ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರದಂದು ರೆಪೋ ದರವನ್ನು ಮತ್ತೆ 0.50 ಮೂಲಾಂಕದಷ್ಟು ಹೆಚ್ಚಿಸಿದೆ. 6 ಜನರ ನೇತೃತ್ವದ ಹಣಕಾಸು ನೀತಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆ ಸದ್ಯದ ರೆಪೋ ದರವು ಶೇಕಡಾ 5.40 ಕ್ಕೆ ಏರಿಕೆಯಾಗಿದೆ. 2019 ರಲ್ಲಿ ಅಂದರೆ ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ಇದ್ದ ರೆಪೋ ದರದ ಮಟ್ಟಕ್ಕೆ ಹೆಚ್ಚಳವಾಗಿದೆ.
“Q2 ಮತ್ತು Q3 ಅವಧಿಯಲ್ಲಿ ಹಣದುಬ್ಬರವು ಮೇಲಿನ ಮಿತಿಗಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಈ ಹಿನ್ನೆಲೆ ನಿರಂತರವಾದ ಹೆಚ್ಚಿನ ಹಣದುಬ್ಬರವು ಹಣದುಬ್ಬರದ ನಿರೀಕ್ಷೆಗಳನ್ನು ಅಸ್ಥಿರಗೊಳಿಸಬಹುದು ಮತ್ತು ಮಧ್ಯಮ ಅವಧಿಯ ಬೆಳವಣಿಗೆಯನ್ನು ಹಾನಿಗೊಳಿಸುತ್ತದೆ ಎಂದು ಎಂಪಿಸಿ ಒತ್ತಿ ಹೇಳಿದೆ’’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ರೆಪೋ ಎನ್ನುವುದು ಕೇಂದ್ರ ಬ್ಯಾಂಕ್ ಬ್ಯಾಂಕ್‌ಗಳಿಗೆ ಅಲ್ಪಾವಧಿಯ ಹಣವನ್ನು ನೀಡುವ ದರವಾಗಿದೆ. ಈ ದರದಲ್ಲಿನ ಬದಲಾವಣೆಗಳು ಸಾಮಾನ್ಯವಾಗಿ ವಿಶಾಲವಾದ ಬ್ಯಾಂಕಿಂಗ್ ವ್ಯವಸ್ಥೆಗೆ ರವಾನೆಯಾಗುತ್ತದೆ. ಪ್ರಸ್ತುತ ದರ ಏರಿಕೆ ಚಕ್ರದಲ್ಲಿ ಹಣಕಾಸು ನೀತಿ ಸಮಿತಿ ರೆಪೋ ದರವನ್ನು 140 ಮೂಲಾಂಕದಷ್ಟು ಹೆಚ್ಚಿಸಿದೆ. ರೆಪೋ ದರ ಏರಿಕೆ ನಿರೀಕ್ಷಿತವೇ ಆಗಿದ್ದರೂ, ಇದರಿಂದ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿದೆ.
ಹೆಚ್ಚಿನ ಚಿಲ್ಲರೆ ಹಣದುಬ್ಬರದ ಹಿನ್ನೆಲೆಯಲ್ಲಿ ಹೆಚ್ಚಿನ ಅರ್ಥಶಾಸ್ತ್ರಜ್ಞರು 25-50 ಬೇಸಿಸ್ ಪಾಯಿಂಟ್‌ನಷ್ಟು ದರ ಏರಿಕೆಯನ್ನು ಅಂದಾಜಿಸಿದ್ದರು. ಹಣದುಬ್ಬರ ಈಗಾಗಲೇ ಸಾಮಾನ್ಯ ಜನರನ್ನು ನೋಯಿಸುತ್ತಿದ್ದು, ಈಗಾಗಲೇ, ಹಣಕಾಸು ನೀತಿ ಸಮಿತಿ ಈ ದರ ಚಕ್ರದಲ್ಲಿ ಇಲ್ಲಿಯವರೆಗೆ ರೆಪೋ ದರವನ್ನು 90 ಮೂಲಾಂಕದಷ್ಟು ಹೆಚ್ಚಿಸಿದೆ.ಚಿಲ್ಲರೆ ಹಣದುಬ್ಬರವು ಸತತ ಎರಡು ತ್ರೈಮಾಸಿಕಗಳಲ್ಲಿ ಸರಾಸರಿ 6 ಪ್ರತಿಶತಕ್ಕಿಂತ ಹೆಚ್ಚಿದ್ದು, ಒಂದು ವೇಳೆ ಸತತ ಮೂರು ತ್ರೈಮಾಸಿಕಗಳವರೆಗೆ ಹಣದುಬ್ಬರವು ಆ ಮಟ್ಟಕ್ಕಿಂತ ಹೆಚ್ಚಿದ್ದರೆ, MPC ಈ ಬಗ್ಗೆ ಸರ್ಕಾರಕ್ಕೆ ವೈಫಲ್ಯವನ್ನು ವಿವರಿಸಬೇಕಾಗುತ್ತದೆ.
