ವಾಣಿಜ್ಯ

ಹಣಕೊಡದೇ ಟಿಕೆಟ್‌ ಪಡೆದು ರೈಲಿನಲ್ಲಿ ಪ್ರಯಾಣಿಸಿ…

ನವದೆಹಲಿ : ಟಿಕೆಟ್ ಗೆ ಕಾಸಿಲ್ಲದಿದ್ದರೂ ರೈಲಿನಲ್ಲಿ ಪ್ರಯಾಣಿಸುವ ಅವಕಾಶವನ್ನು ರೈಲ್ವೆ ಇಲಾಖೆ ನೀಡಿದೆ. ಆದರೆ, ನೀವು ಕ್ಯಾಷ್ ಇ ಪಾವತಿ ಆಯ್ಕೆ ಬಳಸಿ ಐಆರ್ ಟಿಸಿ ಆ್ಯಪ್ ನಲ್ಲಿ ಟಿಕೆಟ್ ಕಾಯ್ದಿರಿಸಬೇಕು, ಆದರೆ ಹಣವನ್ನು ಆಗಲೇ ಪಾವತಿಸಬೇಕಿಲ್ಲ, ಬದಲಿಗೆ ನಂತರ ಇಎಂಐ ಮೂಲಕ ಪಾವತಿ ಮಾಡಬಹುದು. ‘ಈಗ ಪ್ರಯಾಣಿಸಿ, ಆಮೇಲೆ ಪಾವತಿಸಿ’ ಎಂಬ ಈ ಹೊಸ ಯೋಜನೆಯನ್ನು ಭಾರತೀಯ ರೈಲ್ವೆ ಇಲಾಖೆಯ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು ಹಣಕಾಸು ಸೇವೆಗಳನ್ನು ಒದಗಿಸುವ ಕ್ಯಾಶ್ ಇ ಸಂಸ್ಥೆ ಸಹಯೋಗದಲ್ಲಿ ಪರಿಚಯಿಸಿದೆ. ಈ ಸೇವೆಯು ರೈಲ್ವೆ ಇಲಾಖೆಯ ಐಆರ್ ಸಿಟಿಸಿ ಟ್ರಾವೆಲ್ ಆ್ಯಪ್ ನಲ್ಲಿ ಕ್ಯಾಶ್ ಇ ಪಾವತಿ ಆಯ್ಕೆ ಮೂಲಕ ಟಿಕೆಟ್ ಬುಕ್ ಮಾಡಿ ಹಣವನ್ನು 3 ಅಥವಾ 6 ತಿಂಗಳ ಅವಧಿಯ ತನಕದ ಇಎಂಐ ಮೂಲಕ ಪಾವತಿಸುವ ಅವಕಾಶವನ್ನು ಕಲ್ಪಿಸಿದೆ. ಇಎಂಐ ಪಾವತಿ ಆಯ್ಕೆಯು ಐಆರ್ ಸಿಟಿಸಿ ಟ್ರಾವೆಲ್  ಆ್ಯಪ್ ನಲ್ಲಿ ಕಾಯ್ದಿರಿಸಿದ ಹಾಗೂ ತತ್ಕಾಲ ಟಿಕೆಟ್ ಗಳ ಬುಕ್ಕಿಂಗ್ ಗೆ ಇರುವ ಚೆಕ್ ಔಟ್ ಪುಟದಲ್ಲಿದೆ.

ಕ್ಯಾಶ್ ಇಯ ಟಿಎನ್ ಪಿಎಲ್ ಇಎಂಐ ಪಾವತಿ ಆಯ್ಕೆ ಈ ಸೌಲಭ್ಯವನ್ನು ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ಎಲ್ಲ ಬಳಕೆದಾರರು ಬಳಸಲು ಅನುವು ನೀಡಿದೆ. ಹೀಗಾಗಿ ಕ್ಯಾಶ್ ಇ ಟಿಎನ್ ಪಿಎಲ್ ಇಎಂಐ ಆಯ್ಕೆಯನ್ನು ಪ್ರಯಾಣಿಕರು ಸುಲಭವಾಗಿ ಬಳಸಿಕೊಳ್ಳಬಹುದು. ಐಆರ್ ಟಿಸಿ ಆ್ಯಪ್ 9 ಕೋಟಿ ಬಾರಿ ಡೌನ್ ಲೋಡ್ ಆಗಿದೆ. ಇದರ ಮೂಲಕ ಪ್ರತಿ ದಿನ 15 ಲಕ್ಷ ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಲಾಗುತ್ತಿದೆ.

