ಉಡುಪಿ : ಉಡುಪಿಯ ಪಡುಬಿದ್ರೆ ಸಮೀಪದಲ್ಲಿರುವ ಎಲ್ಲೂರು ಗ್ರಾಮದಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರದಿಂದ ಸುಮಾರು 10 ಕಿ.ಮೀ ವ್ಯಾಪ್ತಿಯ ಪರಿಸರಕ್ಕೆ ಹಾನಿ ಮಾಡಿದ್ದಾರೆಂದು ಗೌತಮ್ ಅದಾನಿ ಗ್ರೂಪ್ ಗೆ ಚೆನ್ನೈನ ಹಸಿರು ಪೀಠ 52 ಕೋಟಿ ರೂ ದಂಡವನ್ನು ವಿಧಿಸಿದೆ.
2005 ರಿಂದ ಹೋರಾಟ ನಡೆಸಿಕೊಂಡು ಬರುತ್ತಿರುವ ನಂದಕೂರು ಜನಜಾಗೃತಿ ಸಮಿತಿಯ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಚೆನ್ನೈನ ಹಸಿರು ಪೀಠವು ಮಂಗಳವಾರ ತೀರ್ಪು ನೀಡಿದೆ.