ವಾಣಿಜ್ಯ

ತಮಿಳುನಾಡಿನಲ್ಲಿ ಐಫೋನ್ ಉತ್ಪಾದನೆ ಆರಂಭಿಸಿದ ಫಾಕ್ಸ್‌ಕಾನ್‌

ಚೆನ್ನೈ‌ : ಆಪಲ್‌ ಇಂಕ್‌ ತಮಿಳುನಾಡಿನಲ್ಲಿ ಐಫೋನ್-15ರ ಉತ್ಪಾದನೆ ಪ್ರಾರಂಭಿಸಿದೆ. ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಘಟಕವು ಶ್ರೀಪೆರಂಬದೂರಿನಲ್ಲಿರುವ ಉತ್ಪಾದನೆಗೆ ಬೇಕಾದ ಎಲ್ಲ ಸಿದ್ಧತೆ ಆರಂಭಿಸಿದೆ.

ಈ ಮೂಲಕ ಭಾರತ ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ಅಂತರವನ್ನು ಮತ್ತಷ್ಟು ಕಡಿಮೆಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹೊಸ ಐಫೋನ್ ಬಿಡುಗಡೆ ದಿನಾಂಕವನ್ನ ಸೆಪ್ಟೆಂಬರ್ 12 ರಂದು ಘೋಷಿಸುವ ಸಾಧ್ಯತೆಯಿದೆ.

ಚೀನಾದ ಘಟಕಗಳು ಹೊಸ ಸಾಧನಗಳ ಪೂರೈಕೆ ಆರಂಭಿಸಿದ್ದು, ಇದಾದ ಒಂದು ವಾರಗಳ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಆಪಲ್‌ ಕಂಪನಿಯು ಭಾರತದಲ್ಲಿ ತಯಾರಾಗುವ ಹೊಸ ಐಫೋನ್‌ಗಳ ವಾಲ್ಯೂಮ್‌ ಅನ್ನು ತ್ವರಿತವಾಗಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಐಫೋನ್ 14 ಉತ್ಪಾದನೆಗೂ ಮುನ್ನ ಆಪಲ್‌ ಭಾರತದಲ್ಲಿ ತನ್ನ ಐಫೋನ್‌ಗಳನ್ನ ಒಂದು ಭಾಗವನ್ನು ಜೋಡಣೆ ಮಾತ್ರ ಮಾಡುತ್ತಿತ್ತು. ಚೀನಾಕ್ಕೆ ಹೋಲಿಸಿದರೆ ಉತ್ಪಾದನೆ 6 ರಿಂದ 9 ತಿಂಗಳವರೆಗೆ ಹಿಂದುಳಿದಿತ್ತು. ಕಳೆದ ಒಂದು ವರ್ಷದಿಂದ ಈ ವಿಳಂಬವನ್ನ ಕಡಿಮೆಗೊಳಿಸಲಾಗಿದೆ. ಮಾರ್ಚ್‌ ಅಂತ್ಯದಲ್ಲಿ ಆಪಲ್ 7% ಐಫೋನ್‌ ಉತ್ಪನ್ನಗಳನ್ನ ಭಾರತದಲ್ಲೇ ಉತ್ಪಾದಿಸಿದೆ. ಈ ವರ್ಷ ಈ ಅಂತರವನ್ನು ಪೂರ್ತಿಯಾಗಿ ತೊಡೆದು ಹಾಕುವ ಗುರಿಯನ್ನು ಕಂಪನಿ ಹೊಂದಿದೆ. ಇದು ಭಾರತದ ಐಫೋನ್ 15 ಉತ್ಪಾದನೆಯ ಪ್ರಮಾಣವು ಹೆಚ್ಚಾಗಿ ಆಮದು ಮಾಡಿಕೊಳ್ಳುವ ಬಿಡಿಭಾಗಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಜೊತೆಗೆ ಚೆನ್ನೈನ ಹೊರಗಿರುವ ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿನ ಉತ್ಪಾದನಾ ಮಾರ್ಗಗಳ ಸುಗಮ ತಯಾರಿಯನ್ನೂ ಅವಲಂಬಿಸಿರುತ್ತದೆ.

ಹೊಸ ಐಫೋನ್ ಬಿಡುಗಡೆ ದಿನಾಂಕವನ್ನು ಸೆಪ್ಟೆಂಬರ್ 12 ರಂದು ಘೋಷಿಸುವ ಸಾಧ್ಯತೆಯಿದೆ. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾಧನಕ್ಕೆ ಸಂಬಂಧಿಸಿದಂತೆ ಮೊದಲ ಅಪ್‌ಡೇಟ್ ಸಿಗಲಿದೆ. ನವೀಕೃತ ಕ್ಯಾಮೆರಾ ಸಿಸ್ಟಮ್‌, ಪ್ರೊ ಮಾದರಿಗಳಲ್ಲಿ ಸುಧಾರಿತ 3-ನ್ಯಾನೊಮೀಟರ್ ಎ16 ಪ್ರೊಸೆಸರ್ ಇರಲಿದೆ. ಭಾರತದಲ್ಲಿನ ಇತರ ಆಪಲ್ ಪೂರೈಕೆದಾರರಾದ ಪೆಗಾಟ್ರಾನ್ ಕಾರ್ಪ್ ಮತ್ತು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡಿರುವ ವಿಸ್ಟ್ರಾನ್ ಕಾರ್ಪ್ ಘಟಕವೂ ಶೀಘ್ರದಲ್ಲೇ ಐಫೋನ್ 15ರ ಜೋಡಣೆ ಆರಂಭಿಸಲಿದೆ ಎಂದು ತಿಳಿದುಬಂದಿದೆ.

ಆಪಲ್ ಭಾರತ ದೇಶದಾದ್ಯಂತ ಹೂಡಿಕೆ ಮಾಡಲು ಹಾಗೂ ಹೂಡಿಕೆ ಹೆಚ್ಚಿಸಲು ಬದ್ಧವಾಗಿದೆ ಎಂದು ಸಿಇಒ ಟಿಮ್ ಕುಕ್ ಅವರು ಏಪ್ರಿಲ್‌ನಲ್ಲಿ ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಮೋದಿ ಭೇಟಿ ಬಳಿಕ ಹೇಳಿದ್ದರು.

lokesh

Share
Published by
lokesh

Recent Posts

ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳಿವರು…

ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…

8 hours ago

ಹೆಬ್ಬಾಳಿನಲ್ಲಿ ಡ್ರಗ್ಸ್‌ ಲ್ಯಾಬ್‌ ಶಂಕೆ : ಶೆಡ್‌ವೊಂದರ ಮೇಲೆ ಎನ್‌ಸಿಬಿ ದಾಳಿ

ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…

8 hours ago

ನಿಗಮ ಮಂಡಳಿ | ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ

ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…

8 hours ago

ಡಿಜಿಟಲ್‌ ಅರೆಸ್ಟ್‌ ಕುತಂತ್ರ : 1 ಕೋಟಿ ವಂಚನೆ

ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…

8 hours ago

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ಇನ್ನಿಲ್ಲ ; ಬೆಂಗಳೂರು ಚಲೋ ಮುಂದೂಡಿಕೆ

ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್‌ ಸುಬ್ಬರಾವ್‌ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…

9 hours ago

ಮೈಸೂರು | ಮೃಗಾಲಯದ ಯುವರಾಜ ಸಾವು

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…

9 hours ago