ಜಮ್ಮು : ಇಲ್ಲಿನ ಬಂಧೀಖಾನೆ ಡಿಜಿಪಿ ಹೇಮಂತ್ ಲೋಹಿಯಾ ಅವರನ್ನು ಕತ್ತು ಸಿಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಲೋಹಿಯಾ ಅವರ ಮೃತ ದೇಹವು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇವರು ತಮ್ಮ ಮನೆ ಕೆಲಸದ ನೌಕರ ಯಾಸಿರ್ ಅಹಮದ್ ಅವರೊಟ್ಟಿಗೆ ವಾಸವಿದ್ದರು. ಇವರ ಕೊಲೆ ಪ್ರಕರಣ ಬೆಳಕಿಗೆ ಬಂದಂತೆ ಯಾಸಿರ್ ಅಹಮದ್ ನಾಪತ್ತೆಯಾಗಿದ್ದಾನೆ. ಪೊಲೀಸರು ಸಂಖ್ಯೆ ವ್ಯಕ್ತಪಡಿಸಿದ್ದಾರೆ.