇ ಆಡುತ್ತಿರಲಿಲ್ಲ. ಏನೋ ಶಾಕ್‌ಗೆ ಒಳಗಾದವನಂತೆ ದಿಗ್ಭ್ರಮೆಯಲ್ಲಿದ್ದ.
ಆ ಡ್ಯೂಟಿ ಡಾಕ್ಟರೂ, “ಬಿಪಿ, ಶುಗರ್ ನಾರ್ಮಲ್. ಎಲ್ಲವೂ ಸ್ಟೇಬಲ್ ಆಗಿರುವಂತೆ ಕಾಣಿಸುತ್ತಿದೆ. ಆದರೆ ಕ್ರಾನಿಕ್ ಡಯಾಬಿಟಿಕ್ಸ್‌ಗಳ ಕೇಸನ್ನು ಹೀಗೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಸಡನ್ನಾಗಿ ಕೊಲ್ಯಾಪ್ಸ್ ಆಗಿ ಬಿಡಬಹುದು” ಎಂದುಬಿಟ್ಟರು.
ಜೀವ ಧಗ್ ಎಂದಿತು. ಲಾಕಪ್ ಡೆತ್‌ಗಳ ಅಗ್ನಿಕುಂಡವನ್ನು ಹಾದುಬಂದಿದ್ದ ಅನೇಕ ಅಧಿಕಾರಿಗಳನ್ನು ಸಂಪರ್ಕಿಸಿದೆ. ಅವರ ಅನುಭವ ಕೇಳಿ ನಡುಗಿಹೋದೆ.
ಒಬ್ಬರು ಅಂದರು:
“ರಂಗಣ್ಣಾ ನಿಮ್ಮ ಪ್ರಮೋಷನ್ ಟೈಮಿನಲ್ಲಿ ಹೀಗಾಗಬಾರದು. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿಬಿಡುತ್ತದೆ. ಮಿನಿಮಮ್ ಮೂರು ಸೈಟು ಮಾರಬೇಕಾಗುತ್ತದೆ!”
“ಅವನ ಮೈ ಕೂಡ ಮುಟ್ಟಿಲ್ಲ. ಠಾಣೆಗೆ ಬಂದಿದ್ದವನು ಕುಸಿದು ಬಿದ್ದಿದ್ದಾನೆ. ಸೈಟು ಮಾರುವಷ್ಟು ಸೀರಿಯಸ್ಸಾ ಸಾರ್?” ಎಂದೆ ಅದುರಿದ ದನಿಯಲ್ಲಿ.
“ಪೊಲೀಸ್ ಅಧಿಕಾರಿ ತಗುಲಿಕೊಂಡಿದ್ದಾನೆ ಅಂದ್ರೆ ಯಾರಿಗೂ ಕರುಣೆ ಇರೋದಿಲ್ಲ ಕಣ್ರೀ. ಆರ್.ಐ. ಕಡೆಯವರು ಮಿನಿಮಮ್ ನಲವತ್ತು ಲಕ್ಷ ಕೊಡಿ ಅಂತಾರೆ. ಅದನ್ನು ಇಪ್ಪತ್ತು ಲಕ್ಷಕ್ಕೆ ಸೆಟಲ್ ಮಾಡ್ತೀನಿ ಅಂತ ಬರುವ ಪುಢಾರಿ ಐದು ಲಕ್ಷ ಪೀಕುತ್ತಾನೆ. ಲಾಕಪ್ ಡೆತ್ ತನಿಖಾಧಿಕಾರಿ, ಪೋಸ್ಟ್‌ಮಾರ್ಟಂ ಮಾಡೋ ಡಾಕ್ಟ್ರು ಎಂಥವರೋ ಗೊತ್ತಿಲ್ಲ. ಅವರೂ ಲಂಚಕೋರರಾಗಿದ್ದರೆ ಇನ್ನೆರಡು ಸೈಟು ಅವರಿಗಾಗುತ್ತೆ! ಸಾಕ್ಷಿಗಳೂ ಪೀಕುತ್ತಾರೆ. ಹೀಗೇ ಖರ್ಚಿನ ಸಾಲು ಸಾಲೇ ಇದೆ”.
ಅವರ ಒಂದೊಂದು ಮಾತಿಗೂ ಹೌಹಾರುತ್ತಾ ಹೋದೆ.
“ಅಲ್ಲಿಗೆ ಹೋದ ಮೇಲೆ ನೀವೆಷ್ಟು ಲೋಕಾಯುಕ್ತ ಕೇಸು ಮಾಡಿದ್ದೀರಿ?”
“ಒಂದು ನೂರೋ ನೂರಿಪ್ಪತ್ತೋ ಕೇಸು ಮಾಡಿದ್ದೇನೆ”.
