ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮುಂಬ್ರಾ ಪ್ರದೇಶದಿಂದ 130 ಗ್ರಾಂ ನಿಷೇಧಿತ ಡ್ರಗ್ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದ್ದು, 47 ವರ್ಷದ ಮಹಿಳೆಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮಹಿಳೆ ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ದಂಧೆಯ ಭಾಗವಾಗಿದ್ದಳು ಮತ್ತು ಈ ವರ್ಷ ಎನ್ಸಿಬಿಯ ಮುಂಬೈ ವಲಯ ಘಟಕವು ದಾಖಲಿಸಿದ ಅನೇಕ ಪ್ರಕರಣಗಳಲ್ಲಿ ಪ್ರಮುಖ ಶಂಕಿತಳಾಗಿದ್ದಳು.ವ್ಯಾಪಕ ಕಣ್ಗಾವಲಿನ ನಂತರ ಶುಕ್ರವಾರ ಆಕೆಯನ್ನು ಬಂಧಿಸಲಾಯಿತು ಎಂದು ಎನ್ಸಿಬಿ ಅಧಿಕಾರಿ ತಿಳಿಸಿದ್ದಾರೆ.
ವಿವಿಧ ಪೆಡ್ಲರ್ ಸಿಂಡಿಕೇಟ್ಗಳಿಗೆ ಸರಬರಾಜು ಮಾಡುತ್ತಿದ್ದಳು ಮತ್ತು ಈ ವರ್ಷದ ಮಾರ್ಚ್ನಲ್ಲಿ ಭಾರಿ ಪ್ರಮಾಣದ ನಗದು ಮತ್ತು ಚಿನ್ನದೊಂದಿಗೆ 1.17 ಕೆ.ಜಿ ಚರಸ್ ಅನ್ನು ವಶಪಡಿಸಿಕೊಂಡ ನಂತರ ಏಜೆನ್ಸಿಯ ರಾಡಾರ್ಗೆ ಬಂದಿದ್ದಳು. ಕಳೆದ ತಿಂಗಳು 20.5 ಕೆಜಿ ಗಾಂಜಾ ವಶಪಡಿಸಿಕೊಂಡು ಸರಬರಾಜುದಾರ ಸೇರಿದಂತೆ ಇಬ್ಬರನ್ನು ಬಂಧಿಸಲು ಇದು ಕಾರಣವಾಗಿತ್ತು. ಅವರಲ್ಲಿ ಒಬ್ಬ ಮಹಿಳೆಯ ಪ್ರಮುಖ ಸಹಚರರಾಗಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಆಕೆ ಸುಮಾರು ಹತ್ತು ವರ್ಷಗಳಿಂದ ಮಾದಕವಸ್ತು ವ್ಯಾಪಾರ ಮಾಡುತ್ತಿದ್ದಳು ಮತ್ತು ಅನೇಕ ಅಂತಾರಾಜ್ಯ ಕಳ್ಳಸಾಗಣೆದಾರರೊಂದಿಗೆ ಸಂಪರ್ಕವನ್ನು ಹೊಂದಿದ್ದಳು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.