ಇಂದು ( ನವೆಂಬರ್ 30 ) ವರ್ಷದ ಹನ್ನೊಂದನೇ ತಿಂಗಳು ಮುಕ್ತಾಯಗೊಳ್ಳಲಿದ್ದು, ನಾಳೆಯಿಂದ ವರ್ಷದ ಅಂತಿಮ ತಿಂಗಳು ಶುರುವಾಗಲಿದೆ. ಹಲವಾರು ಮಂದಿ ವರ್ಷದ ಕೊನೆಯ ತಿಂಗಳನ್ನು ಎಂಜಾಯ್ ಮಾಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಪ್ಲಾನ್‌ನಲ್ಲಿದ್ದಾರೆ. ಇನ್ನು ಈ ತಿಂಗಳು ಮುಕ್ತಾಯವಾಗುವ ಜತೆ ಕೆಲ ಪ್ರಮುಖ ಕಾರ್ಯಗಳ ಅವಧಿಯೂ ಸಹ ಮುಕ್ತಾಯವಾಗುವ ಸಾಧ್ಯತೆಗಳಿವೆ.
ಹೌದು, ಉಚಿತ ಆಧಾರ ತಿದ್ದುಪಡಿ, ಬ್ಯಾಂಕ್ ಲಾಕರ್ ಒಪ್ಪಂದ ನವೀಕರಣ, ಮ್ಯೂಚುವಲ್ ಫಂಡ್ ಹಾಗೂ ಮತ್ತು ಡಿಮ್ಯಾಟ್ ಖಾತೆಯ ನಾಮಿನೇಷನ್‌ಗೆ ನೀಡಲಾಗಿರುವ ಗಡುವು ಈ ತಿಂಗಳಲ್ಲಿ ಮುಕ್ತಾಯವಾಗಲಿದೆ. ಹಾಗಿದ್ದರೆ ಈ ಎಲ್ಲಾ ಕಾರ್ಯಗಳಿಗೆ ಅಂತಿಮ ದಿನಾಂಕ ಯಾವಾಗ ಎಂಬ ಮಾಹಿತಿ ತಿಳಿಯಬೇಕೆಂದರೆ ಈ ಕೆಳಗಿನ ವಿವರವನ್ನು ಓದಿ..
ಉಚಿತ ಆಧಾರ್ ಅಪ್‌ಗ್ರೇಡ್
ಆಧಾರ್ ಕಾರ್ಡ್‌ನಲ್ಲಿನ ನಿಮ್ಮ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಇದೇ ಡಿಸೆಂಬರ್ 14 ಕೊನೆಯ ದಿನವಾಗಿದೆ. ವಿಶಿಷ್ಟ ಗುರುತಿನ ಪ್ರಾಧಿಕಾರ ಈ ದಿನಾಂಕವನ್ನು ಕೊನೆಯ ದಿನಾಂಕ ಎಂದು ಗಡುವು ನೀಡಿದ್ದು ಹತ್ತು ವರ್ಷಗಳ ಹಳೆಯ ಆಧಾರ್ ಕಾರ್ಡ್‌ಗಳನ್ನು ಅಪ್‌ಡೇಟ್ ಮಾಡಿಸಿಕೊಳ್ಳುವಂತೆ ತಿಳಿಸಿತ್ತು. ಈ ಹಿಂದೆ ಹಲವಾರು ಬಾರಿ ಇದೇ ರೀತಿ ಕೊನೆಯ ದಿನಾಂಕ ಎಂಬ ಗಡುವು ನೀಡಲಾಗಿತ್ತಾದರೂ ಅವಧಿ ಮತ್ತಷ್ಟು ವಿಸ್ತರಣೆಯಾಗುತ್ತಾ ಬಂದಿತ್ತು. ಆದರೆ ಈ ಬಾರಿ ಕೊನೆಯ ದಿನವಾಗುವ ಸಾಧ್ಯತೆಯಿದೆ.
ಲಾಕರ್ ಠೇವಣಿ
ಲಾಕರ್ ಠೇವಣಿ ಹೊಂದಿರುವವರ ಜತೆಗೆ ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕಲು ಡಿಸೆಂಬರ್ 31 ಕೊನೆಯ ದಿನಾಂಕ ಎಂದು ಆರ್‌ಬಿಐ ಗಡುವು ನೀಡಿದೆ.
ಮ್ಯೂಚುವಲ್ ಫಂಡ್, ಡಿಮ್ಯಾಟ್ ನಾಮಿನೇಷನ್
ಮ್ಯೂಚುವಲ್ ಫಂಡ್ ಹಾಗೂ ಡಿಮ್ಯಾಟ್ ಖಾತೆ ಹೊಂದಿರುವವರು ನಾಮಿನಿಗಳನ್ನು ಆಯ್ಕೆ ಮಾಡಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿರಲಿದೆ. ಈ ಹಿಂದೆ ಸೆಪ್ಟೆಂಬರ್ 30 ಈ ನಾಮಿನೇಷನ್ ಮಾಡಲು ಕೊನೆಯ ದಿನಾಂಕ ಎಂದು ಸೆಬಿ ತಿಳಿಸಿತ್ತು ಹಾಗೂ ಬಳಿಕ ಗಡುವನ್ನು ಡಿಸೆಂಬರ್ 31ರವರೆಗೂ ವಿಸ್ತರಣೆ ಮಾಡಲಾಗಿತ್ತು. ಇನ್ನು ಈ ಬಾರಿ ನಾಮಿನೇಷನ್ ಮಾಡದಿದ್ದರೆ ಖಾತೆ ನಿಷ್ಕ್ರಿಯಗೊಳ್ಳಲಿದೆ ಎಂದೂ ಸಹ ಸೆಬಿ ತಿಳಿಸಿದೆ.
ಇನ್‌ಆಕ್ಟಿವ್ ಯುಪಿಐ ಐಡಿಗಳು
ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಗೂಗಲ್‌ಪೇ, ಫೋನ್‌ಪೇ, ಪೇಟಿಎಂ ಹಾಗೂ ಬ್ಯಾಂಕ್ ಯುಪಿಐಗಳಂತಹ ಪಾವತಿ ಅಪ್ಲಿಕೇಶನ್‌ಗಳಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಈ ಕೆಲಸಕ್ಕೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…