ಮೈಸೂರು : IIMR – ICAR ನ ನ್ಯೂಟ್ರಿಹಬ್ ಆಯೋಜಿಸಿದ್ದ ನ್ಯೂಟ್ರಿ ಕನ್ವೆನ್ಸನ್ ನಲ್ಲಿ ಆಹಾರ ಉತ್ಪನ್ನಗಳ ತಯಾರಿಕಾ ಕಂಪನಿಯಾದ ನೆಸ್ಲೆ ಇಂಡಿಯಾ ಅತ್ಯುತ್ತಮ ಉದ್ಯಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮೈಸೂರಿನಲ್ಲಿ IIMR – ICAR ನ ನ್ಯೂಟ್ರಿ ಹಬ್ ಆಯೋಜನೆ ಮಾಡಿದ್ದ ಅಂತರಾಷ್ಟ್ರೀಯ ನ್ಯೂಟ್ರಿ ಸೀರಿಯಲ್ ಕನ್ವೆನ್ಸನ್ 5.0 ರಲ್ಲಿ ನೆಸ್ಲೆ ಇಂಡಿಯಾ ಕಂಪನಿಯು ಅತ್ಯುತ್ತಮ ಉದ್ಯಮ ಪ್ರಾಡಕ್ಟ್ ಇನ್ನೋವೇಶನ್ ಫಾರ್ ಮೇನ್ ಸ್ಟರೀಮಿಂಗ್ ಮಿಲ್ಲೆಟ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಇನ್ನು ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ನೆಸ್ಲೆ ಇಂಡಿಯಾ ಕಂಪನಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ನಾರಾಯಣ್ ಅವರು ಅತ್ಯುತ್ತಮ ಉದ್ಯಮ ಪ್ರಾಡಕ್ಟ್ ಇನ್ನೋವೇಶನ್ ಫಾರ್ ಮೇನ್ ಸ್ಟರೀಮಿಂಗ್ ಮಿಲ್ಲೆಟ್ಸ್ ಅವಾರ್ಡ್ ಪಡೆಯುತ್ತಿರುವುದಕ್ಕೆ ನೆಸ್ಲೆ ಇಂಡಿಯಾಗೆ ಹೆಮ್ಮೆ ಅನ್ನಿಸುತ್ತಿದೆ. ನೆಸ್ಲೆ ಇಂಡಿಯಾಗೆ ಈ ಪ್ರಶಸ್ತಿ ಲಭಿಸಿರುವುದು ಆಹಾರ ಉದ್ಯಮದಲ್ಲಿನ ಉತ್ಕೃಷ್ಟತೆ ಹಾಗೂ ನಾವೀನ್ಯತೆಗೆ ಸಂಸ್ಥೆ ಹೊಂದಿರುವ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಲವು ಕಂಪನಿಗಳ ಉತ್ಪಾದಕರು, ನೀತಿ ನಿರೂಪಕರು, ಉತ್ಪನ್ನಗಳ ಸಂಸ್ಕರಣಾಕಾರರು, ಶಿಕ್ಷಣ ತಜ್ಞರು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಇನ್ಕ್ಯೂಬೇಟರ್ ಗಳು, ಸ್ಟಾರ್ಟಪ್ ಗಳು, ಮೈಕ್ರೋ ಉದ್ಯಮಿಗಳು, ಮಿಲೆಟ್ಸ್ ಪರಿಸರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಎನ್‌ಜಿಒಗಳು ಸೇರಿದಂತೆ ಹಲವಾರು ಕ್ಷೇತ್ರಗಳ ಪರಿಣಿತರು ಭಾಗಿಯಾಗಿದ್ದರು.
ನೆಸ್ಲೆ ಇಂಡಿಯಾ ಕಂಪನಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಉತ್ಪನ್ನಗಳ ರುಚಿಯ ಜೊತೆಗೆ ಬದಲಾಗುತ್ತಿರುವ ಜೀವನ ಶೈಲಿಗೆ ತಕ್ಕಂತೆ ಗ್ರಾಹಕರ ಅಗತ್ಯತೆಗಳನ್ನು ಸಮರ್ಪಕವಾಗಿ ಪೂರೈಸುತ್ತಾ ಬಂದಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ನೀಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದೆ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…