ಕೋವಿಡ್: ಸೆ.17ರಂದು ರಾಜ್ಯದಲ್ಲಿ‌ ಬೃಹತ್‌ ಲಸಿಕಾ ಅಭಿಯಾನ

ಬೆಂಗಳೂರು: ರಾಜ್ಯಾದ್ಯಂತ ಸೆ.17ರಂದು ಕೋವಿಡ್‌ ಲಸಿಕೆ ನೀಡುವ ಬೃಹತ್‌ ಅಭಿಯಾನ ನಡೆಸಲಾಗುವುದು. ಈ ಕುರಿತು ಇಂದು (ಮಂಗಳವಾರ) ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಅಮೆರಿಕದಂಥ ದೇಶಕ್ಕಿಂತಲೂ ತ್ವರಿತವಾಗಿ ಕೋವಿಡ್‌ ಲಸಿಕೆ ವಿತರಿಸುತ್ತಿರುವ ಭಾರತದ 5 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸ್ಥಾನ ಪಡೆದಿದೆ. ಸ್ಥಾನ ಪಡೆದ ಬೆನ್ನಲ್ಲೇ ಸೆ. 17ರಂದು ಬೃಹತ್ ಲಸಿಕಾ ಅಭಿಯಾನವನ್ನು ಆಯೋಜನೆ ಮಾಡಲಾಗಿದೆ.

ಭಾರತದ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶದಲ್ಲಿ ಕೊರೊನಾ ಲಸಿಕೆಗಳನ್ನು ವಿತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. 2021ರ ಅಂತ್ಯದ ವೇಳೆಗೆ ಭಾರತದ ಎಲ್ಲ ನಾಗರಿಕರಿಗೂ ಕೊರೊನಾ ಲಸಿಕೆ ನೀಡುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಲಸಿಕೆಗಳನ್ನು ವಿತರಣೆ ಮಾಡುತ್ತಿದೆ.

× Chat with us