ನಂಜನಗೂಡು : ಹತ್ತು ದಿನಕ್ಕೆ ಮುರಿದು ಬಿತ್ತು ಗೃಹಿಣಿ-ಅರ್ಚಕನ ಲವ್ವಿಡವ್ವಿ ಆಟ

ಮೈಸೂರು : ಎರಡು ಮಕ್ಕಳ ತಾಯಿಯೊಬ್ಬಳು ಅರ್ಚಕನೊಬ್ಬನ ಪ್ರೀತಿಯಲ್ಲಿ ಬಿದ್ದು ಇದೀಗ ಬೀದಿ ಪಾಲಾಗಿದ್ದಾಳೆ. ಗೃಹಿಣಿಯನ್ನು ಪ್ರೀತಿಸಿ ಮದುವೆಯಾಗುವ ನಾಟಕವಾಡಿ ತನ್ನ ದೈಹಿಕ ಬಯಕೆ ತೀರಿಸಿಕೊಂಡು ಅರ್ಚಕ ಕೈಕೊಟ್ಟು ಪರಾರಿಯಾಗಿರುವ ಘಟನೆ ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ ನಡೆದಿದೆ.

ಗೃಹಿಣಿ ತಮ್ಮ ಕುಟುಂಬದ ವೈಯುಕ್ತಿಕ ಸಮಸ್ಯೆಗಳಿಗೆ ಪರಿಹಾರವನ್ನು ಕೇಳಲು ದೇವಸ್ಥಾನಕ್ಕೆ ಹೋಗಿತ್ತಿದ್ದಳು, ಅಲ್ಲಿದ್ದ 28 ವರ್ಷದ ಅರ್ಚಕ ಸಂತೋಷ್ ಎಂಬ ವ್ಯಕ್ತಿಯ ಜೊತೆ ಸ್ನೇಹ ಬೆಳೆದು, ಬಳಿಕ ಇಬ್ಬರೂ ಮದುವೆಯಾವುದಾಗಿ ನಿರ್ಧರಿಸಿದ್ದು. ಸಂತೋಷ್ ಆಕೆಯೊಟ್ಟಿಗೆ ಎಲ್ಲೆಡೆ ಸುತ್ತಾಡಿ,ದೖೆಹಿಕ ಸಂಬಂಧ ಬೆಳೆಸಿಕೊಂಡಿದ್ದು ಇದೀಗ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಬಿಟ್ಟು ಪರಾರಿಯಾಗಿದ್ದಾನೆ. ಇದೀಗ ಗೃಹಿಣಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು ತನ್ನ ಅಳಲನ್ನು ಗ್ರಾಮಸ್ಥರ ಬಳಿ ತೊಡಿಕೊಂಡಿದ್ದಾಳೆ. ಗ್ರಾಮಸ್ಥರು ಹುಲ್ಲಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು. ಗೃಹಿಣಿಯನ್ನು ರಕ್ಷಿಸಲಾಗಿದ್ದು, ಅರ್ಚಕ ಸಂತೋಷ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.