ವಾಣಿಜ್ಯ

ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತ ಹೊರಕ್ಕೆ : ಇದರಿಂದ ನಮಗೆಷ್ಟು ಒಳಿತು?

ನವದೆಹಲಿ : ಅಮೆರಿಕದ ಖಜಾನೆ ಇಲಾಖೆ  ತನ್ನ ಕರೆನ್ಸಿ  ಮೇಲ್ವಿಚಾರಣೆ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿದೆ. ಭಾರತದ ಜೊತೆಗೆ ಇಟಲಿ, ಮೆಕ್ಸಿಕೋ, ಥೈಲ್ಯಾಂಡ್ ಹಾಗೂ ವಿಯೆಟ್ನಾಂ ಅನ್ನು ಕೂಡ ಪಟ್ಟಿಯಿಂದ ತೆಗೆಯಲಾಗಿದೆ.  ಈ ಸಂಬಂಧ ಶುಕ್ರವಾರ ಅಮೆರಿಕದ ಖಜಾನೆ ಇಲಾಖೆ  ಮಾಹಿತಿ ನೀಡಿದೆ. ಕಳೆದ ಎರಡು ವರ್ಷಗಳ ಬಳಿಕ ಕರೆನ್ಸಿ ಮೇಲ್ವಿಚರಣೆ ಪಟ್ಟಿಯ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದ ಭಾರತವನ್ನು ಕೈ ಬಿಡಲಾಗಿದೆ. ಈ ಪಟ್ಟಿ ದೇಶಗಳ ಕರೆನ್ಸಿ ಅಭ್ಯಾಸಗಳು ಹಾಗೂ ಸ್ಥೂಲ ಆರ್ಥಿಕ ನೀತಿಗಳನ್ನು ಹತ್ತಿರದಿಂದ ಗಮನಿಸಲು ನೆರವು ನೀಡುತ್ತದೆ.ಚೀನಾ, ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರ ಹಾಗೂ ತೈವಾನ್ ಪ್ರಸ್ತುತ ಮೇಲ್ವಿಚರಣಾ ಪಟ್ಟಿಯಲ್ಲಿರುವ ಏಳು ಆರ್ಥಿಕತೆಗಳು ಎಂದು  ಅಮೆರಿಕದ ಕಾಂಗ್ರೆಸ್ ಗೆ ಸಲ್ಲಿಕೆ ಮಾಡಿದ ದ್ವಿವಾರ್ಷಿಕ ವರದಿಯಲ್ಲಿ ದೇಶದ ಖಜಾನೆ ಇಲಾಖೆ ಮಾಹಿತಿ ನೀಡಿದೆ. ಭಾರತ ಸೇರಿದಂತೆ ಐದು ರಾಷ್ಟ್ರಗಳು ಪಟ್ಟಿಯಲ್ಲಿ ಸ್ಥಾನ ಪಡೆಯಲು ನಿಗದಿಪಡಿಸಿರುವ ಮೂರು ಮಾನದಂಡಗಳಲ್ಲಿ ಕೇವಲ ಒಂದನ್ನಷ್ಟೇ ಪೂರ್ಣಗೊಳಿಸಲು ಶಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಐದು ರಾಷ್ಟ್ರಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.

ಪಟ್ಟಿಯ ಎರಡು ವರದಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಐದು ರಾಷ್ಟ್ರಗಳು ಒಂದು ಮಾನದಂಡಗಳನ್ನು ಪೂರೈಸಿವೆ. ಆದರೆ, ಸ್ವಿಜರ್ ಲ್ಯಾಂಡ್ ಮಾತ್ರ ಮೂರರಲ್ಲಿಒಂದೂ ಮಾನದಂಡಗಳನ್ನು ಪೂರೈಸಿಲ್ಲ ಎಂದು ಖಜಾನೆ ಇಲಾಖೆ ಮಾಹಿತಿ ನೀಡಿದೆ.  ಈ ವರದಿ ಸಿದ್ಧಪಡಿಸಲು ಅಮೆರಿಕದ ಖಜಾನೆ ಇಲಾಖೆ ಅಮೆರಿಕದ ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರಗಳ ನೀತಿಗಳನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿದೆ. ಸುಮಾರು ಶೇ.80ರಷ್ಟು ಅಮೆರಿಕದ ಸರಕು ಹಾಗೂ ಸೇವೆಗಳ ವಿದೇಶಿ ವ್ಯಾಪಾರವನ್ನು ನಾಲ್ಕು ತ್ರೈಮಾಸಿಕಗಳ ಅವಧಿಯಲ್ಲಿ ಪರಿಶೀಲಿಸಲಾಗಿದೆ.

