ಕಾರ್ಮಿಕರ/ಉದ್ಯೋಗಿಗಳ ಭವಿಷ್ಯ ನಿಧಿ ( ಇಪಿಎಫ್ ) ಠೇವಣಿ ಮೇಲಿನ 2023-24ನೇ ಸಾಲಿನ ಬಡ್ಡಿ ದರವನ್ನು ಶೇ.8.25ರಷ್ಟು ನಿಗದಿಪಡಿಸಲಾಗಿದೆ. ಇದು ಕಳೆದ 3 ವರ್ಷಗಳಲ್ಲಿದ್ದ ಬಡ್ಡಿ ದರಕ್ಕೆ ಹೋಲಿಸಿದರೆ ಗರಿಷ್ಠವಾಗಿದೆ.
2023ರಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು 2022 – 23ನೇ ಸಾಲಿನ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ. 8.15ಗೆ ನಿಗದಿಪಡಿಸಿತ್ತು. 2021-22 ಸಾಲಿನಲ್ಲಿ ಈ ಬಡ್ಡಿ ದರ ಶೇ. 8.10ರಷ್ಟಿತ್ತು. ಇನ್ನು 2020-21ರಲ್ಲಿ ಇದು ಶೇ. 8.5ರಷ್ಟಿತ್ತು.
ಈ ಕುರಿತಾಗಿ ಕಾರ್ಮಿಕ ಇಲಾಖೆ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ʼಆರ್ಥಿಕ ವರ್ಷ 2024ಕ್ಕೆ ಮಂಡಳಿಯು ಈ ವರ್ಷ ಇಪಿಎಫ್ ಸದಸ್ಯರ ಖಾತೆಗಳಿಗೆ 1.07 ಲಕ್ಷ ಕೋಟಿ ರೂಪಾಯಿಗಳನ್ನು ಹಂಚಲು ನಿರ್ಧರಿಸಿದೆ. ಈ ಹಣವು 13 ಲಕ್ಷ ಕೋಟಿ ರೂಪಾಯಿಗೆ ಬಂದ ಬಡ್ಡಿ ದರವಾಗಿದೆ. ಕಳೆದ ಸಾಲಿನಲ್ಲಿ 11.02 ಲಕ್ಷ ಕೋಟಿ ರೂಪಾಯಿಗೆ 91.15 ಸಾವಿರ ಕೋಟಿ ರೂಪಾಯಿ ಬಡ್ಡಿ ಲಭಿಸಿತ್ತುʼ ಎಂದು ತಿಳಿಸಿದೆ.
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…
ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ…
ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಆನೆಗಳ ಹಿಂಡು; ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ: ಸಮೀಪದ ಅರಣ್ಯ ಪ್ರದೇಶದಿಂದ…
ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ…