ವಾಣಿಜ್ಯ

ಭಾರತದ ಆರ್ಥಿಕತೆ ಶೇ. 6.5 ರಷ್ಟು ಬೆಳವಣಿಗೆ ನಿರೀಕ್ಷೆ

2023-24ನೇ ವರ್ಷದ ಆರ್ಥಿಕ ಸಮೀಕ್ಷೆ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7 ಮತ್ತು 2021-22 ರ ಆರ್ಥಿಕ ವರ್ಷದಲ್ಲಿ ಶೇಕಡಾ 8.7ಕ್ಕೆ ಹೋಲಿಸಿದರೆ, ದೇಶದ ಆರ್ಥಿಕತೆಯ ಬೆಳವಣಿಗೆ 2023-24 ರ ಸಾಲಿನಲ್ಲಿ ಶೇಕಡಾ 6.5ಕ್ಕೆ ಕುಗ್ಗುವ ನಿರೀಕ್ಷೆ ಇದೆ ಎಂದು 2023-24ರ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 6.8 ಹಣದುಬ್ಬರ ಏರಿಕೆ ಖಾಸಗಿ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ ಅಥವಾ ಹೂಡಿಕೆಯನ್ನು ದುರ್ಬಲಗೊಳಿಸುವಷ್ಟು ಕಡಿಮೆಯಾಗಿಲ್ಲ ಎಂದು ಸೀತಾರಾಮನ್ ದೇಶದ ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟರು.

ಕೇಂದ್ರ ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಿದ್ಧಪಡಿಸಿದ ಮತ್ತು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಮುನ್ನ ಆರ್ಥಿಕ ಸಮೀಕ್ಷೆಯ ದಾಖಲೆಗಳನ್ನು ಇಂದು ಲೋಕಸಭೆಯಲ್ಲಿ ವಿತ್ತ ಸಚಿವೆ ಮಂಡಿಸಿದರು. ದೇಶದ ಆರ್ಥಿಕತೆಯ ಸ್ಥಿತಿ ಮತ್ತು ಪ್ರಸ್ತುತ ಹಣಕಾಸಿನ ವಿವಿಧ ಸೂಚಕಗಳ ಒಳನೋಟಗಳನ್ನು ಆರ್ಥಿಕ ಸಮೀಕ್ಷೆ ನೀಡುತ್ತದೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಸ್ವಲ್ಪಮಟ್ಟಿನ ಕುಸಿತವನ್ನು ಕಾಣಬಹುದು ಎಂದು ಇಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ಶೇಕಡಾ 6.8 ರಿಂದ ಶೇಕಡಾ 6.1 ಕ್ಕೆ ಯೋಜಿಸಿದೆ.

ಐಎಂಎಫ್‌  ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನ ಜನವರಿ ನವೀಕರಣವನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಜಾಗತಿಕ ಬೆಳವಣಿಗೆಯು 2022 ರಲ್ಲಿ ಅಂದಾಜು 3.4 ಶೇಕಡಾದಿಂದ 2023 ರಲ್ಲಿ 2.9 ಶೇಕಡಾಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ, ನಂತರ 2024 ರಲ್ಲಿ 3.1 ಶೇಕಡಾಕ್ಕೆ ಏರಿಕೆಯಾಗುತ್ತದೆ ಎಂದು ಹೇಳಿದೆ.

2022 ರಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯು 2022-23 ರಲ್ಲಿ ಭಾರತದ GDP ಬೆಳವಣಿಗೆಯನ್ನು ಶೇಕಡಾ 8ರಿಂದ ಶೇಕಡಾ 8.5 ಎಂದು ಅಂದಾಜಿಸಿದೆ, ಇದು ವ್ಯಾಪಕವಾದ ಕೋವಿಡ್ ಲಸಿಕೆ ಪೂರೈಕೆ, ದೃಢವಾದ ರಫ್ತು ಬೆಳವಣಿಗೆ ಮತ್ತು ಲಭ್ಯತೆಗಳನ್ನು ಅವಲಂಬಿಸಿದೆ ಎಂದು ಸರ್ಕಾರ ಭಾವಿಸಿದೆ. ಬಂಡವಾಳ ವೆಚ್ಚ, ದೇಶದ ಉದ್ಯೋಗ ಪ್ರಮಾಣವನ್ನು ಕೂಡ ಒಳಗೊಂಡಿದೆ.

ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಕೇಂದ್ರ ವಾರ್ಷಿಕ ಬಜೆಟ್ ಮಂಡನೆಗೆ ಮುನ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವುದು ಸಂಪ್ರದಾಯ. ಅದರಂತೆ ಮೊದಲ ಆರ್ಥಿಕ ಸಮೀಕ್ಷೆಯು 1950-51ರಲ್ಲಿ ಅಸ್ತಿತ್ವಕ್ಕೆ ಬಂದಿತು, ಅದು ಬಜೆಟ್ ದಾಖಲೆಗಳ ಭಾಗವಾಗಿತ್ತು. 1960 ರ ದಶಕದಲ್ಲಿ, ಇದನ್ನು ಬಜೆಟ್ ದಾಖಲೆಗಳಿಂದ ಪ್ರತ್ಯೇಕಿಸಿ ಕೇಂದ್ರ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಮಂಡಿಸಲಾಯಿತು.

ನಾಳೆ ಮಂಡನೆಯಾಗಲಿರುವ ಬಜೆಟ್ 2023ರಲ್ಲಿ 2024ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಮುಂದಿನ ಲೋಕಸಭೆ ಚುನಾವಣೆಯೊಂದಿಗೆ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿರಬಹುದು. ಈ ಬಾರಿ ಬಜೆಟ್ ದಾಖಲೆಗಳು ಆಂಡ್ರಾಯ್ಡ್ ಮತ್ತು ಆಪಲ್ ಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ‘ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ನಲ್ಲಿ ಲಭ್ಯವಿರುತ್ತವೆ.

 

lokesh

Recent Posts

ವಿದ್ಯುತ್ ಸ್ಪರ್ಶ: ಲೈನ್‌ಮ್ಯಾನ್ ಕಾರ್ತಿಕ್‌ ಸ್ಥಿತಿ ಗಂಭೀರ, ಆದರೆ ಸ್ಥಿರ: ವೈದ್ಯರಿಂದ ಮಾಹಿತಿ

ಮೈಸೂರು: ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದ ಲೈನ್‌ಮ್ಯಾನ್ ಕಾರ್ತಿಕ್ ಅವರ ಆರೋಗ್ಯ ಸ್ಥಿತಿ ಗಂಭೀರ, ಆದರೆ ಸ್ಥಿರವಾಗಿದೆ ಎಂದು ವೈದ್ಯರು…

42 mins ago

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ರಾಜೀನಾಮೆ

ವಿಜಯಪುರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದಕ್ಕೆ…

56 mins ago

ನಿರೋಡಿ ನಿಧನ; ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಾಂತ್ರಿಕ ಗಾಯಕ ಪಂಡಿತ್ ಇಂದೂಧರ ನಿರೋಡಿ ಮಂಗಳವಾರ ಮಹಾರಾಷ್ಟ್ರದ ಪನವೇಲ್‌ನಲ್ಲಿ ನಿಧನರಾದರು. ಅವರು ಕೆಲ ವರ್ಷಗಳ…

4 hours ago

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

8 hours ago

ಮಣ್ಣಾದ ಸತ್ಯಕ್ಕೆ ಮರುಜೀವ

ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…

8 hours ago

ಓದುಗರ ಪತ್ರ: ವಿವೇಕವಿದ್ದರೆ ಮಾರಕವೂ ಪೂರಕ!

ಸಮಾಜಕ್ಕೆ ವಿeನಿಗಳು ನೀಡಿರುವ, ನೀಡುತ್ತಿರುವ ಅಪಾರವಾದ ಕೊಡುಗೆಯಿಂದಾಗಿ ತಂತ್ರeನದ ಕ್ರಾಂತಿಯ ಜೊತೆಗೆ ನಾನಾ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಜಗತ್ತಿನ ಅಭಿವೃದ್ಧಿ…

9 hours ago