ಕೇಂದ್ರ ಸರ್ಕಾರ ರಾಜ್ಯದೆಡೆಗೆ ಮಲತಾಯಿ ಧೋರಣೆ ತೋರುತ್ತಿದೆ: ವಿ.ಎಸ್.ಉಗ್ರಪ್ಪ

ಮೈಸೂರು: ಕೇಂದ್ರ ಸರ್ಕಾರ ಗುಜರಾತ್ ನೆರೆ ಪೀಡಿತರಿಗೆ ಒಂದು ಸಾವಿರ ಕೋಟಿ ರೂ. ಪರಿಹಾರ ಘೋಷಿಸಿ ರಾಜ್ಯಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಕರ್ನಾಟಕದಲ್ಲಿ ನೆರೆಯಿಂದ ೨೦೧೯ ರಲ್ಲಿ ಮೂವತ್ತೆಂಟು ಸಾವಿರ ಕೋಟಿಗೂ ಹೆಚ್ಚು, ೨೦೨೦ರಲ್ಲಿ ಹದಿನೈದು ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಆದರೆ ಕೇಂದ್ರದಿಂದ ೧,೨೮೦ ಕೋಟಿ ರೂ. ಅಷ್ಟೇ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ ಗುಜರಾತ್‌ಗೆ ಕೊಡುವ ಆದ್ಯತೆಯನ್ನ ರಾಜ್ಯಕ್ಕೆ ಕೊಡುತ್ತಿಲ್ಲ. ಅಧಿಕಾರ ಶಾಶ್ವತವಲ್ಲ. ಜನಪರ ಆಡಳಿತ ಕೊಡುವುದು ನಾಯಕರು, ಪಕ್ಷಗಳ ಜವಾಬ್ದಾರಿ ಎಂದಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾಹಿತಿ ಪಡೆಯುವ ಅವಕಾಶ ಇತ್ತು. ಆದರೂ ನಮ್ಮ ಯಾವ ಸಂಸದರೂ ಚಕಾರ ಎತ್ತಲಿಲ್ಲ. ತಂತಮ್ಮ ಕ್ಷೇತ್ರಗಳಲ್ಲೂ ಇರದೆ ಎಲ್ಲ ಸಂಸದರೂ ಬೆಂಗಳೂರು, ದೆಹಲಿಯಲ್ಲಿ ಕುಳಿತಿದ್ದಾರೆ. ನೆರೆ ನಿರ್ವಹಣೆ ಮಾಡದೆ ಅಧಿಕಾರಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ. ಕೊರೊನಾ ಮೂರನೆಯ ಅಲೆ ಎದುರಿಸಲು ಪರಿಣಾಮಕಾರಿಯಾಗಿ ಪೂರ್ವ ಸಿದ್ದತೆ ಮಾಡಿಕೊಂಡಂತೆ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

× Chat with us