ಮೈಸೂರು| ಹುಡುಗರ ನಡುವೆ ಹೊಡೆದಾಟ: ಒಬ್ಬನ ಹತ್ಯೆ!

ಮೈಸೂರು: ಇಲ್ಲಿನ ಗುಂಡೂರಾವ್‌ ನಗರದ ಬಳಿ ಹುಡುಗರ ನಡುವೆ ಹೊಡೆದಾಟವಾಗಿದ್ದು, ಘಟನೆಯಲ್ಲಿ ಒಬ್ಬನ ಬರ್ಬರ ಹತ್ಯೆಯಾಗಿರುವ ಘಟನೆ ಭಾನುವಾರ ನಡೆದಿದೆ.

ನಂದಕಿಶೋರ್‌ ಅಲಿಯಾಸ್‌ ಗಳಗಳ (24) ಕೊಲೆಯಾದ ವ್ಯಕ್ತಿ.

ʻನಿನ್ನ ಜೊತೆ ಮಾತನಾಡಬೇಕು ಬಾʼ ಎಂದು ಖಾಲಿ ನಿವೇಶನವೊಂದರ ಬಳಿ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ನಗರ ಪೊಲೀಸ್‌ ಆಯುಕ್ತರು ಡಾ. ಚಂದ್ರಗುಪ್ತ ಈ ಸಂಬಂಧ ಮಾಹಿತಿ ನೀಡಿದ್ದಾರೆ.

× Chat with us