ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ತಮಿಳು ಜನರ ಪಾಲಿನ ಅಮ್ಮಾ ಪುರುಚ್ಚಿ ತಲೈವಿ, ಜಯಲಲಿತಾ ಸಾವಿನ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಜಯಲಲಿತಾ ಸಾವಿಗೆ ಕಾರಣ ಏನು ಅಂತ ತಮಿಳುನಾಡಿನ ಜನರು, ಅವರ ಅಭಿಮಾನಿಗಳು ಚರ್ಚಿಸುತ್ತಲೇ ಇದ್ದಾರೆ.
ಇಂತಹ ಹೊತ್ತಲ್ಲೇ ಸ್ಫೋಟಕ ವರದಿಯೊಂದು ಹೊರಬಿದ್ದಿದೆ. ಜಯಲಲಿತಾ ಸಾವಿನಲ್ಲಿ ಅವರ ಪರಮಾಪ್ತೆ ಶಶಿಕಲಾ ಕೈವಾಡ ಇದೆಯಾ ಎಂಬ ವಿಚಾರ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಜಯಾ ಸಾವಿಗೆ ಅವರ ಆಪ್ತೆ ವಿಕೆ ಶಶಿಕಲಾ ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮೂವರು ಕಾರಣ ಅಂತ ಎಂದು ನ್ಯಾ. ಆರ್ಮುಗಸ್ವಾಮಿ ಆಯೋಗ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ.
ಜಯಾ ಸಾವಿನ ಕುರಿತಂತೆ ತನಿಖೆಗೆ ಈ ಹಿಂದಿನ ಎಐಎಡಿಎಂಕೆ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಆರ್ಮುಗಸ್ವಾಮಿ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಆರ್ಮುಗಸ್ವಾಮಿ ಆಯೋಗವು ಸ್ಟಾಲಿನ್ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 608 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದೆ