ಕಮಲ್‌ ಹಾಸನ್‌ ರ ʼವಿಕ್ರಮ್‌ʼ ಸಿನಿಮಾದ ಹಾಡಿನ ವಿರುದ್ಧ ದೂರು ದಾಖಲು!

ತಾವೇ ಬರೆದ ʼಪಾತಾಳʼ ಗೀತೆಯಲ್ಲಿ ಸಿಲುಕಿದ ಕಮಲ್‌ ಹಾಸನ್‌.

ಜೂನ್‌ 3 ರಂದು ತೆರೆಗೆ ಬರಲು ಸಿದ್ದಗೊಂಡಿದ್ದ ತಮಿಳಿನ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ ಅಭಿನಯದ ವಿಕ್ರಮ್‌ ಸಿನಿಮಾದ ಹಾಡಿನ ವಿರುದ್ದ ಇದೀಗ  ದೂರು ದಾಖಲಾಗಿದೆ.

ಹೌದು, ಲೋಕೇಶ್‌ ಕನಗರಾಜ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಕಮಲ್‌ ಹಾಸನ್‌ ನಾಯಕ ನಟನಾಗಿ ಅಭಿನಯಿಸಿರುವ ವಿಕ್ರಮ್‌ ಸಿನಿಮಾದಲ್ಲಿ ಕಮಲ್‌ ಹಾಸನ್‌ ರವರಿಂದಲೇ ರಚಿತಗೊಂಡಿರುವ “ಪಾತಾಳ ಪಾತಾಳ” ಎಂಬ ಗೀತೆ ಸಾಕಷ್ಟು ಸದ್ದು ಮಾಡಿತ್ತು, ಕೆಲವೇ ಘಂಟೆಗಳಲ್ಲಿ ಈ ಪಾತಾಳ ಪಾತಾಳ ಸಾಹಿತ್ಯದಿಂದ ಶುರುವಾಗುವ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎಂದು ಹಾಡಿನ ವಿರುದ್ದ ದೂರು ದಾಖಲಾಗಿದೆ.

ಹಾಡಿನಲ್ಲಿಏನಿದೆ ?

ಖಜಾನೆಯಲ್ಲಿ ಹಣವೇ ಇಲ್ಲ, ಖಜಾನೆ ಖಾಲಿ ಖಾಲಿ ರೋಗಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಖಜಾನೆ ಖಾಲಿ ಖಾಲಿ, ಖಜಾನೆ ಕೀ ಕಳ್ಳನ ಬಳಿಯಿದೆ ಎಂಬ ಅರ್ಥದಲ್ಲಿ ಹಾಡಿನ ಸಾಲುಗಳಿದ್ದು, ಇದು ಕೇಂದ್ರ ಸರ್ಕಾರವನ್ನು ಅಣಕಿಸುವಂತಿದೆ ಎಂದು ದೂರು ದಾಖಲಿಸಲಾಗಿದೆ.

ದೂರು ನೀಡಿದವರಾರು ?

ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ʼಸೆಲ್ವಂʼ ಎಂಬುವವರು ಮೇ 12 ರಂದು ಚೆನ್ನೈ ಪೊಲೀಸ್ ಕಮಿಷ್ನರ್ ಬಳಿ ದೂರು ದಾಖಲಿಸಿರುವ ಸೆಲ್ವಂ, ಪೊಲೀಸ್ ನವರು ಅಗತ್ಯ ಕ್ರಮ ತಗೆದುಕೊಳ್ಳದೇ ಇದ್ದರೆ, ತಾವು ಮದರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿಯೂ ತಿಳಿಸಿದ್ದಾರೆ.

ಈ ಹಾಡಿನ ವಿರುದ್ಧ ದೂರು ದಾಖಲಾಗುತ್ತಿದ್ದಂತಯೇ ನೋಡುಗರ ಸಂಖ್ಯೆಯು ಹೆಚ್ಚಿದ್ದು, 15 ಮಿಲಿಯನ್‌ ಗಿಂತಲೂ ಹೆಚ್ಚು ವೀಕ್ಷಣೆಯನ್ನುಕಂಡಿದೆ.

ವಿಕ್ರಮ್‌ ಸಿನಿಮಾ ಹಾಡಿಗೆ ಅನಿರುದ್ಧ ಚಂದ್ರಶೇಖರ್‌ ಸಂಗೀತ ಸಂಯೋಜನೆ ಮಾಡಿದ್ದು,  ಸರಿಸುಮಾರು 4 ವರ್ಷಗಳ ನಂತರ ಬಿಡುಗಡೆಗೆ ಸಿದ್ದವಾಗಿರು ಈ ಚಿತ್ರದ ಮೇಲೆ ವೀಕ್ಷಕರು ಸಾಕಷ್ಟು ನಿರೀಕ್ಷೆಯನ್ನಿಟ್ಟಿರುವುದಂತೂ ಸತ್ಯ.