ಹಾಸನ : ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಆತನ ಶವವನ್ನು ರೈಲೆ ಹಳಿಯ ಮೇಲೆ ಎಸೆಯಲು ಬಂದಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶಾಂತಿಗ್ರಾಮದ ರೈಲ್ವೆಸಂಚಾರ ಮಾರ್ಗದಲ್ಲಿ ನಡೆದಿದೆ.
ಆಂದ್ರಪ್ರದೇಶ ಮೂಲದ ರಘು, ಗದಗ ಮೂಲದ ಶಶಿ, ಹೊಸಕೋಟೆ ಮೂಲದ ರವಿಕುಮಾರ್ ಎಂಬುವವರೇ ಪೊಲೀಸರ ವಶವಾದ ಆರೋಪಿಗಳಾಗಿದ್ದಾರೆ. ಈ ಮೂವರು ಶಾಂತಿಗ್ರಾಮದ ಗಾಡೇನಹಳ್ಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ಆತನ ಶವವನ್ನು ರೈಲ್ಬೆಹಳಿಯ ಮೇಲೆ ಬಿಸಾಡಿ ಹೊಗಲು ಬೊಲೆರೂ ವಾಹನದ ಮೂಲಕ ಶವವನ್ನು ತಂದಿದ್ದರು. ರೈಲ್ವೆ ಹಳಿಯ ಮೇಲೆ ಬಿಸಾಡುವ ವೇಳೆ ಶವದ ಸಮೇತ ವಾಹನ ಹಳಿಯ ಮೇಲೆ ಬಿದ್ದಿದೆ. ಈ ವೇಳೆ ಒಂಟಾದ ಶಬ್ದದಿಂದಾಗಿ ಅಲ್ಲಿಯ ಸ್ಥಳೀಯುರ ಸ್ಥಳಕ್ಕೆ ಧಅವಿಸಿ ತಕ್ಷಣವೇ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಾಹನದಲ್ಲಿ ಸಿಲುಕಿಕೊಂಡ ಆರೋಪಿಗಳನ್ನು ರಕ್ಚಣೆ ಮಾಡಿ ವಶಕ್ಕೆಪಡೆದಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.