ಮೈಸೂರು : ಆನ್ಲೈನ್ ಲೋನ್ ಆ್ಯಪ್ ಮೂಲಕ ಸಾಲ ನೀಡುವುದಾಗಿ ಮಹಿಳೆಯೊಬ್ಬರಿಗೆ 8.28 ಲಕ್ಷ ರೂ. ವಂಚಿಸಲಾಗಿದೆ.
ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಜಾಜ್ ಫಿನ್ಯಾನ್ಸ್ ನ ಹೆಸರು ಹೇಳಿ ಕರೆ ಮಾಡಿದ್ದು, ನೀವು ಆನ್ಲೈನ್ ಲೋನ್ ಆ್ಯಪ್ಗೆ ಅಪ್ಲೈ ಮಾಡಿದ್ದು, ಹಣ ಮಂಜೂರು ಮಾಡಲು ಪೋಟೊ, ಪಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲಾತಿಗಳು ಬೇಕಿದ್ದು, ಪ್ರೊಸೆಸಿಂಗ್ ಚಾರ್ಜ್, ಟಿಡಿಎಸ್ ಚಾರ್ಜ್, ಇನ್ಸುರೆನ್ಸ್ ಚಾರ್ಜ್ ಕಟ್ಟುಬೇಕು ಎಂದು ಹೇಳಿ 8,28,135 ಲಕ್ಷ ರೂ.ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ. ಈ ಸಂಬಂಧ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.