ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕ ಮೈಸೂರಿನ ಲಾಡ್ಜ್‌ನಲ್ಲಿ ಆತ್ಮಹತ್ಯೆ!

ಮೈಸೂರು: ವಿಶ್ವವಿಖ್ಯಾತ ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕನೊಬ್ಬ ಮೈಸೂರಿನ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವರಾಜ್ (28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಶಿವರಾಜ್, ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದರು.

ಮೈಸೂರು ದಸರಾ ನೋಡಲು ಬಂದಿದ್ದ ಅವರು ಇಲ್ಲಿನ ಸಂಗಂ ಚಿತ್ರಮಂದಿರದ ಬಳಿಯ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 1 ರಂದು ಕೊಠಡಿ ಬಾಡಿಗೆ ಪಡೆದಿದ್ದ ಶಿವರಾಜ್, ಎರಡು ದಿನಗಳು ಕೊಠಡಿ ಬಾಗಿಲು ತೆರೆದಿರಲಿಲ್ಲ. ಇದೀಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.

ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us