ಕೀಲಾರ: ಮುಂದುವರೆದ ರಾಸುಗಳ ನಿಗೂಢ ಸಾವು

ಹೇಮಂತ್ಕುಮಾರ್

ಮಂಡ್ಯ: ತಾಲ್ಲೂಕಿನ ಕೀಲಾರ ಗ್ರಾಮದ ಕುಟುಂಬವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಸುಮಾರು ೨೯ ರಾಸುಗಳ ಸರಣಿ ಸಾವಿನಿಂದ ಕಂಗೆಟ್ಟಿರುವ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನದ ಜತೆಗೆ ಸಮಸ್ಯೆಗೆ ಪರಿಹಾರ ನೀಡದ ಜನಪ್ರತಿನಿಗಳ ವಿರುದ್ಧ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣೇಶ ಚತುರ್ಥಿ ದಿನವಾದ ಶುಕ್ರವಾರದಂದು ಉಳುಮೆ ದನ ವಿಭಿನ್ನ ರೀತಿ ವರ್ತಿಸಿ ಕುಣಿದು, ಏರುಗತಿಯಲ್ಲಿ ಉಸಿರಾಟ ನಡೆಸಿ ಸಾವನ್ನಪ್ಪಿದೆ. ಇದು ಕುಟುಂಬದ ಮನೆಯಲ್ಲಿ ಮೂರು ವರ್ಷಗಳಿಂದ ಒಂದೇ ಆವರಣದ ಮೂರು ಮನೆಗಳಲ್ಲಿ ವಾಸಿಸುವ ಕೆ.ಎಂ.ಕೃಷ್ಣೇಗೌಡ, ಕೆ.ಎಂ.ಶಂಕರೇಗೌಡ, .ರಘು, ಕೆ.ಎಂ.ಕೃಷ್ಣೇಗೌಡರ ಪುತ್ರಿ ಕೆ.ಕೆ.ಶ್ರುತಿ, ಅಳಿಯ ಕೆ.ಸಿ.ಸಿದ್ದರಾಮೇಗೌಡಗೆ ಸೇರಿದ ಉಳುಮೆ ದನ ಸೇರಿ ೨೯ ರಾಸುಗಳು ಸಾವನ್ನಪ್ಪಿವೆ.

ಪಶು ಸಂಗೋಪನೆ ಇಲಾಖೆ ವೈದ್ಯರು ಇದುವರೆಗೆ ನಡೆಸಿದ ರಾಸುಗಳ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರ ಕಾರಣ ಸಿಗದೇ ಕೈಚೆಲ್ಲಿ ಕುಳಿತಿದ್ದಾರೆ. ಸಂಬಂಧ ತಹಸಿಲ್ದಾರ್ ಚಂದ್ರಶೇಖರ ಶಂ ಗಾಳಿ, ಡಿವೈಎಸ್ಪಿ ಮಂಜುನಾಥ್, ಪಶು ಸಂಹೋಪನೆ ಉಪ ನಿರ್ದೇಶಕ ಮಂಜುನಾಥ್, ಸಹಾಯಕ ನಿರ್ದೇಶಕ ರಮೇಶ್ ರಾಜು, ಗ್ರಾಮಲೆಕ್ಕಿಗ ರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

 

ಇಷ್ಟು ರಾಸುಗಳು ಸಾವನ್ನಪ್ಪಿದರೂ ಸಮಸ್ಯೆ ಪರಿಹಾರದ ಜೊತೆಗೆ ನಮಗೆ ಕನಿಷ್ಟ ಸಾಂತ್ವನ ಹೇಳದ ಜನಪ್ರತಿನಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೈತ ಕೆ.ಎಂ.ಶಂಕರೇಗೌಡ, ಕೃಷಿಯೇ ನಮ್ಮ ಜೀವನಕ್ಕೆ ಮೂಲಾಧಾರ. ರಾಸುಗಳ ಸಾವು ನಮ್ಮನ್ನು ಧೃತಿಗೆಡಿಸಿದೆ.

ಜಿಲ್ಲಾಕಾರಿ, ತಹಸಿಲ್ದಾರ್ ಹಾಗೂ ಪೊಲೀಸ್ ಇಲಾಖೆ ಅಕಾರಿಗಳು ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ನೆರವೂ ಇಲ್ಲ. ಸಮಸ್ಯೆಗೆ ಪರಿಹಾರವೂ ಕಾಣದೇ ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

ರೈತರ ಕುಟುಂಬದಲ್ಲಿ ನಡೆದಿರುವ ರಾಸುಗಳ ಸರಣಿ ಸಾವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಸಿ.ನಾರಾಯಣಗೌಡ ಅವರು ಕೀಲಾರ ಗ್ರಾಮದ ರೈತರ ಕುಟುಂಬಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ತಜ್ಞರನ್ನು ಕರೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದಿದ್ದಾರೆ.

ಶಾಸಕ ಎಂ.ಶ್ರೀನಿವಾಸ್ ಈಗಾಗಲೇ ಅಕಾರಿಗಳನ್ನು ರೈತರ ಮನೆಗೆ ಕಳುಹಿಸಿ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಪರಿಹಾರ ಹಾಗೂ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಸ್ಪಂದಿಸಿಲ್ಲ.

ಸೋಮವಾರದ ಅವೇಶನದಲ್ಲಿ ಇದರ ಬಗ್ಗೆ ದನಿ ಎತ್ತಲಾಗುವುದು ಎಂದರಲ್ಲದೆ ಇದಕ್ಕೆ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ದನಿಗೂಡಿಸಿದರು.

ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಕುಟುಂಬಸ್ಥರು ಸಮಸ್ಯೆ ವಿವರಿಸಿದಾಗ ರೈತರ ಅವಸ್ಥೆಗೆ ಮರುಗಿದ ಅವರು, ಮೊಬೈಲ್ನಲ್ಲಿ ಡಿವೈಎಸ್ಪಿ ಮಂಜುನಾಥ್ ಹಾಗೂ ಪಶು ಸಂಗೋಪನೆ ಉಪ ನಿರ್ದೇಶಕ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸಿದರು. ಬಳಿಕ ಮಾನಸಿಕ ಧೈರ್ಯ ಹೇಳಿ, ಸೋಮವಾರ ಕೀಲಾರ ಗ್ರಾಮದ ಕುಟುಂಬಕ್ಕೆ ಭೇಟಿ ನೀಡಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನೆರವಾಗುವುದಾಗಿ ಅಭಯ ನೀಡಿದ್ದಾರೆ.

ಹಿನ್ನೆಲೆಯಲ್ಲಿ ಭಾನುವಾರ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರೈತನಾಯಕಿ ಸುನಂದ ಜಯರಾಂ, ಕೆ.ಬೋರೇಗೌಡ, ಜ್ಞಾನ ವಿಜ್ಞಾನ ಸಮಿತಿಯ ರೇವಣ್ಣ ಕೀಲಾರಕ್ಕೆ ಭೇಟಿ ನೀಡಿ ಕೃಷ್ಣೇಗೌಡರ ನಿವಾಸದಲ್ಲಿ ಪರಿಶೀಲನೆ ನಡೆಸಿದರು.

× Chat with us