ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ : ಎನ್.ಸಿ.ಬಿ ಯು ಚಾರ್ಜ್ ಶೀಟ್ ಸಲ್ಲಿಕೆ
ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ನಿಧನರಾಗಿ 2 ವರ್ಚಗಳು ಸಂದಿವೆ. ಆದರೆ ಇನ್ನೂ ಕೂಡ ಅವರ ಸಾವಿಗೆ ನಿಖರವಾದ ಕಾರಣವನ್ನು ಕಂಡುಕೊಳ್ಳಲಾಗಿಲ್ಲ, ಇದೀಗ ಎನ್.ಸಿ.ಬಿ.ಯು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ. ಹೀಗಾಗಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಗೆ ಸಂಕಷ್ಟ ಎದುರಾಗಿದೆ ಎಂದೇ ಹೇಳಬಹುದು.
ಸುಶಾಂತ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಆತನ ಸಾವಿಗೆ ಕಾರಣ ರಿಯಾ ಚಕ್ರವರ್ತಿ ಎಂದು ಆರೋಪಿಸಿ ಆಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯೂ ಆಗಿದ್ದರು.
ಸುಶಾಂತ್ ಸಿಂಗ್ ಸಾವು ಒಂದು ಕಡೆ ನೋವಾಗಿ ಕಾಡಿದರೆ, ಮತ್ತೊಂದು ಕಡೆ ಅದು ಡ್ರಗ್ಸ್ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ದಂಧೆಗೆ ತಳುಕು ಹಾಕಿಕೊಂಡಿತು. ಸುಶಾಂತ್ ಸಿಂಗ್ ಡ್ರಗ್ಸ್ ಸೇವಿಸುತ್ತಿದ್ದ, ಅದನ್ನು ಸ್ವತಃ ರಿಯಾ ಚಕ್ರವರ್ತಿ ಹಾಗೂ ಶೋವಿಕ್ ಚಕ್ರವರ್ತಿಯೇ ಸಪ್ಲೈ ಮಾಡುತ್ತಿದ್ದರು ಎಂದು ಹೇಳಲಾಯಿತು.
ಇದೀಗ ಈ ಪ್ರಕರಣದ ಕುರಿತಂತೆ ಜಾರ್ಜಶೀಟ್ ಸಲ್ಲಿಕೆಯಾಗಿದ್ದು ಮುಂದೆ ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳುವುದೆಂದು ಕಾದು ನೋಡಬೇಕಾಗಿದೆ.