“ಅಂದರೆ ನೂರಿಪ್ಪತ್ತು ಜನರ ಮನೆ ಹಾಳು ಮಾಡಿದ್ದೀರಿ! ಅವರೆಲ್ಲಾ ಸುಮ್ಮನಿರ್ತಾರೇನ್ರೀ?
ನಿಮ್ಮ ಮೇಲೆ ಒಳಗೊಳಗೇ ಮಸೆಯುತ್ತಾ ಇರ್ತಾರೆ. ನೀವು ಸಿಕ್ಕಿ ಹಾಕಿಕೊಂಡಿರಿ ಅಂದ್ರೆ ಅವರೆಲ್ಲಾ ಒಟ್ಟಿಗೆ ಅಗತುಕೊಳ್ತಾರೆ. ಇಲ್ಲದ್ದನ್ನು ಚುಚ್ಚಿಕೊಟ್ಟು ಏನು ಬೇಕಾದರೂ ಮಾಡ್ತಾರೆ. ಹಂಗಂತ ಹೆದರಬೇಡಿ. ಅವನಿಗೆ ಏ ಒನ್ ಟ್ರೀಟ್ ಮೆಂಟ್ ಕೊಡಿಸಿ. ಎಷ್ಟು ಖರ್ಚಾದರೂ ಪರ್ವಾಗಿಲ್ಲ. ಂ sಣiಣಛಿh iಟಿ ಣime sಚಿves ಟಿiಟಿe. ಈಗ ಒಂದು ತೇಪೆ ಹಾಕಿದರೆ ಇನ್ನು ಹತ್ತು ತೇಪೆ ಹಾಕೋದನ್ನು ತಡೀಬಹುದು. ಆಗೋದಾದರೆ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೇ ಕರೆದುಕೊಂಡು ಹೋಗಿ ಟ್ರೀಟ್‌ಮೆಂಟ್ ಕೊಡಿಸಿಬಿಡಿ. ದುಡ್ಡಿನ ಮುಖ ನೋಡ್ಬೇಡಿ”
ಆ ದಿನವೂ ನನ್ನ ನಿದ್ದೆ ಹೋಯಿತು. ಅವನ ಸಾವಿಗಾಗಿ ಎದುರು ನೋಡುವುದೋ ಅಥವಾ ಬದುಕುತ್ತಾನೆಂಬ ಭರವಸೆ ಇಟ್ಟುಕೊಂಡು ಕಾಯುವುದೋ ಗೊತ್ತಾಗದೆ ತತ್ತರಿಸಿ ಹೋದೆ.
“ಕ್ರಾನಿಕ್ ಡಯಾಬಿಟಿಕ್ಸ್‌ಗಳ ಕೇಸನ್ನು ಹೀಗೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಇದ್ದಕ್ಕಿದ್ದಂತೆ  ಸೈಲೆಂಟಾಗಿ ಮಲ್ಟಿಪಲ್ ಹಾರ್ಟ್ ಅಟ್ಯಾಕ್ಸ್ ಕೂಡಾ ಆಗಿಬಿಡಬಹುದು…!” ಮಾತುಗಳು ಪಲ್ಟಿ ಹೊಡೆಸತೊಡಗಿದವು. ತಲ್ಲಣಿಸಿಹೋದೆ.
ಸೋಮವಾರ ಪರೀಕ್ಷಿಸಿದ ವೈದ್ಯರು ಜಿiಣ ಚಿಟಿಜ ಜಿiಟಿe ಎಂದು ಹೇಳಿ ಡಿಸ್ಚಾರ್ಜ್ ಮಾಡಿದರು. ಅವನಿಗಂತೂ ರಾಜೋಪಚಾರ. ಸಿಬ್ಬಂದಿಗಳಿಂದ ಭರವಸೆಗಳ ಪಂಪು ಪರಾಕು. ನಾನಂತೂ ಅತ್ಯಂತ ಗೌರವದಿಂದ ಕಕ್ಕುಲತೆ ತುಳುಕಿಸಿ ಅವನನ್ನು ಬೀಳ್ಕೊಂಡೆ!
ಆರೇಳು ತಿಂಗಳು ಕಳೆಯಿತು.
“ಫಸ್ಟು ಶುಗರ್ ಡೌನ್ ಆಗಿದ್ದು ನಿಜ. ಆ ಇನ್ಸ್‌ಪೆಕ್ಟರ್‌ಗೆ ಬೇಧಿ ಕೀಳಿಸಲು ಸಾಯುವವನಂತೆ ಡ್ರಾಮಾ ಮಾಡಿದೆ” ಎಂದು
ಆ ಆರ್.ಐ. ಬಾಬು ಅನೇಕರ ಬಳಿ ಕೊಚ್ಚಿಕೊಂಡದ್ದು ತಿಳಿಯಿತು.
(ಮುಗಿಯಿತು)

× Chat with us