ಚೀನಾದಲ್ಲಿ ಮತ್ತೆ ಕೋವಿಡ್‌ ಸಂಕಷ್ಟ; ಏಷ್ಯನ್‌ ಕ್ರೀಡಾಕೂಟ ಮುಂದೂಡಿಕೆ ?

ಚೀನಾ : ಚೀನಾದಲ್ಲಿ ಮತ್ತೆ ಕೋವಿಡ್‌ ಸಂಕಷ್ಟ ಎದುರಾಗಿದ್ದು ಶೀಘ್ರದಲ್ಲೆ ನಡೆಯಬೇಕಿದ್ದ 2022 ರ 19ನೇ ಏಷ್ಯನ್‌ ಕ್ರೀಡಾಕೂಟವನ್ನು ( Asian games 2022) ಸದ್ಯಕ್ಕೆ ಮುಂದೂಡಲಾಗುವುದು ಎಂದು ಒಲಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ ಮಹಾನಿರ್ದೇಶಕ ಫ್ರಿ. ಹಾಂಗ್ಝೌ ಮಾಹಿತಿ ನೀಡಿದ್ದಾರೆ.

ಚೀನಾದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಶಾಂಘೈನ ಹಲವೆಡೆ ಲಾಕ್‌ಡೌನ್‌ ಮಾಡಲಾಗಿದೆ ಇವೆಲ್ಲದರಿಂದ ಚೇತರಿಸಿಕೊಳ್ಳುವ ಸಲುವಾಗಿ ಇದೇ ವರ್ಷ ಸೆಪ್ಟಂಬರ್‌ 10 ರಿಂದ 25 ರವರೆಗೆ ಚೀನಾದ ಹಾಂಗ್ಝೌನಲ್ಲಿ ನಡೆಯಬೇಕಿದ್ದ 19 ಏಷ್ಯನ್‌  ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕದ ಬಗ್ಗೆ ಇನ್ನೂ ಚರ್ಚಿಸಿಲ್ಲ ಎಂದು ತಿಳಿಸಿದ್ದಾರೆ.

ಏಷ್ಯನ್‌ ಕ್ರೀಡಾಕೂಟ : 4 ವರ್ಷಕೊಮ್ಮೆ ನಡೆಯುವ ಕ್ರೀಡಾಕೂಟವು ಇದಾಗಿದೆ. ಏಷ್ಯಾದ ಇಲ್ಲಾ ದೇಶಗಳಿಂದ ಕ್ರೀಡಾಪಟುಗಳು ಪಾಲ್ಗೊಳ್ಳುವರು.ಈ ಕ್ರೀಡಾಕೂಟವು ಅಂತರರಾಷ್ಟ್ರೀಯ ಒಲಂಪಿಕ್‌ ಕಮಿಟಿಯಿಂದ ಮಾನ್ಯತೆಯನ್ನು ಪಡೆದಿದೆ. ಕಳೆದ ಬಾರಿ ಈ ಕ್ರೀಡಾಕೂಟವು 2014 ರಲ್ಲಿ ಸೆಪ್ಟಂಬರ್‌ ನಿಂದ ಅಕ್ಟೋಬರ್‌  ವರೆಗೆ ಸೌತ್‌ ಕೋರಿಯಾದ ಇಂಚಿಯಾನ್‌ ಎಂಬಲ್ಲಿ ನಡೆದಿತ್ತು.