‘ಐಆರ್ ಸಿಟಿಸಿ ನೆರವಿನಿಂದ ಇದು ಭಾರತದ ಅತೀದೊಡ್ಡ ಈಗ ಪ್ರಯಾಣಿಸಿ ನಂತರ ಪಾವತಿಸಿ ಎಂಬ ಇಎಂಐ ಪಾವತಿ ವ್ಯವಸ್ಥೆಯಾಗಿದೆ. ಐಆರ್ ಸಿಟಿಸಿ ಜೊತೆಗಿನ ನಮ್ಮ ಸಹಯೋಗ ದೇಶದಲ್ಲಿ ಡಿಜಿಟಲ್ ಇಎಂಐ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆಯಾಗಿದೆ. ಈ ಸಹಭಾಗಿತ್ವವು ಕ್ಯಾಶ್ ಇಗೆ ಐಆರ್ ಸಿಟಿಸಿಯ ಲಕ್ಷಾಂತರ ಗ್ರಾಹಕರನ್ನು ತಲುಪಲು ಹಾಗೂ ಅವರಿಗೆ ಈ ಹಿಂದೆ ಎಂದೂ ಸಿಗದ ಹಾಗೂ ಈಗ ಆರಾಮದಾಯಕವಾಗಿ ಪ್ರಯಾಣಿಸಿ ನಂತರ ಅವರ ರೈಲ್ವೆ ಟಿಕೆಟ್ ಗೆ ಇಎಂಐ ಮುಖಾಂತರ ಹಣ ಪಾವತಿಸುವ ಅವಕಾಶ ಕಲ್ಪಿಸಿದೆ’ ಎಂದು ಕ್ಯಾಶ್ ಇ ಸಂಸ್ಥಾಪಕ ಅಧ್ಯಕ್ಷ ವಿ.ರಮಣ್ ಕುಮಾರ್ ತಿಳಿಸಿದ್ದಾರೆ.

ಕ್ಯಾಶ್ ಇ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಈಗ ಟಿಕೆಟ್ ಖರೀದಿಸಿ ನಂತರ ಪಾವತಿ ಮಾಡುವ ಆಯ್ಕೆ ನೀಡಿದ್ರೆ ಮೋಸ ಹೋಗುವ ಸಾಧ್ಯತೆ ಇಲ್ವಾ? ಎಂಬ ಪ್ರಶ್ನೆಯೂ ಮೂಡಬಹುದು. ಕ್ಯಾಶ್ ಇ ಕೃತಕ ಬುದ್ಧಿಮತ್ತೆ ಆಧಾರಿತ ಅಲ್ಗೊರಿಥಮ್ ಪ್ಲ್ಯಾಟ್ ಫಾರ್ಮ್ ನಲ್ಲಿ ಸೋಷಿಯಲ್ ಲೋನ್ ಕೋಟಿಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ SLQ ಸಾಲಗಾರನ ಪಾವತಿ ಸಾಮರ್ಥ್ಯವನ್ನು ಆತನ ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ದತ್ತಾಂಶಗಳ ಆಧಾರದಲ್ಲಿ ಗ್ರಹಿಸುತ್ತದೆ. ಆ ಬಳಿಕ ಆತ ಇಎಂಐ ಸೌಲಭ್ಯ ಪಡೆಲು ಅರ್ಹ ಹೌದು, ಅಲ್ಲ ಎಂಬುದನ್ನು ನಿರ್ಧರಿಸುತ್ತದೆ. ಇಎಂಐ ಮೂಲಕ ರೈಲ್ವೆ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆ ತುರ್ತು ಸಂದರ್ಭದಲ್ಲಿ ಅನೇಕ ರೈಲ್ವೆ ಪ್ರಯಾಣಿಕರಿಗೆ ನೆರವಾಗೋದರಲ್ಲಿ ಸಂಶಯವಿಲ್ಲ.

andolana

Share
Published by
andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago