ಮೈಸೂರು: ಮಾಹಿತಿ ಹಕ್ಕು ಹೋರಾಟಗಾರ ಸದಾನಂದಗೌಡ ಅವರು ಮಾಹಿತಿ ಹಕ್ಕಿನ ಅನ್ವಯ ಮಾಹಿತಿ ಆಯೋಗದ ಕ್ಷೇತ್ರಾ ಶಿಕ್ಷಣಾಧಿಕಾರಿ ಕಚೇರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಈ ಸಂಬಂಧ ಪಟ್ಟ ಅಧಿಕಾರಿ ಮಾಹಿತಿ ನೀಡದೆ ಕಾಲವಿಳಂಬ ಮಾಡಿ ಹೊಸ ಅರ್ಜಿಯನ್ನು ಸಲ್ಲಿಸಲು ಉತ್ತರ ನೀಡುತ್ತಾರೆ. ಈ ಹಿನ್ನೆಲೆ ಮಾಹಿತಿ ಹಕ್ಕು ಉಲ್ಲಂಘನೆ ಮಾಡಿರುವುದರಿಂದ ಸದಾನಂದಗೌಡ ಅವರು ಜ.1-05-2021ರಂದು ಪ್ರಥಮ ಮೇಲ್ಮನವಿ ಸಲ್ಲಿಸಿದರೂ, ಮೇಲ್ಮನವಿ ಅಧಿಕಾರಿ ಯಾವುದೇ ಮಾಹಿತಿ ನೀಡದೇ ಕಾಯಿದೆಯನ್ನು ಉಲ್ಲಂಘಿಸಿರುತ್ತಾರೆ.
ಬಳಿಕ ಮಾರ್ಚ್ 30-2021ರಂದು ದ್ವಿತೀಯ ಮೇಲ್ಮನವಿ ಸಲ್ಲಿಸಲಾಯಿತು. ಮೇಲ್ಮನವಿ ವಿಚಾರದಲ್ಲಿ ಸೂಕ್ತ ಮಾಹಿತಿ ನೀಡದೆ ಇರುವುದರಿಂದ ಸಂಬಂಧ ಪಟ್ಟ ಅಧಿಕಾರಿಗೆ 25ಸಾವಿರ ದಂಡದ ಷೋಕಾಸ್ ನೋಟಿಸ್ ನೀಡಿತು.
ಷೋಕಾಸ್ ನೋಟಿಸ್ ನೀಡಿದರು ಆಯೋಗದ ಆದೇಶವನ್ನು ಧಿಕ್ಕರಿಸಿ ಮಾಹಿತಿ ನೀಡಲು 665 ದಿನಗಳ ವಿಳಂಭ ಮಾಡಿರುವ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ವ್ಯವಸ್ಥಾಪಕ ರಘುನಾಥನ್ ಅವರಿಗೆ ದಾಖಲೆಯನ್ನು ಪರಿಶೀಲಿಸಿ 25 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