ಕೋವಿಡ್‌ ಸೋಂಕು : ಉತ್ತರ ಕೊರಿಯಾದಲ್ಲಿ ಒಂದೇ ದಿನ 27 ಮಂದಿ ಸಾವು

ಪೊನ್ಗ್‌ ಯಾಂಗ್‌ : ಉತ್ತರ ಕೊರಿಯಾದಲ್ಲಿ ಕೋವಿಡ್‌ ಪ್ರಕರಣ ಮತ್ತೆ ಏರಿಕೆಯಾಗಿದ್ದು ನೆನ್ನೇ ಒಂದೇ ದಿನದಲ್ಲಿ 27 ಮಂದಿ ಮೃತಪಟ್ಟಿದ್ದಾರೆ. 1 ಲಕ್ಷದ 70 ಸಾವಿರ ಮಂದಿಯಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮೃತಪಟ್ಟವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಆದರೆ ಸತ್ತಿರುವ 27 ಮಂದಿ ಕೋವಿಡ್‌ ಸೋಂಕಿನಿಂದಾಗಿ ಮೃತಪಟ್ಟಿದ್ದಾರಯೇ ಎಂಬುದು ಇನ್ನೂ ತಿಳಿದುಬರಬೇಕಿದೆ. ಸದ್ಯ, ಇದೇ ತಿಂಗಳ 13 ರಂದು ಮೊದಲ ಕೊವೀಡ್‌ ಪ್ರಕರಣ ಕಾಣಿಸಿಕೊಂಡಿದ್ದು, ಇದೀಗ ದೇಶದಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ದೇಶದಲ್ಲಿ 2.5 ಕೋಟಿ ಜನ ಲಸಿಕೆ ಪಡೆಯದ ಕಾರಣ ಇಂತಹ ಸಮಸ್ಯೆ ಎದುರಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.