ಮೖೆಸೂರು : ಬಾಲಕನ ಅಪಹರಣ

ಮೈಸೂರು: 12 ವರ್ಷದ ಬಾಲಕನೊಬ್ಬನನ್ನು ಅಪಹರಣ ಮಾಡಿರುವ ಘಟನೆ ನಗರದ ಶ್ರೀರಾಂಪುರದಲ್ಲಿ ನಡೆದಿದೆ.

ಬಾಲಕನನ್ನು ವೈದ್ಯ ದಂಪತಿಯ ಮಗ ಎನ್ನಲಾಗಿದ್ದು, ಗುರುವಾರ ಸಂಜೆ 7 ರಿಂದ 8 ಗಂಟೆಯ ಸಮಯದಲ್ಲಿ ಹೊರಗೆ ಸೈಕಲ್ ಹೊಡೆಯುವಾಗ ಕಾರೊಂದರಲ್ಲಿ ಬಂದ ಅಪಹರಣಕಾರರು ಬಾಲಕನನ್ನು ಅಪಹರಿಸಿದ್ದಾರೆ.

ಬಾಲಕನ ಪತ್ತೆಗಾಗಿ ಕುವೆಂಪುನಗರದ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.