ಮೈಸೂರು : ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ದುಷ್ಟ ಪತಿಯೊಬ್ಬ, ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ವರುಣಾ ಬಳಿಯ ಚೆಟ್ಟನಹಳ್ಳಿಯಲ್ಲಿ ನಡೆದಿದೆ. ನಲವತ್ತು ವರ್ಷದ ಪುಟ್ಟಮ್ಮ ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ಪತಿ ದೇವರಾಜ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದಂಪತಿಗೆ ಕಾಲೇಜಿಗೆ ಹೋಗುವ 20 ವರ್ಷದ ಮಗಳಿದ್ದಾಳೆ. ಹೀಗಿದ್ದರೂ, ಆತ ತನ್ನ ಪತ್ನಿಯ ಶೀಲ ಶಂಕಿಸಿ ಜಗಳ ತೆಗೆಯುತ್ತಿದ್ದ. ಅದು ತಾರಕಕ್ಕೇರಿ ಆಕೆಯ ರುಂಡವನ್ನೇ ಕತ್ತರಿಸಿದ್ದಾನೆ. ಮಗಳು ಕಾಲೇಜಿಗೆ ಹೋಗಿದ್ದ ವೇಳೆ ಆರೋಪಿ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ ದೇವರಾಜ್, ನಂತರ ಎರಡನೇ ಮದುವೆಯಾಗಿ ಈಗ ಆಕೆಯನ್ನು ಕೂಡ ಕೊಲೆ ಮಾಡಿದ್ದಾನೆ.