ಇದರಿಂದ ಭಾರತಕ್ಕೆ ಎಷ್ಟು ಒಳಿತು??
ಅಮೆರಿಕದ ಕರೆನ್ಸಿ ಮೇಲ್ವಿಚರಣೆ ಪಟ್ಟಿಯಲ್ಲಿ ಒಂದು ರಾಷ್ಟ್ರವಿದ್ದಾಗ ಅದನ್ನು ‘ಕರೆನ್ಸಿ ನಿಯಂತ್ರಕ’ ಎಂದು ಪರಿಗಣಿಸಲಾಗುತ್ತದೆ. ವ್ಯಾಪಾರದ ಲಾಭಕ್ಕಾಗಿ ‘ಅನ್ಯಾಯದ ಕರೆನ್ಸಿ ಅಭ್ಯಾಸ’ ಗಳಲ್ಲಿ ತೊಡಗಿರುವ ರಾಷ್ಟ್ರಗಳಿಗೆ ಅಮೆರಿಕದ ಸರ್ಕಾರಿ ಪ್ರಾಧಿಕಾರ ಈ ಸ್ಥಾನಮಾನ ನೀಡುತ್ತದೆ. ಒಂದರ್ಥದಲ್ಲಿ ಈ ಪಟ್ಟಿಯಿಂದ  ಕೈಬಿಟ್ಟಿರೋದು ಭಾರತದ ಪಾಲಿಗೆ ಉತ್ತಮ ಬೆಳವಣಿಗೆಯೇ ಆಗಿದೆ. ‘ಭಾರತವನ್ನು ಅಮೆರಿಕದ ಕರೆನ್ಸಿ ನಿಯಂತ್ರಣ ಪಟ್ಟಿಯಿಂದ ಹೊರಗಿಟ್ಟಿರೋದ್ರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈಗ ವಿನಿಮಯ ದರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಕರೆನ್ಸಿ ನಿಯಂತ್ರಕ ಎಂಬ ಪಟ್ಟವಿದ್ರೆ ಇದು ಸಾಧ್ಯವಿಲ್ಲ. ಮಾರುಕಟ್ಟೆ ಆಯಾಮದಲ್ಲಿ ಗಮನಿಸಿದರೆ ಇದು ಭಾರತಕ್ಕೆ ದೊಡ್ಡ ಜಯ. ಅಲ್ಲದೆ, ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾತ್ರ ಬೆಳೆಯುತ್ತಿರೋದರ ಸಂಕೇತವಾಗಿದೆ’ ಎಂದು ಗ್ರ್ಯಾಂಟ್ ಥೋರಂಟನ್ ಭಾರತ್  ಸಂಸ್ಥೆಯ ಪಾಲುದಾರ ವಿವೇಕ್ ಐಯರ್ ಅಭಿಪ್ರಾಯ ಪಟ್ಟಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ನಡುವೆಯೇ ವಿನಿಮಯ ದರವನ್ನು ನಿರ್ವಹಿಸಲು ಆರ್ ಬಿಐ ಇತ್ತೀಚೆಗೆ ಅತ್ಯಧಿಕ ಒಳಹರಿವಿನ ಸಮಯದಲ್ಲಿ ಡಾಲರ್ ಗಳನ್ನು ಖರೀದಿಸುವ ಹಾಗೂ ಹೊರಹರಿವಿನ ಸಮಯದಲ್ಲಿ ಡಾಲರ್ ಮಾರಾಟ ಮಾಡುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಇನ್ನು ಮುಂದೆ ಈ ನಿಟ್ಟಿನಲ್ಲಿ ಸ್ವತಂತ್ರ ನಿರ್ಣಯಗಳನ್ನು ಕೈಗೊಳ್ಳುವುದು ಆರ್ ಬಿಐಗೆ ಹೆಚ್ಚು ಸುಲಭವಾಗಲಿದೆ.
ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯು ಸಾಕಷ್ಟು ತೊಂದರೆಯಲ್ಲಿ ಸಿಲುಕಿದೆ. ಪೂರೈಕೆ ಸರಪಳಿಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ ಕೂಡ. ಹೀಗಾಗಿ ಭಾರತದಂತಹ ಆರ್ಥಿಕತೆಗಳು ಕರೆನ್ಸಿ ಚಲಾವಣೆ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸೋದು ಅಗತ್ಯವಾಗಿದೆ.

andolana

Share
Published by
andolana

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

3 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

3 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

3 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

4 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

4 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

4 hours ago