ಪೊಲೀಸ್‌ ಠಾಣೆಯಲ್ಲಿ ಸಮವಸ್ತ್ರದಲ್ಲೇ ಪೊಲೀಸರಿಂದ ಡ್ರಿಂಕ್ಸ್‌ ಪಾರ್ಟಿ!

ಹಾಸನ: ಇಲ್ಲಿನ ಪೆನ್ಷನ್‌ ಮೊಹಲ್ಲಾ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ಹೇಳಿಕೆಯಿರುವ ದೃಶ್ಯದ ವಿಡಿಯೊ ವೈರಲ್‌ ಆಗಿದೆ.

ಇಬ್ಬರು ಪೊಲೀಸರು ಸಮವಸ್ತ್ರದಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ʻಯುನಿಫಾರ್ಮ್​ನಲ್ಲಿ ಎಣ್ಣೆ ಹೊಡೆಯುತ್ತಿದ್ದೀರಿʼ ಎಂದು ಅಲ್ಲಿ ವ್ಯಕ್ತಿಯೊಬ್ಬ ಪ್ರಶ್ನೆ ಕೇಳಿದ್ದಾರೆ. ʻಹೌದು ತಪ್ಪಾಗಿದೆ, ನೀವು ಬೇಡ ಅಂದ್ರೆ ಅರ್ಧಕ್ಕೆ ಬಿಟ್ಟೋಗ್ತೀವಿʼ ಎಂದು ಪೊಲೀಸರು ಹೇಳಿದ್ದಾರೆ.

ಎಎಸ್​ಐ ರಂಗಸ್ವಾಮಿ, ಎಚ್.​ಸಿ.ರಾಮೇಗೌಡ ಎಣ್ಣೆ ಪಾರ್ಟಿ ಮಾಡಿದವರು ಎನ್ನಲಾಗಿದೆ. ಪೊಲೀಸರಾದ ರಾಮೇಗೌಡ ಹಾಗೂ ಮತ್ತೊಬ್ಬರಿಂದ‌ ನಿಯಮ‌ ಉಲ್ಲಂಘನೆ ಆರೋಪ ಕೇಳಿಬಂದಿದೆ.

× Chat with us