ಹುಲಿ ದಾಳಿಗೆ ಜಾನುವಾರು ಬಲಿ!

ಸರಗೂರು: ಹುಲಿಯೊಂದು ದಾಳಿ ನಡೆಸಿ ಜಾನುವಾರುವೊಂದನ್ನು ಬಲಿ ಪಡೆದಿರುವ ಘಟನೆ ಸರಗೂರು ತಾಲ್ಲೂಕಿನ ಹಾದನೂರು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಎಡಿಯಾಲ ವಲಯದ ಸಮೀಪದ ಹಾದನೂರು ಗ್ರಾಮದ ರೈತ ಮುಖಂಡ ಪುಟ್ಟಸ್ವಾಮಿ ಎಂಬವರಿಗೆ ಸೇರಿದ ಜಾನುವಾರು ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ಶುಕ್ರವಾರ ತಮ್ಮ ಜಮೀನಿನಲ್ಲಿ ಎತ್ತುಗಳನ್ನು ಕಟ್ಟಿಕೊಂಡು ಉಳುಮೆ ಮಾಡಿ ಬಳಿಕ ಮಧ್ಯಾಹ್ನ ಎತ್ತುಗಳನ್ನು ಮೇಯಲು ಬಿಟ್ಟಂತಹ ಸಂಧರ್ಭದಲ್ಲಿ ಹುಲಿ ದಾಳಿ ನಡೆಸಿದೆ. ಈ ವೇಳೆ ದಾಳಿಯನ್ನು ಕಂಡ ಕೆಲವರು ಕೂಗಿದ ಪರಿಣಾಮ ಹುಲಿ ಜಾನುವಾರುವನ್ನು ಬಿಟ್ಟು ಓಡಿದೆ ಎನ್ನಲಾಗಿದೆ. ಸುಮಾರು ೬೦ ಸಾವಿರದಷ್ಟು ಬೆಳಬಾಳುವ ಎತ್ತು ಸಾವನ್ನಪ್ಪಿದ್ದು, ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಮಹಜೂರು ಮಾಡಿದ್ದಾರೆ.

× Chat with us