ಇನ್ನೊಂದೆಡೆ, ಆರ್ಥಿಕ ವರ್ಷ 2023 ಕ್ಕೆ ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6.7 ರಷ್ಟು ಹಾಗೂ ನೈಜ GDP ಬೆಳವಣಿಗೆಯನ್ನು 7.2 ರಷ್ಟು ಅಂದಾಜು ಮಾಡಿದೆ. ಸದ್ಯದ ಚಿಲ್ಲರೆ ಹಣದುಬ್ಬರ ತುಂಬಾ ಹೆಚ್ಚಿದ್ದು, ಜೂನ್‌ನಲ್ಲಿ ಹಣದುಬ್ಬರವು ಮೇ ತಿಂಗಳಲ್ಲಿ 7.04 ಪ್ರತಿಶತದಿಂದ 7.01 ಪ್ರತಿಶತಕ್ಕೆ ಸ್ವಲ್ಪಮಟ್ಟಿಗೆ ಕುಸಿದಿದ್ದರೆ, ಆರ್‌ಬಿಐ ಈ ವಿಚಾರದಲ್ಲಿ ಶೇ. 2 ರಿಂದ ಶೇ. 6 ರಷ್ಟು ಸಹಿಷ್ಣುತೆಯ ಶ್ರೇಣಿಯನ್ನು ಹೊಂದಿದೆ.
ಆರ್‌ಬಿಐನ ದರ ನಿಗದಿ ಸಮಿತಿಯಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಯ ಕುರಿತು ಚರ್ಚಿಸಲು ಆಗಸ್ಟ್ 3 ರಿಂದ ಮೂರು ದಿನಗಳ ಕಾಲ ಸಭೆ ಸೇರಿತ್ತು.”ಹಣದುಬ್ಬರವನ್ನು ಗುರಿಯೊಳಗೆ ಇರಿಸಿಕೊಳ್ಳಲು ಗಮನ ಹರಿಸಲು ಎಂಪಿಸಿ ನಿರ್ಧರಿಸಿದೆ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಸ್ಥಾಯಿ ಠೇವಣಿ ಸೌಲಭ್ಯ (SDF) ದರವನ್ನು 5.15 ಪ್ರತಿಶತಕ್ಕೆ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಹಾಗೂ ಬ್ಯಾಂಕ್ ದರವನ್ನು 5.65 ಪ್ರತಿಶತಕ್ಕೆ ಹೊಂದಿಸಲಾಗಿದೆ ಎಂದು MPC ನಿರ್ಧರಿಸಿತು.
2022-23 ರ ನೈಜ GDP ಬೆಳವಣಿಗೆಯ ಅಂದಾಜನ್ನು Q1 – ಶೇ. 16.2, Q2 – ಶೇ. 6.2, Q3 – ಶೇ. 4.1 ಮತ್ತು Q4 – ಶೇ. 4 ಅಪಾಯಗಳೊಂದಿಗೆ ಶೇ. 7.2 ರಲ್ಲಿ ಉಳಿಸಿಕೊಳ್ಳಲಾಗಿದೆ. ಇದಲ್ಲದೆ, Q1 2023-24 ರ ನೈಜ GDP ಬೆಳವಣಿಗೆಯನ್ನು ಶೇ. 6.7 ಎಂದು ನಿರೀಕ್ಷಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.