ವಾಣಿಜ್ಯ

ಡಾಲರ್ ಎದುರು ರೂಪಾಯಿ ದರ ಚೇತರಿಕೆ.. 8 ಪೈಸೆ ಏರಿಕೆಯಾಗಿ 81.25ಕ್ಕೆ ಸ್ಥಿರ

ಮುಂಬೈ: ಡಾಲರ್​ ಎದುರು ಸತತವಾಗಿ ದುರ್ಬಲಗೊಂಡು ತೀವ್ರ ನಷ್ಟ ಅನುಭವಿಸಿದ್ದ ರೂಪಾಯಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 8 ಪೈಸೆಯಷ್ಟು ಹೆಚ್ಚಳವಾಗಿ ಚೇತರಿಕೆ ದಾಖಲಿಸಿದೆ. ಸದ್ಯ ಡಾಲರ್​ ಎದುರು ಭಾರತದ ರೂಪಾಯಿ 81.25 ರಷ್ಟಿದೆ.
2 ದಿನಗಳ ಹಿಂದೆ ರೂಪಾಯಿ ಮೌಲ್ಯ ಡಾಲರ್ ಎದುರು 7 ಪೈಸೆ ಇಳಿಕೆಯಾಗಿ 81.33ಕ್ಕೆ ಕುಸಿದಿತ್ತು. ಇಂದು ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ 81.26 ರಲ್ಲಿ ವಹಿವಾಟು ಆರಂಭಿಸಿತು. ನಂತರ ಅದು 81.25 ಕ್ಕೆ ತಲುಪಿ ಅತ್ಯಲ್ಪ ಚೇತರಿಕೆ ಕಂಡಿತು. ಆರಂಭಿಕ ವಹಿವಾಟು ಮುಕ್ತಾಯಕ್ಕೂ ಮೊದಲು ರೂಪಾಯಿ 8 ಪೈಸೆಯಷ್ಟು ಏರಿಕೆಯನ್ನು ದಾಖಲಿಸಿತು.ಈ ಮಧ್ಯೆ ವಿವಿಧ ರಾಷ್ಟ್ರಗಳ ಆರು ಕರೆನ್ಸಿಗಳ ಮುಂದೆ ಡಾಲರ್ ಶೇಕಡಾ 0.37 ರಷ್ಟು ಕುಸಿದು 104.15 ಕ್ಕೆ ತಲುಪಿದೆ. ವಿದೇಶಿ ವಿನಿಮಯ ವ್ಯಾಪಾರಿಗಳು ದೇಶೀಯ ಷೇರುಗಳ ಮೇಲೆ ಹೂಡಿಕೆ ಹೆಚ್ಚಿಸಿದ ಕಾರಣ ರೂಪಾಯಿ ತುಸು ಏರಿಕೆ ಕಂಡಿದೆ.
ಕಚ್ಚಾ ತೈಲ ದರ ಏರಿಕೆ: ರೂಪಾಯಿ ದರ ಇಳಿಕೆ ಕಂಡ ಬೆನ್ನಲ್ಲೇ, ಜಾಗತಿಕ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಶೇಕಡಾ 1.05 ರಷ್ಟು ಏರಿಕೆ ಕಂಡು 86.47 ರಷ್ಟಿದೆ.ಸೆನ್ಸೆಕ್ಸ್​ ಪಾಯಿಂಟ್ಸ್​ ಕುಸಿತ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 139.99 ಪಾಯಿಂಟ್ ಕುಸಿತ ಕಂಡು 62,728.51 ಕ್ಕೆ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 22.60 ಪಾಯಿಂಟ್‌ ಇಳಿದು 18,673.50 ಕ್ಕೆ ತಲುಪಿದೆ.

andolanait

Share
Published by
andolanait

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

14 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

14 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

15 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

15 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

18 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

24 hours ago