ಮೈಸೂರು : ನದಿಯಲ್ಲಿ ಈಜಲು ಹೋಗಿದ್ದಯುವಕರಿಬ್ಬರು ನೀರು ಲಾಪಾಗಿರುವ ಘಟನೆ ಹುಣಸೂರು ತಾಲ್ಲೂಕ್ಕಿನ ಹೆಗ್ಗಂದೂರು ಗ್ರಾಮದಲ್ಲಿ ನಡೆದಿದೆ.
17 ವರ್ಷದ ಶಶಿಕುಮಾರ್ ಮತ್ತು ಶರತ್ ರಾವ್ ಎಂಬುವವರೇ ಸಾವಿಗೀಡಾದವರು. ಇವರಿಬ್ಬರು ಹನಗೋಡಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ.
ಶುಕ್ರವಾರ ಸಂಜೆ ಸರಿಸುಮಾರು 3 ಗಂಟೆ ವೇಳೆಗೆ ಕಾಮಗೌಡನಹಳ್ಳಿ ಸಮೀಪದ ಲಕ್ಷ್ಮಣ ತೀರ್ಥ ನದಿಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೇ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ, ನೆನ್ನೆ ರಾತ್ರಿ ಕತ್ತಲಾಗಿದ್ದರಿಂದ ಮೃತದೇಹವನ್ನು ಹೊರಕ್ಕೆ ತರಲು ಕಷ್ಟವಾದ್ದರಿಂದ ಇಂದು ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿಗಳ ನೆರವಿನಿಂದ ಮೃತದೇಹವನ್ನು ಹೊರಕ್ಕೆ ತೆಗೆಯಲಾಯಿತು.
ಸ್ಥಳದಲ್ಲಿ ಹೆಚ್ಚಿನ ಜನ ಜಾಮಾಯಿಸಿದ್ದು, ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.