ವಾಣಿಜ್ಯ

ಅಮೇರಿಕಾದ ಕಾರ್ನಿಂಗ್‌ನಿಂದ ಭಾರತದಲ್ಲಿ ಕಾರ್ಖಾನೆ ಸ್ಥಾಪನೆ

ಚೆನ್ನೈ : ಐಫೋನ್ ಗಳಿಗೆ ಗೊರಿಲ್ಲಾ ಗ್ಲಾಸ್‌ ಪೂರೈಕೆ ಮಾಡುವ ಅಮೇರಿಕಾ ಮೂಲದ ಕಾರ್ನಿಂಗ್‌ ಸಂಸ್ಥೆಯು ಭಾರತ ದೇಶದಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ.
ಎಕನಾಮಿಕ್ ಟೈಮ್ಸ್‌ ವರದಿಯ ಪ್ರಕಾರ ಕಾರ್ನಿಂಗ್‌ ಕಂಪನಿಯು ತಮಿಳುನಾಡಿನಲ್ಲಿ ಗೊರಿಲ್ಲಾ ಗ್ಲಾಸ್‌ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಶ್ರೀ ಪೆರುಂಬುದೂರಿನ ಬಳಿ ಇರುವ ಪಿಳ್ಳೈಪ್ಪಾಕ್ಕಂನಲ್ಲಿ 1000 ಕೋಟಿ ರೂ. ಬಂಡವಾಳದಲ್ಲಿ ಕಾರ್ಖಾನೆ ಆರಂಭವಾಗಲಿದೆ. ಈ ಕಾರ್ಖಾನೆಯಲ್ಲಿ 300 ಜನರಿಗೆ ಉದ್ಯೋಗಾವಕಾಶ ಇರಲಿದೆ ಎಂದು ಹೇಳಲಾಗುತ್ತಿದೆ.
ಇದೇ ಮೊದಲ ಬಾರಿಗೆ ಕಾರ್ನಿಂಗ್‌ ಕಂಪನಿಯು ಭಾರತ ದೇಶಕ್ಕೆ ಪ್ರವೇಶ ಮಾಡುತ್ತಿದೆ. ಕೆಲ ತಿಂಗಳುಗಳ ಹಿಂದೆ ಕಾರ್ನಿಂಗ್‌ ಕಂಪನಿಯು  ತಮ್ಮಲ್ಲಿ ಹೂಡಿಕೆ ಮಾಡಲಿದೆ ಎಂದು ತೆಲಂಗಾಣ ಸರ್ಕಾರ ಹೇಳಿತ್ತು. ಬ್ಯುಸಿನೆಸ್‌ ಸ್ಟಾಂರ್ಡ್‌ ನಲ್ಲಿ ಬಂದಿದ್ದ ವರದಿಯ ಪ್ರಕಾರ ಭಾರತದ ಆಪ್ಟೀಮಸ್‌ ಇನ್ಪ್ರಾಕಾಮ್‌ ಹಾಗೂ ಅಮೇರಿಕಾದ ಕಾರ್ನಿಂಗ್‌ ಸಂಸ್ಥೆಗಳು ಜೊತೆಯಾಗಿ ಉನ್ನತ ಗುಣಮಟ್ಟದ ಸ್ಮಾರ್ಟ್‌ ಫೋನ್‌ ಕವರ್‌ ಗ್ಲಾಸ್‌ ಫ್ಯಾಕ್ಟರಿಯನ್ನು ಆರಂಭಿಸಬಹುದು. 2024 ರ ಕೊನೆಯ ಒಳಗೆ ಈ ಘಟಕಗಳು ತಮ್ಮ ಕಾರ್ಯವನ್ನು ಶುರು ಮಾಡಬಹುದು ಎಂದಿತ್ತು.
ಆಪಲ್‌ ಐಫೋನ್‌ ಅಸೆಂಬ್ಲಿಂಗ್‌ ಮಾಡುವ ಫಾಕ್ಸ್ ಕಾನ್‌ ಹಾಗೂ ಪೆಗಾಟ್ರಾನ್‌ ನ ಘಟಕಗಳು ತಮಿಳುನಾಡಿನಲ್ಲಿಯೇ ಇರುವುದರಿಂದ ತೆಲಂಗಾಣದ ಬದಲಾಗಿ ತಮಿಳುನಾಡಿನಲ್ಲಿ ಗೊರಿಲ್ಲಾ ಗ್ಲಾಸ್‌ ಉತ್ಪಾದನಾ ಘಟಕ ಪ್ರಾರಂಭ ಮಾಡಲು ಕಾರ್ನಿಂಗ್‌ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮುಂಬರುವ 2024 ರ ಜನವರಿ ತಿಂಗಳಿನಲ್ಲಿ ನಡೆಯಲಿರುವ ಗ್ಲೋಬಲ್‌ ಇನ್ವೆಸ್ಟರ್‌ ಮೀಟ್‌ ನಲ್ಲಿ ತಮಿಳುನಾಡು ಸರ್ಕಾರ ಹಾಗೂ ಕಾರ್ನಿಂಗ್‌ ಕಂಪನಿಯ ನಡುವೆ ಒಪ್ಪಂದ ನಡೆಯುವ ಸಾಧ್ಯತೆಗಳಿವೆ. ಒಪ್ಪಂದದ ಬಳಿಕ ಗೊರಿಲ್ಲಾ ಗ್ಲಾಸ್‌ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಒಂದು ವರ್ಷಗಳ ಕಾಲಾವಕಾಶ ಬೇಕಾಗಬಹುದು.
lokesh

Share
Published by
lokesh

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

2 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

3 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago